Youtube: ತಿಂಗಳಿಗೆ 15000 ರೂ. ಗಳಿಸಬೇಕಾದರೆ YouTube ಚಾನಲ್ ಗೆ ಸಬ್ ಸ್ಕ್ರೈಬರ್ ಎಷ್ಟಿರಬೇಕು?
ಗೂಗಲ್ ನಂತರ ಅತಿ ಹೆಚ್ಚು ಸರ್ಚ್ ಮಾಡುವ ಸೈಟ್ ಅಂದರೆ ಅದು ಯೂಟ್ಯೂಬ್ ಆಗಿದೆ. ಇನ್ನು ನಮ್ಮ ಭಾರತದಲ್ಲಂತೂ ಈ ಯೂಟ್ಯೂಬ್ ಗೆ ಭೇಟಿ ನೀಡುವವರ ಸಂಖ್ಯೆ ಅಸಂಖ್ಯವಾಗಿದೆ. ಯೂಟ್ಯೂಬ್ ನಲ್ಲಿ ಒಳ್ಳೆಯ ವಿಡಿಯೋಗಳನ್ನು ಅಪ್ಲೋಡ್ ಮಾಡಿ ತಿಂಗಳಿಗೆ ಸುಮಾರು ಹಣವನ್ನು ಗಳಿಸಬಹುದಾಗಿದೆ.

ಈಗಿನ ಯುವಕರು ಹೆಚ್ಚಾಗಿ ಯೂಟ್ಯೂಬ್ ನಲ್ಲಿ ಹಣ ಗಳಿಸುವ ಪ್ಲಾನ್ ಮಾಡಿಯೇ ಮಾಡುತ್ತಾರೆ ಅಥವಾ ಅವರ ಫೋಕಸ್ ಹೆಚ್ಚಾಗಿ ಅದೇ ಕಡೆಗೆ ಇರುತ್ತದೆ.
ಒಂದು ವೇಳೆ ನೀವು ಈ ಕ್ಷೇತ್ರದಲ್ಲಿ ಹೊಸಬರಾಗಿದ್ದರೆ ನಿಮಗೆ ಕೆಲವು ಮಹತ್ವದ ಅಂಶಗಳನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಅದರಲ್ಲಿ ಎಲ್ಲಕ್ಕೂ ಮಹತ್ವದ ಅಂಶ ಏನೆಂದರೆ ಹಣ ಸಂಪಾದಿಸಲು ನಿಮ್ಮ ಚಾನೆಲ್ ಗೆ ಎಷ್ಟೊಂದು ಸಬ್ ಸ್ಕ್ರೈಬರ್ ಇರಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಿ.
ಯೂಟ್ಯೂಬ್ ಚಾನೆಲ್ ಮುಖಾಂತರ ನೀವು ಹಣಗಳಿಸುವ ವಿಚಾರ ಮಾಡುತ್ತಿದ್ದರೆ ಮೊದಲು ನಿಮ್ಮ ಚಾನೆಲ್ ಗೆ Monetization ಪ್ರಾರಂಭವಾಗುವುದು ತುಂಬಾ ಮಹತ್ವದ್ದಾಗಿದೆ. ಇದು ಪ್ರಾರಂಭವಾಗುವ ಸಲುವಾಗಿ ನಿಮ್ಮ ಚಾನೆಲ್ ಗೆ ಕಡಿಮೆ ಎಂದರೆ 1 ಸಾವಿರ ಸಬ್ ಸ್ಕ್ರೈಬರ್ ಹಾಗೂ 4 ಸಾವಿರ Public Hour View ಇರಬೇಕಾಗುತ್ತೆ. ತದನಂತರ ಗೂಗಲ್ ನಿಮಗೆ ಜಾಹೀರಾತುಗಳ ಮುಖಾಂತರ ಹಣ ನೀಡಲು ಶುರು ಮಾಡುತ್ತೆ.
ಇದನ್ನೂ ಓದಿ: ಕುರಿಯ ಮೇಲೆ ಕುಳಿತು ಕಿಂಡಲ್ ಮಾಡ್ತಿದ್ದ, ತಕ್ಕ ಸೇಡು ತೀರಿಸಿಕೊಂಡ ಕುರಿ! ನೋಡಿ ಈ ವೈರಲ್ ವಿಡಿಯೋ!
ನಿಮ್ಮ ಯುಟ್ಯೂಬ್ ಚಾನೆಲ್ ಗೆ 1 ಸಾವಿರ ಸಬ್ ಸ್ಕ್ರೈಬರ್ ಹಾಗೂ 4 ಸಾವಿರ public Hour View ಆಗಿದೆಯೋ ಅಥವಾ ಇಲ್ಲವೋ ಇದನ್ನು ಚೆಕ್ ಮಾಡಲು ಯೂಟ್ಯೂಬ್ ಸ್ಟುಡಿಯೋದ ಸಹಾಯ ತೆಗೆದುಕೊಳ್ಳಬೇಕಾಗುತ್ತದೆ. ನೀವು ನಿಮ್ಮ ಅಕೌಂಟ್ ಮುಖಾಂತರ ಬ್ರೌಸ್ ಮಾಡಿ ಅಥವಾ ಆಪ್ ಡೌನ್ಲೋಡ್ ಮಾಡಿ ಈ ಮಾಹಿತಿಯನ್ನು ಪಡೆಯಬಹುದು.
