IAS ಇಂಟರ್ವ್ಯೂ ನಲ್ಲಿ ಹುಡುಗಿಗೆ ಕೇಳಲಾಯಿತು ಕೆಟ್ಟ ಪ್ರಶ್ನೆ, ಆದರೆ ಹುಡುಗಿ ಕೊಟ್ಟಳು ಸಖತ್ ಉತ್ತರ!
IAS ಪಾಸಾಗುವದು ಎಂದರೆ ಕಾಂಜಿ ಪಿಂಜೀಗಳ ಕೆಲಸವಲ್ಲ. IAS ಪರೀಕ್ಷೆಯು ಇತರರಿಗಿಂತಲೂ ಪ್ರಬಲ ಬುದ್ಧಿಶಕ್ತಿಯನ್ನು ಹೊಂದಿದವರ ಪರೀಕ್ಷೆಯಾಗಿರುತ್ತದೆ. ದಿನದ 14 ರಿಂದ 16 ಗಂಟೆಗಳ ಅಭ್ಯಾಸವೂ ಕಡಿಮೆ ಬೀಳುವದು. ಹಾಗಾಗಿ ಅವರಿಗೆ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳು, ಮತ್ತು ಮೌಖಿಕ ಮುಖಾಮುಖಿಯಲ್ಲಿ ಕೇಳುವ ಪ್ರಶ್ನೆಗಳು ತುಂಬಾನೇ ಕನ್ಫಯೂಜಿಂಗ್ ಮಾಡುವಂಥವುಗಳಾಗಿರುತ್ತವೆ. ನಾವು ನಮ್ಮ ಮಿತ್ರರ ಜೊತೆಗಿನ ಚರ್ಚೆಯಲ್ಲಿ ಅಥವಾ ಯಾವುದೇ ಲೇಖನಗಳಲ್ಲಿ ಇಂಥ ವಿಶೇಷ ಪ್ರಶ್ನೆಗಳ ಬಗ್ಗೆ ತುಂಬಾ ಕುತೂಹಲದಿಂದ ಕೇಳುತ್ತಿರುತ್ತೇವೆ ಅಥವಾ ಓದುತ್ತಿರುತ್ತೇವೆ. ಹಾಗೂ ಕೇಳುವರು ತುಂಬಾ ಕಠೋರವಾಗಿ ಇಂಥ ಪ್ರಶ್ನೆಗಳನ್ನು ಸಹಿತ ಕೇಳುತ್ತಿರುತ್ತಾರೆ. ಒಟ್ಟಿನಲ್ಲಿ ಈ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಾದಾಗ ಇಂಥ ಪರಿಸ್ಥಿತಿಗಳಿಗೆ ಎಷ್ಟೊಂದು ತಯಾರಾಗಿರುತ್ತಾರೆ, ಇವರು ಮಾನಸಿಕವಾಗಿ ಎಷ್ಟೊಂದು ಬಲಶಾಲಿಯಾಗಿರುತ್ತಾರೆ ಎಂಬುದನ್ನು ಪರೀಕ್ಷಿಸುವದು ಇದರ ಹಿಂದಿನ ಉದ್ದೇಶವಾಗಿರುತ್ತದೆ.
ಕೆಲವು ಪ್ರಶ್ನೆಗಳನ್ನು ಕೇಳಲಾಗಿ ಅದರಿಂದ ಮನಸ್ಸಿಗೆ ತುಂಬಾ ನೋವಾಗುವದು. ಆದರೆ ಆ ಪ್ರಶ್ನೆಗಳ ಉತ್ತರವೇ ಬೇರೆಯಾಗಿರುತ್ತದೆ. ನಾವು ಮನಸ್ಸಿನಿಂದ ಎಷ್ಟು ಪ್ರಬಲವಾಗಿರುತ್ತೇವೆ ಹಾಗೂ ನಾವು ವಿಚಾರ ಮಾಡುವ ಪರಿ ಯಾವುದು ಮತ್ತು ಹೇಗೆ ಇರುತ್ತದೆ ಎಂಬುದು ಇಲ್ಲಿ ತಿಳಿದು ಬರುತ್ತದೆ. ಇಲ್ಲಿ ಕೇಳಲಾಗುವ ಪ್ರಶ್ನೆಗಳು ಸಹಿತ ಇದೇ ತರವಾಗಿವೆ. ಬನ್ನಿ ಇಲ್ಲಿ ಒಬ್ಬಳು ಹುಡುಗಿಗೆ ಎಂಥ ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು ಅವುಗಳ ನಿಜವಾದ ಉತ್ತರಗಳು ಏನಾಗಿರುತ್ತವೆ ಎಂಬುದು ನೋಡುವಾ…
ಪ್ರಶ್ನೆ:- ಸ್ತ್ರೀಯ ಯಾವ ರೂಪವನ್ನು ಎಲ್ಲರೂ ನೋಡುತ್ತಾರೆ, ಆದರೆ ಆಕೆಯ ಪತಿ ಮಾತ್ರ ಆ ರೂಪವನ್ನು ಎಂದಿಗೂ ನೋಡಲು ಸಾಧ್ಯವಿಲ್ಲ?
ಉ:- ವಿಧವೆಯ ರೂಪ.
ಪ್ರಶ್ನೆ:- ತಿನ್ನುವದಕ್ಕಾಗಿ ತೆಗೆದುಕೊಂಡಿರುತ್ತೇವೆ, ