ಹಾವನ್ನು ಓಡಿಸಲು ಚಪ್ಪಲಿ ಎಸೆದ ಮಹಿಳೆ; ಆ ಚಪ್ಪಲಿಯನ್ನೇ ತೆಗೆದುಕೊಂಡು ಹೋದ ಪುಂಡ ಹಾವು! ನೋಡಿ ಈ ವೈರಲ್ Video ದಲ್ಲಿ.
ಇಂಡಿಯನ್ ಫಾರೆಸ್ಟ್ ಆಫೀಸರ್ ಪ್ರವೀಣ ಕಾಸವಾನ್ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ತುಂಬಾ ಆಶ್ಚರ್ಯಕರ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ತುಂಬಾ ತಮಾಷೆಯ ಘಟನೆಯೊಂದು ನಡೆದ ದೃಶ್ಯವಿದೆ. ಇಲ್ಲಿ ಮನೆಯ ಕಡೆಗೆ ನುಗ್ಗಿ ಬರುತ್ತಿರುವ ಹಾವನ್ನು ತಿರುಗಿ ಓಡಿಸಲು ಮಹಿಳೆಯು ಲಗುಬಗೆಯಲ್ಲಿ ಬೇರೆ ಯಾವ ಉಪಾಯ ಕಾಣದೆ ಬಹುಶಃ ಗಡಿಬಿಡಿಯಲ್ಲಿ ಕೈಗೆ ಸಿಕ್ಕ ಚಪ್ಪಲಿಯನ್ನೇ ಹಾವಿನ ಕಡೆಗೆ ಎಸೆದಿದ್ದಾಳೆ. ಆದರೆ ಅಲ್ಲಿ ತುಂಬಾ ರೋಚಕ ದೃಶ್ಯ ಒಂದು ನಡೆದಿದ್ದು ಆ ದೃಶ್ಯ ಸಂಪೂರ್ಣವಾಗಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರಿಗೆ ತಮ್ಮ ನಗುವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಕಾರಣ ಆ ಹಾವು ತನಗೆ ಯಾವ ಚಪ್ಪಲಿಯಿಂದ ಹೊಡೆಯಲಾಗಿದೆ ಆ ಚಪ್ಪಲಿಯನ್ನೇ ತೆಗೆದುಕೊಂಡು ರೋಷದಿಂದ ಓಡಿ ಹೋಗಿದೆ. ಈ ದೃಶ್ಯ ನೋಡಲು ತುಂಬಾ ಮಜವಾಗಿದೆ. ಈ ವೀಡಿಯೋವನ್ನು ನೋಡಿ ನೆಟ್ಟಿಗರು ತುಂಬಾ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ನೋಡಿ ಈ ವಿಡಿಯೋ…
I wonder what this snake will do with that chappal. He got no legs. Unknown location. pic.twitter.com/9oMzgzvUZd
— Parveen Kaswan, IFS (@ParveenKaswan) November 24, 2022
ಪ್ರವೀಣ ಅವರು ಈ ವೀಡಿಯೋವನ್ನು ಶೇರ್ ಮಾಡುತ್ತಾ ಕ್ಯಾಪ್ಶನ್ ನಲ್ಲಿ, ಈ ಹಾವು ತಾನು ತೆಗೆದುಕೊಂಡು ಹೋದ ಚಪ್ಪಲಿಯನ್ನು ಮಾಡುವುದಾದರೂ ಏನು? ಎಂದು ಪ್ರಶ್ನಿಸಿದ್ದಾರೆ. ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದ್ದು ಈಗಾಗಲೇ ಲಕ್ಷಾವಧಿ ವೀಕ್ಷಣೆಗಳು ದೊರಕಿವೆ.