ಈ ಫೀಚರ್ ಪ್ರಾರಂಭವಾದ ನಂತರ ನಿಮ್ಮ ಒಂದು ವಿಡಿಯೋಗೆ ಎಷ್ಟೊಂದು ವೀಕ್ಷಣೆ ಅಥವಾ ವ್ಯೂವ್ಸ್ ಗಳು ದೊರಕುತ್ತಿವೆ ಎಂಬುದನ್ನು ತಿಳಿದುಕೊಳ್ಳಬಹುದು. ಇಲ್ಲಿಂದ ನಿಮಗೆ ಹಣ ದೊರಕಲು ಪ್ರಾರಂಭವಾಗುತ್ತದೆ. ನಿಮ್ಮ ಚಾನೆಲ್ ಗೆ ಎಷ್ಟು ಹೆಚ್ಚಿಗೆ ವೀಕ್ಷಣೆ ಸಿಗುತ್ತದೆಯೋ ಅಷ್ಟು ನಿಮ್ಮ ಗಳಿಕೆ ಹೆಚ್ಚಾಗುತ್ತದೆ. ಹೀಗಾಗಿ ನಿಮಗೆ ಸಬ್ ಸ್ಕ್ರೈಬರ್ ಎಷ್ಟಿದ್ದಾರೆ ಎಂಬ ವಿಷಯ ಇಲ್ಲಿ ಮಹತ್ವದ್ದಲ್ಲ.
ನಿಮ್ಮ ವಿಡಿಯೋಗೆ ವೀಕ್ಷಣೆ ಹೆಚ್ಚಾದಂತೆ ಹಾಗೂ ಗೂಗಲ್ ಮುಖಾಂತರ ಜಾಹೀರಾತುಗಳು ಬರುತ್ತಿದ್ದರೆ ನಿಮ್ಮ ಅಕೌಂಟಿಗೆ ಹಣ ಬಂದು ಸೇರಲು ಶುರುವಾಗುತ್ತದೆ. ಆದರೆ ಇದಕ್ಕಾಗಿ ನಿಮಗೆ ಒಳ್ಳೆಯ ಕಂಟೆಂಟ್ ನೀಡಬೇಕಾಗುತ್ತದೆ. ಒಟ್ಟಿನಲ್ಲಿ ಸತತವಾಗಿ ನೀವು ಒಳ್ಳೆಯ ಕಂಟೆಂಟ್ ನೀಡಲು ಶುರು ಮಾಡಿದರೆ ತಿಂಗಳಿಗೆ 15000 ರೂ ಯೂಟ್ಯೂಬ್ ನಿಂದ ಗಳಿಸುವುದು ಕಷ್ಟವೆನಿಲ್ಲ. ಇದಕ್ಕಾಗಿ ನಿಮ್ಮ ವಿಡಿಯೋದಲ್ಲಿ ತುಂಬಾ ಕ್ರಿಯೇಟಿವಿಟಿ ಇರಬೇಕು.
ಮೇಲಿನ ಹೊರತಾಗಿಯೂ ಯೂಟ್ಯೂಬ್ ನಲ್ಲಿ ಹಣ ಗಳಿಸುವ ಇನ್ನೂ ಅನೇಕ ಮಾರ್ಗಗಳಿವೆ. ಹೇಗೆಂದರೆ, ನಿಮ್ಮ ಚಾನೆಲ್ ನ ಮೆಂಬರ್ಶಿಪ್ ಆಫರ್, ಸೂಪರ್ ಚಾಟ್, ಸೂಪರ್ ಸ್ಟಿಕರ್ಸ್ ಮತ್ತು ಯೂಟ್ಯೂಬ್ ಪ್ರೀಮಿಯಂ ಮುಖಾಂತರವೂ ಹಣ ಗಳಿಸಲು ಸಾಧ್ಯವಿದೆ. ನಿಮ್ಮ ವಿಡಿಯೋಗಳಿಗೆ ಒಂದು ವೇಳೆ ಹೆಚ್ಚಿಗೆ ವ್ಯೂವ್ಸ್ ಗಳು ದೊರೆಯುತ್ತಿದ್ದರೆ ಅನೇಕ ಕಂಪನಿಗಳು ತಮ್ಮ ಜಾಹೀರಾತನ್ನು ನೀಡುತ್ತಾರೆ. ಇದೊಂದು ಹಣ ಗಳಿಕೆಯ ಒಳ್ಳೆಯ ಉದಾಹರಣೆಯಾಗಿದೆ.
ಇದನ್ನೂ ಓದಿ:
Video; ಮಕ್ಕಳು ಸೂಪರ್ ಹಿಟ್ ಮೂವಿ ‘ಕಾಂತಾರ’ ವೀಕ್ಷಿಸುವಾಗ ನಡೆದ ವಿಡಿಯೋ ದೃಶ್ಯ ಒಮ್ಮೆ ನೋಡಿ…ಏನಾಗಿದೆ.
ಟೀಚರ್ ಈ ಹುಡುಗನಿಗೆ ಒಂದು ಶಬ್ದ ಎಷ್ಟೋ ಸಲ ಹೇಳಿದರೂ ಸಹ, ಈ ಹುಡುಗ ಹೇಳಿದ್ದೇನು ನೋಡಿ!!