VIDEO : ಕೊರೋನ ವ್ಯಾಕ್ಸಿನ್ ತೆಗೆದುಕೊಂಡ ಮೇಲೆ ಮನುಷ್ಯನ ದೇಹ ಮ್ಯಾಗ್ನೆಟ್ ಆಯ್ತಾ? ವಿಡಿಯೊ ನೋಡಿ
ಭಾರತದಲ್ಲಿ ಕೋವಿಡ್-19 ಎರಡನೇ ಅಲೆ ಜೋರಾಗಿಯೇ ಹರಡಿ ಸಧ್ಯ ಸ್ವಲ್ಪ ತಹಬದಿಗೆ ಬರುತ್ತಾ ಇದ್ದರೂ ಕೂಡ ಈ ರೋಗ ಬರದಂತೆ ತಡೆಯಲು ಮೊನ್ನೆಚ್ಚರಿಕಾ ಕ್ರಮವಾಗಿ ಕೋವ್ಯಾಕ್ಸಿನ್ ಮತ್ತೆ ಕೋವಿ ಶೀಲ್ಡ್ ಎಂಬ ಎರಡು ಡೋಸ್ ವ್ಯಾಕ್ಸಿನ್ ಗಳನ್ನು ಹಾಕಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಇದನ್ನು ಹಾಕಿಸಿಕೊಂಡ ಕೆಲವು ವ್ಯಕ್ತಿಗಳಿಗೆ ಸೈಡ್ ಎಫೆಕ್ಟ್ಸ್ ಆಗುತ್ತಿವೆ. ಇಂತಹುದೆ ಒಂದು ವಿಚಿತ್ರ ಪ್ರಕರಣ ಪಕ್ಕದ ಮಹಾರಾಷ್ಟ್ರದಲ್ಲಿ ಕಂಡು ಬಂದಿದೆ, ಬನ್ನಿ ಅದೇನೆಂದು ನೋಡೋಣ…
ಮಹಾರಾಷ್ಟ್ರದ ಮ್ಯಾಗ್ನೆಟ್ ಮ್ಯಾನ್ :
ಈತ ಕರೋನ ವ್ಯಾಕ್ಸಿನ್ ನ ಎರಡನೇ ಡೋಸ್ ಹಾಕಿಸಿಕೊಂಡ ನಂತರ ಈತನ ದೇಹ ಕಾಂತೀಯ ಗುಣ ಪಡೆದಿದೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದ ನಾಸಿಕ್ ನಿವಾಸಿ ಅರವಿಂದ್ ಸೋನಾರ್ ಎಂಬ ವ್ಯಕ್ತಿ ಹಾಗೂ ದೆಹಲಿಯ ಜಹಾಂಗೀರ್ ಪುರಿಯ ಮತ್ತೊಬ್ಬ ನಿವಾಸಿ ಈ ಇಬ್ಬರೂ ಕರೋನ ವ್ಯಾಕ್ಸಿನ್ ನ ಎರಡೂ ಡೋಸ್ ತೆಗೆದುಕೊಂಡ ನಂತರ ಇವರ ದೇಹ ಕಾಂತೀಯ ಗುಣವನ್ನು ಪಡೆದಿವೆಯಂತೆ.

ಇವರಿಬ್ಬರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ, ಇವರ ಪ್ರಕಾರ ಇವರ ದೇಹ ಲೋಹದಿಂದ ತಯಾರಿಸಿದ ವಸ್ತುಗಳನ್ನು ತನ್ನೆಡೆಗೆ ಆಕರ್ಷಸುತ್ತಿದೆ! ವಿಡಿಯೊದಲ್ಲಿ ಕೂಡ ಈ ದೃಶ್ಯವನ್ನು ನಾವು ನೋಡಬಹುದು.
ವಿಜ್ಞಾನ ಏನು ಹೇಳುತ್ತದೆ?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿರುವ ಹಾಗೆ ಆಯಸ್ಕಾಂತೀಯ ಗುಣ ಹೊಂದಿರುವ ದೇಹ ಇರುವುದು ವ್ಯಾಕ್ಸಿನ್ ಹಾಕಿಸಿಕೊಂಡ ನಂತರವಲ್ಲ ಬದಲಾಗಿ ಇಂತಹ ಅನೇಕ ವಿಡಿಯೋಗಳು ಈ ಮೊದಲೇ ಕಂಡುಬರುತ್ತಿದ್ದವು, ಇದಷ್ಟೇ ಅಲ್ಲದೇ ದೇಹದಲ್ಲಿ ವಿದ್ಯುತ್ ಪ್ರವಹಿಸಿಕೊಳ್ಳುವ ಮನುಷ್ಯರನ್ನು ಸಹ ನೋಡಿದ್ದೇವೆ. ಇದರ ಬಗ್ಗೆ ವಿಜ್ಞಾನ ಹೇಳುವದೇನು?
ಘರ್ಷಣೆಯ ಸಿದ್ದಾಂತ :
ವಿಜ್ಞಾನಿಗಳ ಪ್ರಕಾರ ಇಂತಹ ಘಟನೆಗಳ ಸಾಧ್ಯವಿದೆ, ಆದರೆ ಇದರ ಹಿಂದೆ ಯಾವುದೇ ವ್ಯಾಕ್ಸಿನ್ ಅಥವಾ ಆಯಸ್ಕಾಂತೀಯ ಗುಣ ಬರುವುದಕ್ಕೆ ಅಥವಾ ಯಾವುದೋ ರಹಸ್ಯ ಶಕ್ತಿ ಬರಲು ಸಾಧ್ಯವಿಲ್ಲ, ಬದಲಾಗಿ ಭೌತಿಕ ಘರ್ಷಣೆಯ ಸಿದ್ಧಾಂತದ ಆಧಾರದ ಮೇಲೆ ಇದೆಲ್ಲ ಸಾಧ್ಯ.

