ಈ ಹುಡುಗ ತಯಾರಿಸಿದ ಚಿಕ್ಕ ಜೀಪ ನಿಜವಾದ ಜೀಪಿಗಿಂತಲೂ ಭರ್ಜರಿಯಾಗಿದೆ! ನೋಡಿ ಈ Video
ಪ್ರತಿಯೊಂದು ವ್ಯಕ್ತಿಯಲ್ಲಿ ಏನಾದರೂ ಒಂದು ಕೌಶಲ್ಯವು ಅಡಗಿರುತ್ತದೆ. ಆ ಕೌಶಲ್ಯವು ಯಾವಾಗ, ಹೇಗೆ, ಯಾವ ರೀತಿಯಲ್ಲಿ ಹೊರಬೀಳುತ್ತದೆ ಹೇಳಲು ಸಾಧ್ಯವಿಲ್ಲ.
ಕೇರಳದ ಒಬ್ಬ ಯುವಕನು ತನ್ನ ಹತ್ತು ವರ್ಷದ ಮಗನಿಗಾಗಿ ಚಿಕ್ಕ ಜೀಪ್ ಒಂದನ್ನು ತಯಾರಿಸಿದ್ದಾನೆ. ಆತ ತಯಾರಿಸಿದ ಈ ಜೀಪ್ ವಿಲಿ ಮತ್ತು ಫೋರ್ಡ್ ಕಂಪನಿಯ ಜೀಪಿನ ಪ್ರತಿಕೃತಿಯಾಗಿದೆ ಎನ್ನಬಹುದು.
ನಮ್ಮ ನೆರೆಯ ಕೇರಳ ರಾಜ್ಯದ ನಿವಾಸಿಯಾದ ಅರುಣ್ ಕುಮಾರ್ ಅವರು ಕೆಲವೇ ಕೆಲವು ದಿವಸಗಳ ಹಿಂದೆ ತಮ್ಮ ಹತ್ತು ವರ್ಷದ ಮಗನಿಗಾಗಿ ಒಂದು ಸುಂದರವಾದ ಜೀಪ್ ತಯಾರಿಸಿದ್ದಾರೆ. ಈ ಜೀಪನ್ನು ತಯಾರಿಸಲು ಅರುಣ್ ಕುಮಾರ್ ಅವರಿಗೆ 7 ತಿಂಗಳ ಕಾಲಾವಧಿ ಬೇಕಾಯಿತು. ಎಲ್ಲಕ್ಕೂ ಮಹತ್ವದ ವಿಶೇಷತೆಯೇನೆಂದರೆ ಇದನ್ನು ಸರ್ವಸಾಮಾನ್ಯ ಜೀಪುಗಳ ಹಾಗೆ ಈ ಜೀಪನ್ನು ಸಹಿತ ಚಲಾಯಿಸಬಹುದು.

ಈ ಜೀಪಿನ ಒಟ್ಟು ತೂಕ 75 ಕಿಲೋಗ್ರಾಮ್ ಇದೆ. ಇಷ್ಟಿದ್ದರೂ ಈ ಜೀಪು ತನ್ನ ತೂಕದ ಎರಡು ಪಟ್ಟು ಭಾರವನ್ನು ಹೊತ್ತುಕೊಳ್ಳುವ ಶಕ್ತಿಯನ್ನು ಹೊಂದಿದೆ. ಈ ವಾಹನವನ್ನು ತಯಾರಿಸಲು ಅರುಣ್ ಕುಮಾರ್ ಅವರಿಗೆ ತುಂಬಾ ಪರಿಶ್ರಮ ಪಡಬೇಕಾಯಿತು. ಅರುಣ್ ಕುಮಾರ್ ಅವರು ಈ ಜೀಪು ತಯಾರಿಸಲು ಅನೇಕ ರೀತಿಯ ಸ್ಪೇರ್ ಪಾರ್ಟ್ಸ್, ಗಾಡಿಯ ಚೇಸಿ ಮತ್ತು ಕಬ್ಬಿಣದ ವಸ್ತುಗಳನ್ನು ಸ್ವತಃ ತಾವೇ ತಯಾರಿಸಿಕೊಂಡಿದ್ದಾರೆ. ಈ ಕೆಲಸವನ್ನು ಅವರು ತಮ್ಮ ಬಿಡುವಿನ ವೇಳೆಯಲ್ಲಿ ಮಾಡಿದ್ದಾರೆ. ಇದಕ್ಕಾಗಿ ತಾವು ದುಡಿಯುವ ಕೆಲಸಕ್ಕಾಗಿ ಯಾವುದೇ ರಜೆಯನ್ನು ತೆಗೆದುಕೊಂಡಿಲ್ಲ. ಗಾಡಿಯ ಮೇಲೆ ಬಂದಿರುವ ಹೊದಿಕೆ ಇದು ಬಟ್ಟೆಯಿಂದ ತಯಾರಿಸಿದ್ದಾಗಿದೆ. ಇದನ್ನು ನಮಗೆ ಬೇಕಾದ ಹಾಗೆ ತೆಗೆಯಲು ಅಥವಾ ಬದಲಿಸಲು ಬರುತ್ತದೆ. ಇದರಲ್ಲಿ 24 ವೊಲ್ಟ್ ಪಾವರ್ ನ ಬ್ಯಾಟರಿಯನ್ನು ಉಪಯೋಗಿಸಲಾಗಿದೆ. ಸಾಮಾನ್ಯವಾಗಿ ಬೇರೆ ಜೀಪುಗಳಲ್ಲಿ ಇರುವಂತಹ ನ್ಯೂಟ್ರಲ್, ಫಾರ್ವರ್ಡ್ ಮತ್ತು ರಿವರ್ಸ್ ಗೇರ್ ಗಳನ್ನು ಸಹಿತ ಅಳವಡಿಸಲಾಗಿದೆ. ಈ ಜೀಪಿನಲ್ಲಿ ಉಪಯೋಗಿಸಲಾದ ಇನ್ನಿತರ ವಸ್ತುಗಳು ಸಹಿತ ತುಂಬಾ ಒಳ್ಳೆಯದಾಗಿವೆ.

ಗೇರ್ ಜೊತೆಗೆ ಈ ಗಾಡಿಯಲ್ಲಿ ಇನ್ನಿತರ ಗಾಡಿಗಳಲ್ಲಿ ಉಪಯೋಗಿಸುವ ಹಾಗೆ ಲೀಫ್ ಸ್ಪ್ರಿಂಗ್ ಸುಸ್ಪೆಂಶನ್ ಮೆಕ್ಯಾನಿಸಂನ್ನು ಅರುಣ್ ಕುಮಾರ್ ಅವರು ಉಪಯೋಗಿಸಿದ್ದಾರೆ. ಈ ಸೌಲಭ್ಯದಿಂದ ಗಾಡಿಯು ತುಂಬಾ ಆರಾಮದಾಯಕವಾಗಿದೆ ಮತ್ತು ರಸ್ತೆ ಗುಂಡಿಗಳ ಸಮಸ್ಯೆ ತಿಳಿದುಬರುವುದಿಲ್ಲ. ಈ ಜೀಪನ್ನು ತಯಾರಿಸುವಾಗ ಅರುಣ್ ಕುಮಾರ್ ಅವರು ತುಂಬಾ ಚಿಕ್ಕಪುಟ್ಟ ವಿಷಯಗಳ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಈ ಜೀಪಿನಲ್ಲಿ ರೇಕ್ ಸ್ಟೇರಿಂಗ್ ಸಿಸ್ಟಮ್ ಸೌಲಭ್ಯವು ಇದೆ.

ಈ ಜೀಪಿನ ವೈಶಿಷ್ಟಗಳು ಇಲ್ಲಿಗೆ ಮುಗಿಯುವದಿಲ್ಲ. ಇದಕ್ಕೆ LED ಹೆಡ್ ಲೈಟ್ಸ್ ಗಳನ್ನು ಸಹ ಅಳವಡಿಸಲಾಗಿದೆ. ಅಷ್ಟೇ ಅಲ್ಲ ಮಂಜಿನಲ್ಲಿ ಚಲಾಯಿಸಲು ಅವಶ್ಯಕವಿರುವ LED ಫಾಗ್ ಲೈಟ್ಸ್ ಸಹ ಉಪಲಬ್ಧವಿದೆ. ಇನ್ನು ಹೇಳಬೇಕೆಂದರೆ, ಇಂಡಿಕೇಟರ್, ಅಡ್ಜಸ್ಟೇಬಲ್ ಮಿರರ್, ವೈಪರ್, ಹಾರ್ನ್, ಮೊಬೈಲ್ ಚಾರ್ಜರ್ ಸಾಕೆಟ್, ಫಸ್ಟ್ ಏಡ್ ಬಾಕ್ಸ್, USB ಮೆಮೊರಿ ಕಾರ್ಡ್ ಸಾಕೆಟ್ ಹೀಗೆ ಹತ್ತು ಹಲವು ಪ್ರಕಾರಗಳ ಸೌಲಭ್ಯದಿಂದ ಕೂಡಿದೆ, ಅರುಣ್ ಕುಮಾರ್ ಅವರು ತಯಾರಿಸಿದ ಈ ಜೀಪು. ಈ ಜೀಪಿನಲ್ಲಿ ಸ್ಪೀಡೋಮೀಟರ್ ಸಹಿತ ಇದೆ. ಈ ಸ್ಪೀಡೋಮೀಟರ್ ನ್ನು ಅವರು ತಯಾರಿಸದೆ, ರಾಯಲ್ ಎನ್ಫೀಲ್ಡ್ ಬೈಕಿನ ಅನ್ ಲಾಗ್ ಸ್ಪೀಡೋಮೀಟರನ್ನೇ ಇದರಲ್ಲಿ ಸೆಟ್ ಮಾಡಿದ್ದಾರೆ.
ಈ ರೀತಿಯ ಯಾವುದೇ ವಿಶೇಷ ಸುದ್ದಿಗಳು ಬಂದರೆ ಅಥವಾ ವಿಡಿಯೋಗಳು ಇದ್ದರೆ ಮಹಿಂದ್ರ ಕಂಪನಿ ಮಾಲೀಕರಾದ ಆನಂದ ಮಹಿಂದ್ರಾ ಅವರು ತಕ್ಷಣ ಸಂಪೂರ್ಣ ಮಾಹಿತಿಯೊಂದಿಗೆ ಟ್ವೀಟ್ ಮಾಡುತ್ತಾರೆ. ಅವರು ಪೋಸ್ಟ್ ಮಾಡಿದ ವಿಡಿಯೋದಲ್ಲಿ ಅರುಣ್ ಕುಮಾರ್ ಬಗ್ಗೆ ಹೀಗೆ ಹೇಳಿದ್ದಾರೆ, ಈ ಜೀಪಿನಲ್ಲಿ ಇನ್ಸ್ಟಾಲ್ ಮಾಡಿದ ಅನೇಕ ವಸ್ತುಗಳು ಅರುಣ್ ಕುಮಾರ್ ಅವರು ಸ್ವತಃ ತಾವೇ ತಯಾರಿಸಿದ್ದಾರೆ. ಏಕೆಂದರೆ, ಇಷ್ಟೊಂದು ಚಿಕ್ಕ ಆಕಾರದ ಸ್ಪೇರ್ ಪಾರ್ಟ್ಸ್ ಗಳು ಮಾರ್ಕೆಟಿನಲ್ಲಿ ಎಲ್ಲಿಯೂ ದೊರೆಯುವುದಿಲ್ಲ. ಮತ್ತು ಇದಕ್ಕಾಗಿ ಒಂದು ಟೂಲ್ ಕಿಟ್ ಸಹಿತ ತಯಾರಿಸಿ ಅದನ್ನು ಡ್ರೈವರ್ ಸೀಟ್ ಕೆಳಗಡೆ ಸೆಟ್ ಮಾಡಿದ್ದಾರೆ. ಅವಶ್ಯಕತೆ ಬಿದ್ದಾಗ ಅಥವಾ ಜೀಪಿನಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ಜೀಪಿನ ಪ್ಯಾನಲ್ ಓಪನ್ ಮಾಡಿ ಅದನ್ನು ರಿಪೇರ್ ಮಾಡಲು ಸಹಾಯವಾಗುತ್ತದೆ. ಅರುಣಕುಮಾರ್ ಅವರು ತಯಾರಿಸಿದ ಈ ಜೀಪು ತುಂಬಾ ಇಷ್ಟವಾಗಿದ್ದರಿಂದ ಆನಂದ ಮಹಿಂದ್ರಾ ಅವರು ಅರುಣ್ ಕುಮಾರ್ ಅವರಿಗೆ ತಮ್ಮ ಟ್ವೀಟ್ ನಲ್ಲಿ ಅಭಿನಂದನೆಗಳನ್ನು ಸಲ್ಲಿಸಲು ಮರೆತಿಲ್ಲ.