VIDEO : ದಲ್ಲಾಳಿಯ ಮಾತು ಕೇಳಿ ಸಂತೆ ನಡೆಸಿದವರ ಮೇಲೆ ಪೊಲೀಸರ ಚಾರ್ಜ್ : ದಿಕ್ಕೆಟ್ಟು ಓಡಿದ ಜನ, ವಿಡಿಯೊ ನೋಡಿ
ರಾಜ್ಯದಲ್ಲಿ ಲಾಕ್ ಡೌನ್ ಇರುವುದು ಗೊತ್ತಿದ್ದೂ ಸಂತೆ ನಡೆಸಿದವರಿಗೆ ಪೋಲಿಸರು ಮನಸೊ ಇಚ್ಚೆ ಥಳಿಸಿದ್ದಾರೆ. ಹಾವೇರಿ ಜಿಲ್ಲೆಯ ಗುತ್ತಲದಲ್ಲಿ ಘಟನೆ ನಡೆದಿದ್ದು, ಪೊಲಿಸರ ವರ್ತನೆಯನ್ನು ತುಂಬಾ ಜನ ಖಂಡಿಸುತ್ತಿದ್ದಾರೆ. ಆದರೆ ಸಂತೆ – ಜಾತ್ರೆ ನಡೆಸಲು ಅವಕಾಶವಿಲ್ಲ ಎಂದೂ ಗೊತ್ತಿದ್ದೂ ಸಂತೆ ನಡೆಸಿ ನೂರಾರು ಜನ ಗುಂಪುಗೂಡಿದ್ದು ಈ ಘಟನೆ ಖಂಡಿಸುವವರಿಗೆ ಕಾಣಿಸುತ್ತಲೇ ಇಲ್ಲ.
ರಾಜ್ಯದ ಎಲ್ಲಕಡೆ ಇಂದಿನಿಂದ ಸಂಪೂರ್ಣ ಲಾಕ್ ಡೌನ್ ವೀದಿಸಲಾಗಿದೆ. ಮಿತಿ ಮೀರುತ್ತಿರುವ ಕೊರೋನ್ ವೈರಸ್ ಹರಡುವಿಕೆಯನ್ನು ತಡೆಯಲು ಸರ್ಕಾರಕ್ಕೆ ಉಳಿದಿದ್ದು ಇದೊಂದೇ ದಾರಿ. ಸುಪ್ರಿಂ ಕೋರ್ಟ್ ನಿಂದ ಹಿಡಿದು ರಾಜ್ಯದ ವಿರೋಧ ಪಕ್ಷಗಳವರೆಗೆ ಎಲ್ಲರೂ ಲಾಕ್ ಡೌನ್ ಮಾಡಲು ಸಲಹೆ ನೀಡಿದ್ದರು. ಅದರಂತೆ ಸರ್ಕಾರ ಲಾಕ್ ಡೌನ್ ಮಾಡಿದೆ.
ಇಂಥ ಕ್ಲಿಷ್ಟಕರ ಪರಸ್ಥಿತಿಯಲ್ಲೂ ಗುತ್ತಲ ಗ್ರಾಮದಲ್ಲಿ ಸಂತೆ ನಡೆಸಿದ್ದು ಸಹಜವಾಗಿ ಪೊಲೀಸರನ್ನು ಕೆರಳಿಸಿತ್ತು. ಸೂಚನೆ ಕೊಟ್ಟ ನಂತರವೂ ಸಂತೆ ನಡೆದಿದ್ದರಿಂದ ಲಾಟಿ ಚಾರ್ಜ್ ಮಾಡಲೇಬೇಕಾಯಿತು. ತರಕಾರಿ ಮಾರಲು ಬಂದವರು ಹಾಗೂ ಕೊಳ್ಳಲು ಬಂದವರು ಪೊಲೀಸರ ಲಾಟಿ ರುಚಿ ನೋಡಬೇಕಾಯಿತು.
ಮಾಹಿತಿಯ ಪ್ರಕಾರ, ಸಂತೆ ನಡೆಸುವ ವಿಚಾರ ವ್ಯಾಪಾರುಗಳಿಗೆ ಇದ್ದಿಲ್ಲ, ಆದರೆ ದಲ್ಲಾಳಿಯೊಬ್ಬ ದುಡ್ಡಿನ ಆಸೆಗೆ ಸಂತೆ ಮಾಡಲು ಹೇಳಿದ್ದ ಎನ್ನಲಾಗುತ್ತಿದೆ. ಇದನ್ನು ಅಲ್ಲಿ ಏಟು ತಿಂದವರೇ ಆಕ್ರೋಶದಿಂದ ಹೇಳಿದ್ದು, ಆ ಬಗ್ಗೆ ಪೊಲೀಸರು ತನಿಖೆ ನಡೆಸಿ ಆ ದಲ್ಲಾಳಿಯ ಮೇಲೆ ಸೂಕ್ತ ಕ್ರಮ ತಗೆದುಕೊಳ್ಳಬೇಕು.
ಸಂತೆ ನಡೆಯಲು ಕಾರಣ ಯಾರು ಎಂದು ಪರಾಮರ್ಶಿಸಿ ಅಂಥವರನ್ನು ಹಿಡಿದು ತಂದು ಅದೇ ಸಂತೆಯಲ್ಲಿ ಭಾರಿಸಬೇಕಿತ್ತು, ಅದು ಬಿಟ್ಟು ಏಕಾಏಕಿ ಜನರ ಮೇಲೆ ದಾಳಿ ನಡೆಸಿದ್ದು ತಪ್ಪು ಅಂತ ತುಂಬಾ ಜನ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಸಿಗಬೇಕಿದೆ. ವಿಡಿಯೊ ಮೇಲಿದೆ ನೋಡಿ.
-Team Infotrend