110 ಸಿಸಿ ಹೋಂಡಾ ಸ್ಕೂಟರ್ ಮೇಲೆ ಭರ್ಜರಿ ಆಫರ್ : 5% ಕ್ಯಾಶ್ ಬ್ಯಾಕ್

ದ್ವಿಚಕ್ರ ವಾಹನ ಕಂಪನಿ ಹೋಂಡಾ ಟೂ ವೀಲರ್ಸ್ ತನ್ನ 110 ಸಿಸಿ ಸ್ಕೂಟರ್ ಹೋಂಡಾ ಡಿಯೊದಲ್ಲಿ ವಿಶೇಷ ರಿಯಾಯಿತಿಯನ್ನು ಪ್ರಕಟಿಸಿದೆ. ಈ ಸ್ಕೂಟರ್‌ನಲ್ಲಿ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದ್ದು, ಅದನ್ನು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಲ್ಲಿ ಮಾತ್ರ ನೀಡಲಾಗುವುದು. ಕ್ಯಾಶ್‌ ಬ್ಯಾಕ್‌ ನ ಲಾಭ ಪಡೆಯಲು ಇಎಂಐ ವಹಿವಾಟು ನಡೆಸಬೇಕು. ಮೇ 1 ರಿಂದ ಜೂನ್ 30 ರವರೆಗೆ ಈ ಆಫರ್ ಪಡೆಯಬಹುದು.

ಹೋಂಡಾ ಡಿಯೋ ಬಿಎಸ್ 6 ಬೆಲೆ :
ಹೋಂಡಾ ಡಿಯೋ ಸ್ಕೂಟರ್ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ವೆರೈಟಿಗಳಲ್ಲಿ ಲಭ್ಯವಿದೆ. ಸ್ಟ್ಯಾಂಡರ್ಡ್ ಬೆಲೆ 63,273 ರೂ., ಡಿಲಕ್ಸ್ ಬೆಲೆ 66,671 ರೂ. (ಎಕ್ಸ್ ಶೋರೂಮ್, ದೆಹಲಿ). ವಿಶೇಷ ಆಫರ್ ಏನೆಂದರೆ ಕಂಪನಿ 5% ಕ್ಯಾಶ್ ಬ್ಯಾಕ್ ಕೊಡುತ್ತಿದೆ.

ಈ ಬೆಲೆಯಲ್ಲಿ ಈ ಸ್ಕೂಟರ್ ಟಿವಿಎಸ್ ಜುಪಿಟರ್ ಮತ್ತು ಹೋಂಡಾ ಆಕ್ಟಿವಾ 6 ಜಿ ಯಂತಹ ಸ್ಕೂಟರ್‌ ಗಳೊಂದಿಗೆ ನೇರ ಸ್ಪರ್ಧೆಯನ್ನು ಮಾಡುತ್ತಿದೆ. ಇದು ಒಂದೇ ಸಿಲಿಂಡರ್ ಬಿಎಸ್ 6 ಕಂಪ್ಲೈಂಟ್ 109.51 ಸಿಸಿಯ ಫ್ಯಾನ್-ಕೂಲ್ಡ್ ಎಂಜಿನ್ ಹೊಂದಿದ್ದು, ಇದು 7.65 ಹೆಚ್‌ಪಿ ಶಕ್ತಿ ಮತ್ತು 9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಂಜಿನ್ ಅನ್ನು ಸಿವಿಟಿ ಗೇರ್‌ ಬಾಕ್ಸ್‌ ಗೆ ಜೋಡಿಸಲಾಗಿದೆ. ಸ್ಕೂಟರ್ 5.3 ಲೀಟರ್ ಇಂಧನ ಟ್ಯಾಂಕ್ ಹೊಂದಿದ್ದು 103 ಕೆಜಿ ತೂಕ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ, ಸ್ಕೂಟರ್‌ನ ಮುಂಭಾಗ ಮತ್ತು ಹಿಂದಿನ ಚಕ್ರಗಳಲ್ಲಿ ಡ್ರಮ್ ಬ್ರೇಕ್‌ ಗಳು ಲಭ್ಯವಿದೆ.
-Team Infotrend