ಇದು ಪಕ್ಕಾ ಸರ್ಕಾರಿ ಶಾಲೆಯ ಹುಡುಗಿ ಡ್ಯಾನ್ಸ್ ಅನಿಸುತ್ತೆ, ಎಲ್ಲರ ಮದ್ಯದಲ್ಲೇ ಧೂಳೆಬ್ಬಿಸಿದ ಸರ್ಕಾರಿ ಶಾಲೆಯ ಹುಡುಗಿ!!!
ಡಾನ್ಸ್ ಶಬ್ದ ಕೇಳಿದರೇನೇ ಕೆಲವರಿಗೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತೆ ಅನುಭವ ಆಗುತ್ತದೆ. ಡಾನ್ಸ್ ಎಂದರೆ ಅಷ್ಟೊಂದು ಪ್ರೀತಿ. ಅದರಲ್ಲೂ ಪುರುಷರಿಗಿಂತ ಸ್ತ್ರೀಯರಿಗೆ ಡಾನ್ಸ್ ನಲ್ಲಿ ಎಲ್ಲಿಲ್ಲದ ಆಸಕ್ತಿ ಕಂಡು ಬರುತ್ತದೆ. ಇಲ್ಲಿ ಎಲ್ಲ ವರ್ಗದ ಸ್ತ್ರೀಯರಿಗೂ ಕುಣಿತವೆಂದರೆ ತುಂಬಾ ಇಷ್ಟವಾಗುತ್ತದೆ. ಇತ್ತಿತ್ತಲಾಗಿ ಇನ್ಸ್ಟಾಗ್ರಾಮ್ ನಂತಹ ಸೋಷಿಯಲ್ ಸೈಟ್ ಗಳಿಂದಾಗಿ ಎಲ್ಲರೂ ತಮ್ಮಲ್ಲಿರುವ ಸೂಪ್ತ ಹಾಗೂ ವಿಶೇಷ ಗುಣಗಳನ್ನು ಸಮಾಜದ ಮುಂದೆ ತೋರಲು ಇಷ್ಟಪಡುತ್ತಿದ್ದಾರೆ. ಅದರಲ್ಲಿ ಡಾನ್ಸ್ ಸಹ ಒಂದು.
ಸದ್ಯ ಸೋಷಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಹುಡುಗಿಯ ಡಾನ್ಸ್ ನ ಸಖತ್ ವಿಡಿಯೋ ಒಂದು ಟ್ರೆಂಡಿಂಗ್ ನಲ್ಲಿದೆ. ಈ ವಿಡಿಯೋದಲ್ಲಿ ಯಾವುದೋ ಒಂದು ಕಾರ್ಯಕ್ರಮದಲ್ಲಿ ಡ್ಯಾನ್ಸ್ ಪ್ರೋಗ್ರಾಮ್ ನಡೆದಿರುತ್ತೆ. ಅಲ್ಲಿ ಎಲ್ಲ ಮಹಿಳೆಯರು, ಯುವತಿಯರು ಕೂಡಿಕೊಂಡು ಡ್ಯಾನ್ಸ್ ಮಾಡುತ್ತಿರುತ್ತಾರೆ. ಅಷ್ಟರಲ್ಲಿ ಹಠಾತ್ ಆಗಿ ಒಬ್ಬ ಸರ್ಕಾರಿ ಶಾಲೆಯ ಹುಡುಗಿ ಎಂಟ್ರಿ ಮಾಡುತ್ತಾಳೆ. ಡ್ಯಾನ್ಸ್ ಮಾಡುವ ಜಾಗದಲ್ಲಿ ಎಂಟ್ರಿ ಮಾಡುತ್ತಿದ್ದಂತೆಯೇ ಆಕೆ ಸಹ ಡ್ಯಾನ್ಸ್ ಮಾಡಲು ಶುರು ಮಾಡುತ್ತಾಳೆ. ಆ ಹುಡುಗಿ ಮಾಡುತ್ತಿರುವ ಡ್ಯಾನ್ಸ್ ನೋಡಿ ಅಲ್ಲಿದ್ದ ಎಲ್ಲ ಜನರು ಬಾಯಿಮೇಲೆ ಬೆರಳಿಟ್ಟು ನೋಡಲು ಶುರು ಮಾಡುತ್ತಾರೆ. ಅಷ್ಟಕ್ಕೂ ಆ ಹುಡುಗಿ ಮಾಡಿರುವ ಪ್ರತಿಯೊಂದು ಸ್ಟೆಪ್ ಒಬ್ಬ ಪ್ರೊಫೆಷನಲ್ ಡ್ಯಾನ್ಸರ್ ಸಹ ಮಾಡಲು ಸಾಧ್ಯವಿಲ್ಲ ಅಂತಹ ಅದ್ಬುತವಾದ ಸ್ಟೆಪ್ ಗಳು ಈ ಹುಡುಗಿ ಹಾಕಿದ್ದಾಳೆ. ಈ ಹುಡುಗಿಯ ಸ್ಟೆಪ್ ನೋಡಿ ಈಕೆ ಪಕ್ಕಾ ಸರ್ಕಾರಿ ಶಾಲೆಯ ಹುಡುಗಿಯಾಗಿದ್ದಾಳೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ವೀಡಿಯೋ ನೋಡಿ.
View this post on Instagram
ಈ ಅದ್ಭುತವಾದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸದ್ಯಕ್ಕೆ ತುಂಬಾನೇ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ sastus.point ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಎರಡು ಮಿಲಿಯನ್ ಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಆರು ಲಕ್ಷಕ್ಕಿಂತ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ.