IAS ಆಫೀಸರ್ ಶೇರ್ ಮಾಡಿದರು ತಮ್ಮ SSLC ಮಾರ್ಕ್ಸ್ ಕಾರ್ಡ್; ಅವರು ಪಡೆದ ಗುಣಗಳನ್ನು ನೋಡಿದಾಗ ನಂಬಲು ಅಸಾಧ್ಯ!

ಐಎಎಸ್ ಅಧಿಕಾರಿಯಾದ ಅವನೀಶ್ ಶರಣ್ ಟ್ವಿಟರ್ ನಲ್ಲಿ ಯಾವಾಗಲೂ ತುಂಬಾ ಒಳ್ಳೆಯ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಸದಾ ಆಕ್ಟಿವ್ ಆಗಿರುತ್ತಾರೆ. ಸದ್ಯ ಇವರು ಟ್ವಿಟರ್ ನಲ್ಲಿ ತಮ್ಮದೇಯಾದ ವಿಶೇಷ ಪೋಸ್ಟ್ ಒಂದು ಶೇರ್ ಮಾಡಿದ್ದಾರೆ. ಅದೇ ಈಗ ಎಲ್ಲ ಕಡೆಗೆ ವೈರಲ್ ಆಗುತ್ತಿದೆ.

ಈ ಐಎಎಸ್ ಆಫೀಸರ್ ತಮ್ಮ SSLC ಮಾರ್ಕ್ಸ ಶೀಟ್ ನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. 10ನೇ ತರಗತಿಯಲ್ಲಿ ತುಂಬಾ ಕಡಿಮೆ ಗುಣಗಳನ್ನು ಪಡೆದಿದ್ದರೂ ಅವನೀಶ್ ಅವರು ಸಿವಿಲ್ ಸರ್ವಿಸ್ ಎಕ್ಸಾಮಿನಲ್ಲಿ ಪಾಸಾಗಿ ಸದ್ಯ ಐಎಎಸ್ ಆಫೀಸರ್ ಆಗಿ ತಮ್ಮ ಸೇವೆಯನ್ನು ನಿಭಾಯಿಸುತ್ತಿದ್ದಾರೆ.

ಸಿವಿಲ್ ಸರ್ವಿಸ್ ಎಕ್ಸಾಮ್ ಎಲ್ಲಕ್ಕೂ ಕಠಿಣವಾದ ಪರೀಕ್ಷೆ ಇರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಈ ಎಕ್ಸಾಮ್ ಪಾಸ್ ಆಗಲು ದಿನದ 24 ಗಂಟೆಗಳಲ್ಲಿ 15/16 ಗಂಟೆಗಳು ಸಹ ಓದುಗರಿಗೆ ಕಡಿಮೆ ಬೀಳುತ್ತವೆ. 10ನೇ ತರಗತಿಯಲ್ಲಿ ತುಂಬಾ ಕಡಿಮೆ ಗುಣಗಳನ್ನು ಪಡೆದರೂ ಸಹ ಅವನೀಶ್ ಶರಣ್ ಅವರು ಐಎಎಸ್ ಪಾಸ್ ಆಗುವಲ್ಲಿ ಯಶಸ್ವಿಯಾದರು. ಮತ್ತು ಈ ಮಾರ್ಕ್ಸ್ ಕಾರ್ಡ್ ನಿಂದ ಹೈಸ್ಕೂಲಿನಲ್ಲಿ ಅವರು ಎಷ್ಟೊಂದು ಅಭ್ಯಾಸ ಮಾಡುತ್ತಿದ್ದರು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹೆಚ್ಚುವರಿ ಪೋಷಕರು ತಮ್ಮ ಮಕ್ಕಳು ಶಾಲೆಯಲ್ಲಿ ಸದಾ ಟಾಪರ್ ಇದ್ದರೇನೇ ಭವಿಷ್ಯದಲ್ಲಿ ಮುಂದೆ ಹೋಗುತ್ತಾರೆ ಎಂಬ ವಿಚಾರವನ್ನು ಹೊಂದಿರುತ್ತಾರೆ. ಆದರೆ ಈ ವಿಚಾರವನ್ನು ಅವನೀಶ್ ಶರಣ್ ಅವರು ಸರಾಸಗಟಾಗಿ ತಳ್ಳಿ ಹಾಕುವಂತೆ ಮಾಡಿದ್ದಾರೆ. ಹಾಗೂ ಪ್ರಾರಂಭದ ಹಂತದಲ್ಲಿ ಕಡಿಮೆ ಗುಣಗಳನ್ನು ತೆಗೆದುಕೊಂಡು ಪಾಸಾದ ವಿದ್ಯಾರ್ಥಿಗಳಿಗೆ ಮೋಟಿವೇಟ್ ಮಾಡಲು ಪ್ರಯತ್ನಿಸಿದ್ದಾರೆ. ಈ SSLC ಮಾರ್ಕ್ಸ್ ಶೀಟ್ ನಲ್ಲಿ ಅವರು ತೆಗೆದುಕೊಂಡ ಕಡಿಮೆ ಗುಣಗಳು ಸ್ಪಷ್ಟವಾಗಿ ಕಂಡುಬರುತ್ತವೆ.