ಅದು ಹೇಗೆಂದರೆ ನಮ್ಮ ಮುಂದೊಗಲು (ಚರ್ಮ) ಬಹಳಷ್ಟು ಇಲಾಸ್ಟಿಕ್ ಆಗಿ ಇರುತ್ತದೆ, ಇದನ್ನು ಕೀಳುವುದಕ್ಕೆ ಪ್ಲಾಸ್ಟಿಕ್ ಸರ್ಜರಿ ಎಂದು ಹೇಳುತ್ತಾರೆ, ಹೀಗೆ ಕಿತ್ತ ಮೇಲೆ ಆ ಚರ್ಮ ಹೊಂದಿಕೊಳ್ಳುವಾಗ ತನ್ನ ಸಂಪರ್ಕಕ್ಕೆ ಧಾತುಗಳನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಕೆಲವು ಬಾರಿ ಸಾಕಷ್ಟು ಚಳಿ ಇರುವ ದಿನಗಳಲ್ಲಿ ಬಿಸಿಯಾದ ಬಟ್ಟೆ ಹಾಕಿಕೊಂಡಾಗ ಯಾರಾದರೂ ಮುಟ್ಟಿದರೆ ಅವರಿಗೆ ವಿದ್ಯುತ್ ಶಾಕ್ ಹೊಡೆದ ಅನುಭವವಾಗುತ್ತದೆ ಎಂದ ಕೂಡಲೇ ಅವರ ದೇಹದಲ್ಲಿ ವಿದ್ಯುತ್ ಇದೆಯಂದಲ್ಲ.
ಆಯಸ್ಕಾಂತೀಯ ಗುಣ ಹೊಂದಿರಬಹುದೇ?
ವಿಜ್ಞಾನಿಗಳ ಪ್ರಕಾರ, ಇಲ್ಲ ಇಂತಹ ಯಾವುದೇ ಚಮತ್ಕಾರ ನಡೆಯಲು ಸಾಧ್ಯವಿಲ್ಲ ಬದಲಾಗಿ ಇಂತಹ ಸಾಹಸ ಮಾಡಿ ವಿಡಿಯೋ ಮಾಡಿ ವೈರಲ್ ಮಾಡುವ ವ್ಯಕ್ತಿಗಳ ದೇಹದಲ್ಲಿ ಕೂದಲು ಹೆಚ್ಚಾಗಿ ಇರುವುದಿಲ್ಲ ಈ ಕಾರಣದಿಂದಾಗಿ ಅವರ ದೇಹಕ್ಕೆ ಧಾತುಗಳು ಅಂಟಿಕೊಳ್ಳುತ್ತವೆಯೇ ಹೊರತು ಮತ್ಯಾವುದೇ ರೀತಿಯ ಆಯಸ್ಕಾಂತೀಯ ಗುಣ ಬರಲು ಸಾಧ್ಯವಿಲ್ಲ.
ನಂಬಿಕೆ ಬರದೇ ಹೋದರೆ ಸರಿಯಾಗಿ ಗಮನಿಸಿ ನೋಡಿ ಅಂತಹ ವ್ಯಕ್ತಿಗಳು ಧಾತುಗಳನ್ನು ತಮ್ಮ ದೇಹದ ಯಾವ ಭಾಗದ ಮೇಲೆ ಕೂದಲು ಕಡಿಮೆ ಇರುತ್ತವೆಯೋ ಅಂತಲ್ಲಿ ಮಾತ್ರ ಧಾತುಗಳನ್ನು ಹಚ್ಚಿಕೊಂಡು ವಿಡಿಯೋ ಮಾಡಿ ಹಾಕಿರುತ್ತಾರೆ.
ನೀವು ಯೋಚಿಸಿ :
ಅವರ ದೇಹದಲ್ಲಿ ಆಯಸ್ಕಾಂತೀಯ ಗುಣ ಇದ್ದರೆ ಅವರ ಬನಿಯನ್ ಹಾಗು ಶರ್ಟ್ ಮೇಲೆಯೂ ಕೂಡ ಲೋಹದ ವಸ್ತುಗಳು ಅಂಟಿಕೊಳ್ಳಬೇಕು, ಅಷ್ಟೇ ಅಲ್ಲ ಅವರ ಮುಂದೊಗಲ ಮೇಲೆ ಸ್ವಲ್ಪ ಎಣ್ಣೆ ಹಚ್ಚಿದ ಮೇಲೂ ಇವುಗಳು ಅಂಟಿಕೊಳ್ಳಬೇಕು, ಹಾಗಾಗಲು ಸಾಧ್ಯವಿಲ್ಲ, ಅದೇ ರೀತಿಯಲ್ಲಿ ಯಾವ ಮನುಷ್ಯನ ದೇಹವು ಕಾಂತೀಯ ಗುಣ ಪಡೆಯಲು ಕೂಡ ಸಾಧ್ಯವಿಲ್ಲ.
-ಮಂಜುನಾಥ್