VIDEO : ಟ್ರಾಫಿಕ್ ಪೊಲೀಸ್ ತನ್ನ ಊಟವನ್ನು ಬೀದಿಬದಿಯ ಹಸಿದ ಮಕ್ಕಳಿಗೆ ಕೊಟ್ಟ ಭಾವುಕ ವಿಡಿಯೊ
ಇದನ್ನು ಪ್ರಚಾರಕ್ಕೆ ಮಾಡಿದ ವಿಡಿಯೊ ಅಂತ ಕೆಲವರು ಹೇಳಿದ್ದಾರೆ. ಹೌದು ಇದನ್ನು ಪ್ರಚಾರಕ್ಕೆ ಮಾಡಿದ್ದು ಅಂತಲೇ ಇಟ್ಟುಕೊಳ್ಳೋಣ, ತಪ್ಪೇನಿದೆ? ನಿಮ್ಮ ಕೈಯಲ್ಲಿ ಅದನ್ನೂ ಮಾಡಲು ಸಾಧ್ಯವಿಲ್ಲವಲ್ಲ? ಸಹಾಯ ಮಾಡಿದ್ದನ್ನು ವಿಡಿಯೊ ಮಾಡಿ ವೈರಲ್ ಮಾಡಬಾರದಾಗಿತ್ತು ಅಂತ ಕೂಡ ಹೇಳುವವರಿದ್ದಾರೆ, ಅದನ್ನೇ ನಾವು ಬೇರೆ ಥರ ನೋಡಬಹುದು, ಹೇಗೆಂದರೆ ಅವರ ಕೆಲಸದಿಂದ ಪ್ರೇರೇಪಿತರಾದ ಇತರರು ಕೂಡ ಸಹಾಯ ಮಾಡಬಹುದಲ್ವಾ?
ಅವರು ಮಾಡಿದ ಕೆಲಸ ಇನ್ನೊಬ್ಬರಿಗೆ ಇನ್ ಸ್ಪೈರ್ ಮಾಡಬಹುದಲ್ವಾ? ಅದನ್ನು ನೋಡಿ ಮತ್ತೆ ನಾಲ್ಕು ಜನ ಬಡವರಿಗೆ ಸಹಾಯ ಮಾಡಬಹುದಲ್ವಾ? ಅದೇನೇ ಇರಲಿ, ಮಾತಾಡುವವರು ಎಲ್ಲದಕ್ಕೂ ಮಾತಾಡುತ್ತಾರೆ. ಕೆಳಗಿರುವ ವಿಡಿಯೊದಲ್ಲಿ ಟ್ರಾಫಿಕ್ ಪೊಲೀಸರೊಬ್ಬರು ತಮ್ಮ ಮನೆ ಊಟವನ್ನು ಬೀದಿಬದಿಯ ಮಕ್ಕಳಿಗೆ ನೀಡಿದ ದೃಶ್ಯ ಇದೆ, ನೋಡಿ.
ಆ ಪೊಲೀಸರ ಹೆಸರು ಎಸ್.ಮಹೇಶ್ ಅಂತ, ಹೈದ್ರಾಬಾದ್ ನವರು. ಕೊರೋನ ಹಾಗೂ ಲಾಕ್ ಡೌನ್ ಕಾರಣಕ್ಕೆ ಅಲ್ಲಿನ ಬೀದಿ ಬದಿಯಲ್ಲಿ ಹಸಿವಿನಿಂದ ಕಂಗಾಲಾಗಿದ್ದ ಕುಟುಂಬವೊಂದರ ಮಕ್ಕಳಿಗೆ ಅವರು ತಮ್ಮ ಮನೆಯಿಂದ ತಂದ ಊಟವನ್ನೇ ಬಡಿಸಿದರು. ಅದು ಪ್ರಚಾರಕ್ಕೆ ಎಲ್ಲಿಂದಲೋ ತಂದ ಊಟವಲ್ಲ ಎಂಬುದನ್ನು ಗಮನಿಸಿ.
ಅವರ ಬೈಕ್ ಬ್ಯಾಗಿನಲ್ಲಿ ಮನೆಯಿಂದ ತಂದ ಊಟದ ಚೀಲ ತಗೆದು ಅದರಿಂದ ರೈಸ್ ಬಾಕ್ಸ್, ಶೇರ್ವಾ ಡಬ್ಬಿ ಹಾಗೂ ಚಿ’ಕ’ನ್ ಫ್ರೈ ಕೂಡ ಇರುವುದನ್ನು ಸ್ಪಷ್ಟವಾಗಿ ನೋಡಬಹುದು. ಅವನ್ನೆಲ್ಲ ತಗೆದು ಮಕ್ಕಳಿಬ್ಬರಿಗೆ ಬಡಿಸಿ ತಿನ್ನಲು ಹೇಳುತ್ತಾರೆ. ಆಗ ಆ ಹುಡುಗರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಕೊರೋನ ಎರಡನೇ ಅಲೆ ಭಾರತವನ್ನು ಇನ್ನಿಲ್ಲದಂತೆ ಹ’ಣಿದು ಹಾಕಿದೆ. ಸಾವು ನೋವಿನ ರ’ಣ’ಕೇ’ಕೆ ಒಂದು ಕಡೆಯಾದರೆ, ವ್ಯಾಪಾರ ವ್ಯವಹಾರ ಎಲ್ಲ ನಿಂತು ಹೋಗಿ ಆರ್ಥಿಕವಾಗಿಯೂ ದಿ’ವಾ’ಳಿ ಹಂತ ತಲುಪಿದ್ದಾರೆ. ಇಂಥ ಪರಸ್ಥಿತಿಯಲ್ಲಿ ಬಡವರ ಪಾಡಂತೂ ಹೇಳತೀರದು. ಇದ್ದವರು ಹೇಗೊ ಬದುಕಿಬಿಡುತ್ತಾರೆ, ಆದರೆ ಮಧ್ಯಮವರ್ಗದವರು ಸಾಲದ ಸುಳಿಗೆ ಸಿಲುಕಿದ್ದು, ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.
ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ತಮ್ಮ ಕೈಲಾದಷ್ಟು ಈ ಕಾಯಿಲೆ ವಿರುದ್ಧ ಹೋರಾಡುತ್ತಿವೆ. ಆರೋಗ್ಯ ಕಾರ್ಯಕರ್ತರು ಹಗಲು ರಾತ್ರಿ ತಮ್ಮ ಜೀ’ವ ಪಣಕ್ಕಿಟ್ಟು ಕೊರೋನ ಹೊಡೆದೋಡಿಸಲು ಶ್ರಮಿಸುತ್ತಿದ್ದಾರೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯವರು ವಿಶ್ರಾಂತಿ ಎಂಬುದನ್ನೇ ಮರೆತು ಹೋಗುವ ಹಾಗಾಗಿದೆ.
ನಿರಂತರವಾಗಿ ಕೆಲಸ ಮಾಡುತ್ತಿರುವ ಅವರಿಗೆ ನಾವೆಲ್ಲ ಹ್ಯಾಟ್ಸಪ್ ಹೇಳಲೇಬೇಕು. ಹೀಗೆ ಹಗಲಿರುಳು ನಮ್ಮ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಪೊಲೀಸರಲ್ಲಿ ಹಲವರು ತಾಳ್ಮೆ ಕಳೆದುಕೊಂಡು ವಿನಾಕರಣ ಹೊರಬರುವ ಸಾರ್ವಜನಿಕರ ಮೇಲೆ ಲಾಟಿ ಎತ್ತಿದರೆ, ವಿಡಿಯೊದಲ್ಲಿರುವ ಮಹೇಶ್ ರವರಂಥ ಪೊಲೀಸರು ಬಡವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.
ಮಹೇಶ್ ರವರ ಈ ಜನಮುಖಿ ಕಾರ್ಯದ ಬಗ್ಗೆ ಇಲಾಖೆ ಕೂಡ ಗೌರವಿಸಿದೆ, ಅವರ ಸಹಾಯ ಗುಣ ಇನ್ನಷ್ಟು ಹೆಚ್ಚಲಿ ಹಾಗೂ ಅವರ ಜೀವನ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸೋಣ. ಅವರಂತೆ ನಾವೂ ಕೂಡ ನಮ್ಮ ಕೈಲಾದಷ್ಟು ಸಹಾಯ ಮಾಡುವ ಗುಣ ಬೆಳೆಸಿಕೊಳ್ಳೋಣ.
ಸರ್ಕಾರಗಳು ಮಾತ್ರವಲ್ಲ, ಹಲವು ಸಂಘಟನೆಗಳು, ಉದ್ಯಮಪತಿಗಳು, ನಟರು ಕೂಡ ಸಾರ್ವಜನಿಕರ ಸಹಾಯಕ್ಕೆ ಇಳಿದಿದ್ದು, ಆಕ್ಸಿಜನ್ ನಿಂದ ಹಿಡಿದು ಆಹಾರದವರೆಗೆ ಎಲ್ಲ ರೀತಿಯ ನೆರವು ನೀಡುತ್ತಿದ್ದಾರೆ. ದೇಶದ ಈ ಕಷ್ಟದ ಸಮಯದಲ್ಲಿ ಎಲ್ಲರೂ ಒಂದಾಗಿ ಹೋರಾಡಿ ಮಾರಕ ಕಾಯಿಲೆಯನ್ನು ದೂರ ಇಡಬೇಕಿದೆ. ಸಾಧ್ಯವಿದ್ದವರು ನಿಮ್ಮ ಸುತ್ತಲಿನ ಹಸಿದವರಿಗೆ ಊಟ ನೀಡಿ.
-Team Infotrend