N-95 ಮಾಸ್ಕ್ ಓರಿಜಿನಲ್ಲಾ – ಡೂಪ್ಲಿಕೇಟಾ ಅಂಥ ಕಂಡುಹಿಡಿಯೋದು ಹೇಗೆ? ಯಾವ ಮಾಸ್ಕ್ ಬೆಸ್ಟ್? ವಿಡಿಯೋ ನೋಡಿ…

ಎಲ್ಲದರಲ್ಲೂ ಡೂಪ್ಲಿಕೇಟ್ ಬಂದಿರುವುದು ನಿಮಗೆಲ್ಲ ಗೊತ್ತಿದೆ. ನಮ್ಮ ಜನ ಹೇಗಿದಾರಂದ್ರೆ, ಸಾವು ಬದುಕಿನ ನಡುವೆ ಹೋರಾಡುವ ವ್ಯಕ್ತಿಗೂ ಸಹ ಮೋಸ ಮಾಡಿ ಜೇಬು ತುಂಬಿಸಿಕೊಳ್ಳುತ್ತಾರೆ. ಅದಕ್ಕೆ ತಾಜಾ ಉದಾಹರಣೆಯೆಂದರೆ, ರೆಮಿಡಿಸಿವರ್ ಇಂಜೆಕ್ಷನ್ ನಕಲಿ ಮಾಡುತ್ತಿರುವುದು. ಕೊರೋನ ರೋಗಿಗಳಿಗೆ ಸಂಜೀವಿನಿ ಎಂದೇ ಸಾಬೀತಾಗಿರುವ ಇಂಜೆಕ್ಷನ್ ಅನ್ನು ಕೂಡ ನಕಲಿ ಮಾಡಿ ಮಾರತೊಡಗಿದ್ದಾರೆ.

ರೆಮಿಡಿಸಿವರ್ ಇಂಜೆಕ್ಷನ್ ನಲ್ಲಿ ಗ್ಲುಕೋಸೋ – ಆ್ಯಂಟಿಬಯಾಟಿಕ್ಕೋ ತುಂಬಿ 40-50 ಸಾವಿರಕ್ಕೆ ಮಾರಿಕೊಳ್ಳುತ್ತಾರೆ. ತೀರ ಸಾ’ಯುವವರಿಗೂ ಹೀಗೆ ಮೋಸ ಮಾಡಲು ಅವರ ಮನಸ್ಸಾದರೂ ಹೇಗೆ ಬರುತ್ತದೊ ಕಾಣೆ. ಈಗಾಗಲೇ ಸಾವಿರ ಸಾವಿರ ಸಂಖ್ಯೆಲ್ಲಿ ಇಂಥ ನಕಲಿಗಳ ಮಾರಾಟವಾಗಿದ್ದು ಬಹುಶ ಸಾ’ವಿನ ಸಂಖ್ಯೆ ಹೆಚ್ಚಾಗಲು ಅದೂ ಕಾರಣವಿರಬಹುದು.

ದುಡ್ಡೆಂದರೆ ಎಲ್ಲರಿಗೂ ಇಷ್ಟಾನೇ, ಹಾಗಂತ ತೀರ ಈ ಪರಿ ಮಾನವೀಯತೆ ಬಿಟ್ಟು ನಿಲ್ಲುವುದು ಅತ್ಯಂತ ಹೇಯ ಕೆಲಸ, ಅಲ್ಲಿ ಸಾ’ವಿಗೀಡಾದವರ ಮನೆಯ ಕಣ್ಣೀರು ಅಂಥವರನ್ನು ನೆಮ್ಮದಿಯಾಗಿಡಲು ಬಿಡುತ್ತಾ ಅನ್ನೋದು ಭಾವನಾತ್ಮಕ ಪ್ರಶ್ನೆಯಾದರೆ, ಅವರ ನಕಲಿ ಇಂಜೆಕ್ಷನ್ ಮಾಡಿಸಿಕೊಂಡು ರೋಗಿಗಳು ಸಾಯುತ್ತಾರಲ್ಲ, ಈ ಗಿಲ್ಟ್ ಆ ನಕಲಿ ಮಹಾಶಯರಿಗೆ ಕಾಡುವುದಿಲ್ಲವಾ ಅಂತ.

