Video; ಗುಲಾಬಿ ಬಣ್ಣದ ಡ್ರೆಸ್ ನಲ್ಲಿ ಹುಡುಗ-ಹುಡುಗಿಯು ಕೂಡಿ ಮಾಡಿದ ಡಾನ್ಸ್ ಆಯಿತು ಸಖತ್ ವೈರಲ್!

ಮನಸ್ಸಿನಲ್ಲಿರುವ ಭಾವನೆಗಳನ್ನು ವ್ಯಕ್ತ ಮಾಡಲು ನೃತ್ಯ ಇದೊಂದು ಒಳ್ಳೆಯ ಮಾಧ್ಯಮವಾಗಿದೆ. ಇತ್ತೀಚೆಗಂತೂ ಹದಿಹರೆಯದ ಹುಡುಗ-ಹುಡುಗಿಯರು ಪ್ರತಿಯೊಂದು ಕಾರ್ಯದಲ್ಲಿ ಸ್ವಲ್ಪವಾದರೂ ನೃತ್ಯವನ್ನು ಸೇರಿಸಿಯೇ ಇರುತ್ತಾರೆ. ಕುಣಿತಕ್ಕೆ ನೋಡುಗರ ಮನಸ್ಸು ಸಹ ಸ್ಪಂದಿಸುವ ಹಾಗಿದ್ದರೆ ಆ ನೃತ್ಯವು ಇನ್ನಷ್ಟು ಸುಂದರವಾಗಿ ಕಾಣುತ್ತದೆ.

ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹದಿಹರೆಯದ ಹುಡುಗ ಮತ್ತು ಹುಡುಗಿ ತುಂಬಾ ಸಕತ್ತಾಗಿ ಡಾನ್ಸ್ ಮಾಡಿದ್ದಾರೆ. ಅವರು ಡಾನ್ಸ್ ಗಾಗಿ ಹಿಂದಿ ಬಾಲಿವುಡ್ ಸಾಂಗ್ ಒಂದನ್ನು ಆರಿಸಿಕೊಂಡಿದ್ದಾರೆ. ಪ್ರಸ್ತುತ ಹಾಡು ಕರೀನಾ ಕಪೂರ್ ಮತ್ತು ಇಮ್ರಾನ್ ಖಾನ್ ಅವರ ಮೇಲೆ ಚಿತ್ರಿತವಾಗಿತ್ತು. ಈ ಹಾಡಿಗೆ ಇಬ್ಬರೂ ಸುಂದರವಾಗಿ ಚಿಕ್ಕದೇ ಆದರೂ ತುಂಬಾ ಶಿಸ್ತಿನಿಂದ ಹೆಜ್ಜೆಗಳನ್ನು ಹಾಕಿ ನೋಡುಗರಿಗೆ ಮೋಡಿ ಮಾಡಿದ್ದಾರೆ. ಈ ಹಾಡಿಗಾಗಿ ಅವರು ತೊಟ್ಟ ವಿಶೇಷ ಗುಲಾಬಿ ಬಣ್ಣದ ಉಡುಪುಗಳು ಮಾತ್ರ ನಿಜಕ್ಕೂ ನೋಡುಗರ ಕಣ್ಣುಗಳನ್ನು ಕೊರೈಸುತ್ತಿವೆ. ಒಟ್ಟಿನಲ್ಲಿ ಇಬ್ಬರ ಡ್ಯಾನ್ಸ್ ತುಂಬಾ ಸುಂದರವಾಗಿ ಹೆಣೆದಿದೆ ಎನ್ನಬಹುದು.

ವಿಡಿಯೋ ನೋಡಿ

 

View this post on Instagram

 

A post shared by Mukul Gain💫 (@mukulgain.official)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ನೃತ್ಯ ಮಾಡಿದವರು ಡಾನ್ಸ್ ರಿಯಾಲಿಟಿ ಶೋ ಆದ ಡಾನ್ಸ್ ಇಂಡಿಯಾ ಡಾನ್ಸ್ -7 ಈ ಡಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರಾಗಿದ್ದಾರೆ.