IAS ಇಂಟರ್ವ್ಯೂ ನಲ್ಲಿ ಕೇಳಲಾದ ಈ ವಿಚಿತ್ರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟರೆ ನೀವೇ ಬುದ್ಧಿವಂತರು!

ಉಪಯೋಗ ಮಾಡುವ ಮೊದಲು ಅದನ್ನು ಒಡೆಯಬೇಕಾಗುವದು? IAS ಇಂಟರ್ ವ್ಯೂವ್ ನಲ್ಲಿ ವಿಚಾರಿಸುವಂಥ ಕೆಲವು ವಿಚಿತ್ರ ಪ್ರಶ್ನೆಗಳು….

UPSC ಪಾಸಾಗುವದು ಸಾಮಾನ್ಯರ ಕೆಲಸವಲ್ಲ. ವಿಶೇಷವಾಗಿ ಇಂಟರ್ ವ್ಯೂವ್ ನಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ಕೊಡುವವರು ತುಂಬಾ ಚಾಕಚಕ್ಯತೆಯಿಂದ ಉತ್ತರಿಸಬೇಕಾಗುವದು. ಇಲ್ಲಿಯ ಪ್ರಶ್ನೆಗಳು ತುಂಬಾ ಕಠಿಣವಾದ ಕೊನೆಯ ಹಂತದ ಪ್ರಶ್ನೆಗಳೇ ಇರುತ್ತವೆ ಎಂಬುದು ಎಲ್ಲರ ವಾಡಿಕೆ. ಹೀಗಾಗಿ ಇಲ್ಲಿ ಆಯ್ಕೆಯಾಗುವವರ ಸಂಖ್ಯೆ ಸಮುದ್ರದಿಂದ ಬರೀ ಒಂದು ಹನಿ ನೀರನ್ನು ತೆಗೆದ ಹಾಗಿರುತ್ತೆ. ಸದ್ಯಕ್ಕೆ ಎಲ್ಲಿ ನೋಡಿದರೂ ಈ ಪರೀಕ್ಷೆ ಪಾಸಾದವರ ಚರ್ಚೆಗಳೇ ನಡೆದಿವೆ. ಹಾಗೂ ಅವರು ಕೊಟ್ಟ ಇಂಟರ್ ವ್ಯೂವ್ ಬಗ್ಗೆ ಅವರಿಗೆ ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ, ಎಂಬುದರ ಗಹನತೆಯ ಬಗ್ಗೆ ಅರಿತುಕೊಳ್ಳುವದರಲ್ಲಿ ಕೆಲವರಿಗೆ ತುಂಬಾ ಆಸಕ್ತಿಯಾಗಿರುತ್ತದೆ. ಆದ್ದರಿಂದ ಇಂಥ ಆಸಕ್ತಿ ಉಳ್ಳವರಿಗಾಗಿ ಈ ಮಹತ್ವದ ಪರೀಕ್ಷೆಯ ಇಂಟರ್ ವ್ಯೂವ್ ನಲ್ಲಿ ಕೇಳಲಾದ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ ನೋಡಿ.

  1. ನಿಮ್ಮ ಸೋದರಮಾವನ ಸಹೋದರಿ ನಿಮ್ಮ ದೊಡ್ಡಮ್ಮ ಅಥವಾ ಚಿಕ್ಕಮ್ಮ ಎರಡು ಇಲ್ಲ, ಹಾಗಿದ್ದಲ್ಲಿ ಆಕೆ ಯಾರು?
    ಉ:- ತಾಯಿ.
  2. ಇಬ್ಬರು ಮಕ್ಕಳು ಮತ್ತು ಇಬ್ಬರು ತಂದೆ ಚಲನಚಿತ್ರ ನೋಡಲು ಹೋದರು, ಅವರ ಹತ್ತಿರ ಮೂರೇ ಟಿಕೆಟ್ ಗಳಿವೆ, ಆದರೂ ಸಹಿತ ಎಲ್ಲರೂ ಚಲನಚಿತ್ರವನ್ನು ನೋಡಿದರು, ಅದು ಹೇಗೆ?
    ಉ:- ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ, ಈ ಪ್ರಶ್ನೆಯಲ್ಲಿ ಎರಡು ತಂದೆ ಎರಡು ಮಕ್ಕಳು ಕೂಡಿ ಬರೀ ಮೂರೇ ಜನರಿದ್ದಾರೆ. ಕಾರಣ ಅಜ್ಜ ಮಗ ಮತ್ತು ಮೊಮ್ಮಗ ಹೀಗೆ ಈ ಮೂವರಲ್ಲಿ ಇಬ್ಬರು ತಂದೆ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅಂದಾಗ ಒಟ್ಟು ಮೂರೇ ಜನರಾದರು. ಮತ್ತು ಅವರ ಹತ್ತಿರ ಮೂರೇ ಟಿಕೆಟ್ ಗಳಿದ್ದವು.
  3. ಸಮುದ್ರದಲ್ಲಿ ಜನ್ಮತಾಳಿ ಪ್ರತಿಯೊಬ್ಬರ ಮನೆಯಲ್ಲಿ ವಾಸಿಸುತ್ತವೆ, ಹೇಳಿ ಅದು ಯಾವ ವಸ್ತು?
    ಉ:- ಉಪ್ಪು.
  4. ಉಪಯೋಗ ಮಾಡುವ ಮೊದಲು ಅದನ್ನು ಒಡೆಯಲೇಬೇಕಾದ ವಸ್ತು ಯಾವುದು?
    ಉ:- ಮೊಟ್ಟೆ.
  5. ಅದು ಯಾವ ‘ಪ್ರಶ್ನೆ’ಯ ಉತ್ತರ ಎಂದಿಗೂ ‘ಹೌದು’ ಅಂತ ಕೊಡಲಿಕ್ಕೆ ಸಾಧ್ಯವೇ ಇಲ್ಲ.
    ಉ:- ‘ನೀವೂ ಮಲಗಿಕೊಂಡಿದ್ದೀರಾ’? ಈ ಪ್ರಶ್ನೆಯ ಉತ್ತರ ಯಾವತ್ತೂ ‘ಹೌದು’ ಅಂತ ಕೊಡಲು ಸಾಧ್ಯವೇ ಇಲ್ಲ, ಹೌದಲ್ವಾ?
  6. ಹತ್ತು ದಿನಗಳವರೆಗೆ ರಾತ್ರಿ ಮಲಗದೇ ಮನುಷ್ಯ ಜೀವಂತವಿರಲು ಸಾಧ್ಯವೇ?
    ಉ:- ಹೌದು, ಹಗಲು ಹೊತ್ತು ಮಲಗಿ ಜೀವಂತವಿರಲು ಸಾಧ್ಯ.