ಅದೇ ರೀತಿ ನಕಲಿ ಮಾಸ್ಕ್ ದಂಧೆಯೂ ವ್ಯಾಪಕವಾಗಿದೆ‌. ಬಹುತೇಕ ವಿಶ್ವದ ಎಲ್ಲೆಡೆ N-95 ಮಾಸ್ಕ್ ಅನ್ನು ಅತ್ಯಂತ ವಿಶ್ವಾಸಾರ್ಹ ಎಂದು ನಂಬಲಾಗುತ್ತದೆ. ನಮ್ ನಕಲಿ ಕುಳಗಳು ಅದನ್ನೂ ಡೂಪ್ಲಿಕೇಟ್ ಮಾಡಿ ಮಾರುತ್ತಾರೆ. ಅದನ್ನು ಹಾಕಿಕೊಂಡವ ಎನ್ – 95 ಭರವಸೆ ಮೇಲೆ ಹೊರಗೆ ತಿರುಗಾಡಿ ಸೋಂಕು ಅಂಟಿಸಿಕೊಂಡು ಸ’ತ್ತರೂ ಅವರಿಗೇನೂ ಸಮಸ್ಯೆ ಇಲ್ಲ, ಅವರಿಗೆ ಸಿಗಬೇಕಾದ ರೊಕ್ಕ ಸಿಕ್ಕಿರುತ್ತಲ್ಲ!

ಹೊರಗೆ ಮಾರುಕಟ್ಟೆಯಲ್ಲಿ ಮಾತ್ರವಲ್ಲ, ವಿಶ್ವಾಸಾರ್ಹ ಎನಿಸಿಕೊಂಡ ಹಾಗೂ ಈಗ ತುಂಬಾ ಜನ ಶಾಪಿಂಗ್ ಆನ್ ಲೈನ್ ಆ್ಯಪ್ ಗಳಲ್ಲೂ ನಕಲಿ ಎನ್ 95 ಮಾರಲಾಗುತ್ತಿದೆ. ಈ ಬಗ್ಗೆ ಅದ್ಯಾರೊ ಅದ್ಯಾವಾಗ ಕ್ರಮ ತಗೊತಾರೊ. ಇಂಥವರ ಮೇಲೆ ದೂರು ಕೊಟ್ಟರೂ ಪ್ರಯೋಜನ ಇಲ್ಲ. ಇನ್ನು ನಕಲಿಗಳಿಂದ ಪಾರಾಗುವುದು ಹೇಗ? ಅದು ಸ್ವಲ್ಪ ಕಷ್ಟ. ನಕಲಿ ಅಂತ ಗುರುತಿಸುವುದಾದರೂ ಹೇಗೆ? ಇದಕ್ಕಾಗಿ ಕೆಳಗಿರುವ ವಿಡಿಯೊ ನೋಡಿ.

ಮಜಬೂತಾದ ಮೂರು ಪದರವುಳ್ಳ N – 95 ಮಾಸ್ಕ್ ಬದಲಿಗೆ ತೆಳ್ಳನೆಯ ಎರಡು ಪದರದ ಮಾಸ್ಕನ್ನೇ ಎನ್ 95 ಥರ ತಯಾರಿಸಿ ಮಾರಲಾಗುತ್ತದೆ‌. ಮೂರು ಪದರ ಹಾಗೂ ಎರಡು ಒದರ ಕೈಯಲ್ಲಿ ಹಿಡಿದರೇನೇ ಗೊತ್ತಾಗಿಬಿಡುತ್ತದೆ‌. ಹಾಕಿಕೊಂಡಾಗ ರಿಲ್ಯಾಕ್ಸ್ ಅನನಿಸಿದರೆ ಅಥವಾ ಸುಲಭವಾಗಿ ಉಸಿರಾಡುವಂತಾದರೆ ಖಂಡಿತ ಅದು ಡೂಪ್ಲಿಕೇಟ್ ಮಾಸ್ಕ್. ಹೀಗೆ ವಿಡಿಯೊದಲ್ಲಿ ನಾಲ್ಕು ಟಿಪ್ಸ್ ಹೇಳಿದ್ದಾರೆ.

