ಮ್ಯಾಕ್ಸವೆಲ್ ಬಾಯಲ್ಲಿ ಹೊಡಿ ಮಗ ಹೊಡಿ ಮಗ ಹಾಡು : ಕ್ಯೂಟ್ ವಿಡಿಯೊ

ಕೊರೋನ ಕಾಟದಿಂದ ಐಪಿಎಲ್ ಸಸ್ಪೆಂಡ್ ಆಗಿ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟುಮಾಡಿದೆ. ಲಾಕ್ ಡೌನ್ ಸಮಯದಲ್ಲಿ ಮ್ಯಾಚ್ ನೋಡುತ್ತಾ ಮನೆಯಲ್ಲಿ ಕೂರುತ್ತಿದ್ದವರಿಗೆ ಈಗ ಟೈಮ್ ಪಾಸ್ ಮಾಡುವುದೇ ಸವಾಲಾಗಿದೆ. ಮೊದಲು ಕೆಕೆಆರ್ ಆಟಗಾರರಿಗೆ ತಗುಲಿದ ಸೋಂಕು, ನಂತರ ಚೆನೈ ತಂಡಕ್ಕೆ, ಆಮೇಲೆ ದೆಹಲಿ ತಂಡಕ್ಕೆ ಹೀಗೆ ವ್ಯಾಪಿಸತೊಡಗಿತು.

ಈ ಕಾರಣದಿಂದ ಅನಿವಾರ್ಯವಾಗಿ ಸಸ್ಪೆಂಡ್ (ರದ್ದು ಅಲ್ಲ) ನಲ್ಲಿ ಇಡಲೇಬೇಕಿತ್ತು. ಉಳಿದ 31 ಪಂದ್ಯಗಳು ಬಹುಶಃ ಟಿ-20 ವಿಶ್ವಕಪ್ ಆದ ಮೇಲೆ ನಡೆಯಬಹುದು. ಈ ನಡುವೆ ಆಟಗಾರರನ್ನು ಅವರವರ ಊರಿಗೆ ಬೀಳ್ಕೊಡುವ ಇವೇಂಟ್ ನಡೆದವು. ಆರ್ಸಿಬಿ ಆಡಳಿತ ಕೂಡ ತನ್ನ ಆಟಗಾರರನ್ನು ಒಲ್ಲದ ಮನಸ್ಸಿನಿಂದ ಕಳಿಸಿಕೊಡುತ್ತಿದೆ.

ಕೊರೊನಕ್ಕೆ ಹೆದರಿ ಆಸ್ಟ್ರೆಲಿಯಾದ ಕೆವು ಆಟಗಾರರು ಈ ಮೊದಲೇ ತಮ್ಮ ದೇಶಕ್ಕೆ ಮರಳಿದ್ದರೂ ಗ್ಲೇನ್ ಮ್ಯಾಕ್ಸವೆಲ್, ಎಬಿಡಿ, ಕಮಿನ್ಸ್ ರಂಥ ವಿದೇಶಿ ಆಟಗಾರರು ಇಲ್ಲೇ ಉಳಿದಿದ್ದರು. ಈಗ ಅನಿವಾರ್ಯವಾಗಿ ತಮ್ಮ ದೇಶಕ್ಕೆ ಮರಳಬೇಕಿದೆ. ಹೀಗೆ ಬೀಳ್ಕೊಡುವಾಗ ಮ್ಯಾಕ್ಸವೆಲ್ ಗೆ ಕನ್ನಡ ಕಲಿಸುವ ಪ್ರಯತ್ನ ನಡೆಯಿತು.

ಯಾವಾಗಲೂ ಆಟಗಾರರ ಜೊತೆಗಿದ್ದು ಮನರಂಜನೆ ಕೊಡುವ ನಟ ಡ್ಯಾನಿಶ್ ಶೇಟ್ ಅವರು ಮ್ಯಾಕ್ಸವೆಲ್ ಬಾಯಿಂದ ಹೊಡಿ ಮಗ ಹೊಡಿ ಮಗ ಹಾಡು ಹೇಳಿಸಿದರು. ಶಿವಣ್ಣ ಅಭಿನಯದ ಜೋಗಿ ಚಿತ್ರದ ಈ ಹಾಡಿನ ಮೊದಲ ಲೈನನ್ನು ಮಾತ್ರ ಕಲಿಸಿದರು, ಮ್ಯಾಕ್ಸವೆಲ್ ನಡುವೆ ಒಮ್ಮೆ ನಿಂತರಾದರೂ ಅತ್ಯಂತ ಸ್ಪಷ್ಟವಾಗಿ ಹೇಳಿದ್ದು, ಅವರ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

ಟ್ವಿಟರ್ ನಲ್ಲಿ ಭರ್ಜರಿ ವೈರಲ್ ಆಗಿರುವ ಈ ಹಾಡು ಕೇಳಿದ ಕನ್ನಡಿಗರು ಮ್ಯಾಕ್ಸವೆಲ್ ಗೆ ಜೈ ಎಂದಿದ್ದಾರೆ. ಶಿವಣ್ಣನ ಅಭಿಮಾನಿಗಳು ಕೂಡ ತಮ್ಮ ಪ್ರತಿಕ್ರಿಯೆ ನೀಡಿದ್ದು ನಮ್ಮ ಶಿವಣ್ಣನ ಹಾಡು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಒಂದು ಲೈನ್ ಹಾಡಿದ್ದಾರಾದರೂ ಅದು ಹೇಗೆ ಇಷ್ಟೊಂದು ವೈರಲ್ ಆಯಿತೋ!
ವಿಡಿಯೊ ಇಲ್ಲಿದೆ ನೋಡಿ, ಹಾಡು ಮುಗಿದಾದ ಮೇಲೂ ಮ್ಯಾಕ್ಸವೆಲ್ ಜೊತೆಗಿನ ಮಾತು ಮುಂದುವರೆಯುತ್ತದೆ, ಆಸಕ್ತರು ನೋಡಿ.
-Team Infotrend