IAS ಇಂಟರ್ವ್ಯೂ ನಲ್ಲಿಯ ಈ 9 ಪ್ರಶ್ನೆಗಳು ನಿಮಗೆ ಬಿಡಿಸಲು ಬಂದರೆ ನೀವೇ ಬುದ್ಧಿವಂತರು; “ಎಂಟನ್ನು ಎಂಟು ಸಾರಿ ಬರೆದರೆ ಉತ್ತರ ಒಂದು ಸಾವಿರ ಆಗುತ್ತದೆ ಹೇಗೆ?”
ಇಂದಿನ ದಿನಗಳಲ್ಲಿ ದೇಶದ ಯುವ ಜನತೆಯಲ್ಲಿ ಅನೇಕರ ಕನಸು ಐಎಎಸ್ ಅಧಿಕಾರಿಯಾಗಿ ಹುದ್ದೆ ಪಡೆಯಬೇಕೆಂಬುದು. ಆದರೆ ಯಾರೇ ಆಗಲಿ ಕೂಡಾ ಐಎಎಸ್ ಅಧಿಕಾರಿಯಾಗುವ ಕನಸನ್ನು ಹೊಂದಿದ್ದರೆ, ಅವರು ಆ ಕನಸನ್ನು ನನಸು ಮಾಡಲು ಶ್ರಮದ ಜೊತೆಗೆ ಕಠಿಣ ಪರೀಕ್ಷೆಗಳನ್ನು ಕೂಡಾ ಎದುರಿಸಬೇಕಾಗುತ್ತದೆ. ಐಎಎಸ್ ಎನಿಸಿಕೊಳ್ಳಲು ಯುಪಿಎಸ್ಸಿ ಪರೀಕ್ಷೆಗಳನ್ನು ಎದುರಿಸಬೇಕು. ಭಾರತದಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂದೇ ಪರಿಗಣಿಸಲಾಗಿದೆ. ಈ ಪರೀಕ್ಷೆಯ ಕಷ್ಟಕ್ಕಿಂತ ಯುಪಿಎಸ್ಸಿ ಸಂದರ್ಶನದಲ್ಲಿ ಕೇಳಲಾಗುವ ಪ್ರಶ್ನೆಗಳು ಮತ್ತೊಂದು ಮಟ್ಟದ ಜ್ಞಾನದ ಪರೀಕ್ಷೆಯೇ ಆಗಿರುತ್ತದೆ. ಸ್ಪಾಟ್ ಪ್ರತಿಕ್ರಿಯೆ ಮತ್ತು ಐಕ್ಯೂ ಟೆಸ್ಟ್ ಮಾಡಲು ಸಂದರ್ಶಕರು, ಅಭ್ಯರ್ಥಿಗೆ ಅಲ್ಲಿ ಕೆಲವು ಟ್ರಿಕಿ ಪ್ರಶ್ನೆಗಳನ್ನು ಕೇಳುತ್ತಾರೆ. ಇಂದು ನಾವು ನಿಮಗೆ ಐಎಎಸ್ ಸಂದರ್ಶನದ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳನ್ನು ಹೇಳಲು ಹೊರಟಿದ್ದು, ಇವು ನಿಮ್ಮ ಜ್ಞಾನವನ್ನು ಕೂಡಾ ಖಂಡಿತ ವೃದ್ಧಿಸುತ್ತವೆ.
ಪ್ರಶ್ನೆ : ಆನೆಯ ತೂಕ ಎಷ್ಟಿರುತ್ತದೆ?
ಉತ್ತರ : ಇದೊಂದು ಸಾಮಾನ್ಯ ಜ್ಞಾನದ ಪ್ರಶ್ನೆಯಾಗಿದೆ. ಭಾರತದಲ್ಲಿ ಕಂಡುಬರುವ ಆನೆಗಳು ಸರಾಸರಿ 5000 ಕೆಜಿ ವರೆಗೆ ಇರುತ್ತವೆ. ಅದೇ ಆಫ್ರಿಕಾದ ಆನೆಗಳಾದರೆ ಅವುಗಳ ತೂಕ 6000 ಕೆ.ಜಿ. ಇರುತ್ತದೆ. ಆನೆ ಯೌವ್ವನಾವಸ್ಥೆಯಲ್ಲಿರುವಾಗ ಅದರ ತೂಕ 2000 ಕೆಜಿಯಿಂದ 6500 ಕೆಜಿ ವರೆಗೆ ಬದಲಾಗುತ್ತದೆ ಕೂಡಾ.
ಪ್ರಶ್ನೆ: ಯಾವ ಗ್ರಹದ ಮೇಲೆ ಅತಿ ಹೆಚ್ಚು ಸಂಖ್ಯೆಯ ಚಂದ್ರಗಳಿವೆ?
ಉತ್ತರ: ಈ ಪ್ರಶ್ನೆಗೆ ಸರಿಯಾದ ಉತ್ತರ ಗುರು ಗ್ರಹ. 2009 ರ ವರದಿಯ ಪ್ರಕಾರ ಗುರು ಗ್ರಹಕ್ಕೆ ಒಟ್ಟು 63 ಚಂದ್ರ ಗಳು ಇದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೂಡಾ ಪತ್ತೆಯಾಗಬಹುದು ಎನ್ನಲಾಗಿದೆ.
ಪ್ರಶ್ನೆ: ಗ್ರೇಟ್ ಖಲಿಯ ನಿಜವಾದ ಹಾಗೂ ಪೂರ್ತಿ ಹೆಸರೇನು?
ಉತ್ತರ: ದಿಲೀಪ್ ಸಿಂಗ್ ರಾಣಾ.
ಪ್ರಶ್ನೆ :ಗ” ಲಭೆಗಳು ಉಂಟಾದ ಸಮಯದಲ್ಲಿ ಸರ್ಕಾರ ಹೇಗೆ ಇಂಟರ್ನೆಟ್ ಅನ್ನು ಬಂದ್ ಮಾಡುತ್ತದೆ?
ಉತ್ತರ: ಇದಕ್ಕೆ ಉತ್ತರ ಬಹಳ ಕಡಿಮೆ ಜನರಿಗೆ ಮಾತ್ರವೇ ತಿಳಿದಿದೆ. ಸರ್ಕಾರವು ಇಂಟರ್ನೆಟ್ ಪೂರೈಕೆಯನ್ನು ನಿಲ್ಲಿಸುವಂತೆ ಇಂಟರ್ನೆಟ್ ಸೇವೆ ಒದಗಿಸುವವರಿಗೆ (internet providers) ನಿರ್ದೇಶನಗಳನ್ನು ಜಾರಿ ಮಾಡುತ್ತದೆ. ಒಂದು ವೇಳೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಇದ್ದರೆ, ಈ ಪರಿಸ್ಥಿತಿಯಲ್ಲಿ ಇಂಟರ್ನೆಟ್ ಎಲ್ಲಾ ನಿಯಂತ್ರಣವು ಸರ್ಕಾರದ ಕೈಯಲ್ಲೇ ಇರುತ್ತದೆ. ಹಾಗಿಲ್ಲ ಎಂದಾಗ ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುವುದು ಸರ್ಕಾರವೇ ಆದ್ದರಿಂದ ಅವರಿಗೆ ಸೂಚನೆ ನೀಡಿ, ಚರ್ಚೆ ನಡೆಸಿ ಸರ್ಕಾರವು ಇಂಟರ್ನೆಟ್ ಪೂರೈಕೆಯನ್ನು ನಿಲ್ಲಿಸುತ್ತದೆ.
ಪ್ರಶ್ನೆ: ಪರಮ ವೀರ ಚಕ್ರದ ಸ್ಥಾಪನೆ ಯಾವಾಗ ಆಯಿತು?
ಉತ್ತರ: 26 ಜನವರಿ 1950 ರಲ್ಲಿ.
ಪ್ರಶ್ನೆ: ಯಾವ ಪ್ರಾಣಿಗಳಲ್ಲಿ ಋತು ಚಕ್ರ ಅಥವಾ ಪೀರಿಯಡ್ಸ್ ಆಗುತ್ತದೆ?
ಉತ್ತರ: ಋತು ಚಕ್ರ ಮಾನವ ಮಹಿಳೆಯರಲ್ಲಿವ ಸಂಭವಿಸುತ್ತದೆ ಎಂದು ನೀವೆಲ್ಲರೂ ತಿಳಿದಿರುವಿರಿ. ಆದರೆ ಪ್ರಾಣಿಗಳಲ್ಲಿಯೂ ಕೂಡಾ ಇದು ಸಂಭವಿಸುತ್ತದೆ ಎಂದು ಹೆಚ್ಚು ಜನರಿಗೆ ತಿಳಿದೇ ಇಲ್ಲ. ಹೌದು, ಮಾನವರ ಜೊತೆಗೆ, ಚಿಂಪಾಂಜಿಗಳು, ಆನೆಗಳು, ಬೆಕ್ಕುಗಳು ಮತ್ತು ಬಾವಲಿಗಳಲ್ಲಿ ಕೂಡಾ ಈ ನೈಸರ್ಗಿಕ ಚಟುವಟಿಕೆ ನಡೆಯುತ್ತದೆ.
ಪ್ರಶ್ನೆ: ನೆರಳೇ ಇಲ್ಲದ ವಸ್ತು ಯಾವುದು?
ಉತ್ತರ: ಈ ಪ್ರಶ್ನೆಗೆ ಸರಿಯಾದ ಉತ್ತರ ರಸ್ತೆ.
ಪ್ರಶ್ನೆ: ಮುಳ್ಳಿನ ಮೇಲೆ ಮುಳ್ಳಿದೆ. ಎಷ್ಟು ಗಂಟೆಯ ಸಮಯ ಆಗ ಬೇಕೋ ಅದಕ್ಕೆ ಅಷ್ಟೇ ನಿಮಿಷ ಬಾಕಿಯಿದೆ. ಹಾಗಿದ್ದರೆ ಗಡಿಯಾರದಲ್ಲಿ ಈಗ ಎಷ್ಟು ಸಮಯ ತಿಳಿಸಿ.
ಉತ್ತರ: ಇದರ ಸರಿಯಾದ ಉತ್ತರ 9:50 ನಿಮಿಷ, ಏಕೆಂದರೆ ಹತ್ತು ಗಂಟೆಯಾಗಲು ಇನ್ನು ಹತ್ತು ನಿಮಿಷ ಬಾಕಿಯಿದೆ.
ಪ್ರಶ್ನೆ: ಎಂಟನ್ನು ಎಂಟು ಸಾರಿ ಬರೆದರೆ ಉತ್ತರ ಒಂದು ಸಾವಿರ ಆಗುತ್ತದೆ ಹೇಗೆ?
ಉತ್ತರ: ಈ ಪ್ರಶ್ನೆಗೆ ಸರಿಯಾದ ಉತ್ತರ ಏನೆಂದರೆ, 888 + 88 + 8 + 8 + 8 = 1000