ಹಲವಾರು ಸಂಶೋಧನೆ ಪ್ರಕಾರ ಎನ್ 95 ಮಾಸ್ಕ್ ನಲ್ಲೂ ಕೂಡ ವೈರಸ್ ನುಸುಳುವ ಸಾಧ್ಯತೆ ಇದೆ ಎಂದು ನಂಬಲಾಗಿದೆ. ಅದಕ್ಕಾಗೇ ವೈದ್ಯರು, ನರ್ಸ್ ಮುಂತಾದ ಫ್ರಂಟ್ ಲೈನ್ ವಾರಿಯರ್ಸ್ ಎರಡೆರಡು ಮಾಸ್ಕ್ ಧರಿಸುತ್ತಾರೆ. ಆದರೆ ನಮಗೆ ಅಂಥ ಅವಶ್ಯಕತೆ ಇಲ್ಲ. ಹಾಗಂತ ಸುಲಭವಾಗಿ ಉಸಿರಾಡಲು ಸಾಧ್ಯವಾಗುವ ಮಾಸ್ಕ್ ಧರಿಸಿ ಊರೆಲ್ಲ ತಿರುಗುವುದು ಕೂಡ ಸರಿಯಲ್ಲ.

ಇನ್ನೂ ಡೂಪ್ಲಿಕೇಟ್ ಮಾಸ್ಕ್ ಧರಸುವುದು ಅಥವಾ ಉಸಿರಾಡಲು ವಾಲ್ವ್ ಇಟ್ಟಿರುವ ಮಾಸ್ಕ್ ಧರಿಸುವುದು ಖಂಡಿತ ಅಪಾಯ. ಅದರ ಬದಲು ಎರಡು ಮೂರು ಪದರದ ಮನೆಯಲ್ಲೇ ತಯಾರಿಸಿದ ಕಾಟನ್ ಬಟ್ಟೆಯ ಮಾಸ್ಕೇ ಎಷ್ಟೋ ಬೆಟರ್. ಪ್ರತಿದಿನ ತೊಳೆದು ಬಳಸುವ ಇವುಗಳನ್ನೇ ಸಾಧ್ಯವಾದಷ್ಟು ಎಲ್ಲರೂ ಬಳಸಬೇಕು. ಬೇಕಿದ್ದರೆ ಇವುಗಳ ಮೇಲೊಂದು ಸರ್ಜಿಕಲ್ ಮಾಸ್ಕ್ ಧರಿಸಬಹುದು.

ನೀವು ತೀರ ಸೋಂಕಿತ ಪ್ರದೇಶದಲ್ಲಿದ್ದರೆ, ಅಥವಾ ಅಂಥಲ್ಲಿ ಕೆಲಸ ಮಾಡುವವರಾಗಿದ್ದರೆ, ಅಥವಾ ಹೆಚ್ಚು ಜನರ ಜೊತೆ ಬೆರೆಯಬೇಕಾದ ಉದ್ಯೋಗವಾಗಿದ್ದರೆ ನೀವು ಖಂಡಿತ ಓರಿಜಿನಲ್ ಎನ್ – 95 ಮಾಸ್ಕ್ ಬೇಕೇ ಬೇಕು. ಅದಕ್ಕಾಗಿ ಕೆಳಗಿನ ವಿಡಿಯೊ ನೋಡಿ, ಓರಿಜಿನಲ್ ಮಾಸ್ಕ್ ಹೇಗಿರುತ್ತೆ ಅಂತ ಅವರು ಅತ್ಯಂರ ಸುಲಭವಾಗಿ ಪರೀಕ್ಷಿಸುವ ಮಾರ್ಗ ಹೇಳಿದ್ದಾರೆ. ವಿಡಿಯೊ ನೋಡಿ.
-Team Infotrend