SSLC ಯಲ್ಲಿ ತುಂಬಾ ಕಡಿಮೆ ಗುಣಗಳನ್ನು ತೆಗೆದುಕೊಂಡು ಪಾಸಾದರೂ ಈಗ ಇದ್ದಾರೆ IAS ಹುದ್ದೆಯಲ್ಲಿ….

ಐಎಎಸ್ ಪಾಸ್ ಆದ ವ್ಯಕ್ತಿಯ ಬಗ್ಗೆ ವಿಚಾರ ಮಾಡಿದರೆ ಆ ವ್ಯಕ್ತಿಯು ತನ್ನ ಶಾಲೆಯ ದಿನಗಳಲ್ಲಿ ಯಾವತ್ತೂ ಟಾಪರ್ ಆಗಿರಬೇಕೆಂಬ ವಿಚಾರ ಸಹಜವಾಗಿಯೇ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಇವರು ತೆಗೆದುಕೊಂಡ ಪ್ರತಿಯೊಂದು ವಿಷಯಗಳಲ್ಲಿಯ ಗುಣಗಳನ್ನು ನೋಡಿದರೆ ಇವರು ಎಸ್ ಎಸ್ ಎಲ್ ಸಿ ಹೇಗೋ ಪಾಸ್ ಆಗಿದ್ದಾರೆ ಎಂದು ಗೊತ್ತಾಗುತ್ತದೆ.

ಮಾರ್ಕ್ಸ್ ಶೀಟ್ ನೋಡಿ ಆಗುತ್ತಿದ್ದಾರೆ ಜನರು ಮೋಟಿವೇಟ್…

ಅವನೀಶ್ ಅವರ 1996 ರಲ್ಲಿಯ ಮಾರ್ಕ್ಸ್ ಶೀಟ್ ಸದ್ಯ ಟ್ವಿಟರ್ ನಲ್ಲಿ ವೈರಲ್ ಆಗುತ್ತಿದೆ. ಈ ಫೋಟೋಗೆ ಇಲ್ಲಿಯವರೆಗೆ ಸಾವಿರಾರು ಜನರು ಲೈಕ್ ಮಾಡಿದ್ದಾರೆ ಜೊತೆಗೆ 2 ಸಾವಿರಕ್ಕಿಂತಲೂ ಹೆಚ್ಚು ನೆಟ್ಟಿಗರು ರೀಟ್ವಿಟ್ ಮಾಡಿದ್ದಾರೆ. ಒಬ್ಬ ಯೂಸರ್, ಸರ್ ನಿಮ್ಮ ಈ ಪೋಸ್ಟ್ ನಿಂದ ನಾನು ತುಂಬಾ ಇನ್ ಸ್ಪೈರ್ ಆಗಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾನೆ. ಈತ SSLC ಬೋರ್ಡ್ ಎಕ್ಸಾಮಿನಲ್ಲಿ ಕಡಿಮೆ ಗುಣಗಳು ದೊರೆತ ಕಾರಣದಿಂದಾಗಿ ಐಎಎಸ್ ತಯಾರಿಯನ್ನು ಮಾಡುವುದನ್ನೇ ಬಿಟ್ಟಿದ್ದನಂತೆ. ಇದಕ್ಕೆ ಉತ್ತರವಾಗಿ ಅವನೀಶ್ ಅವರು ‘ಬೆಸ್ಟ್ ಆಫ್ ಲಕ್’ ಎಂದಿದ್ದಾರೆ.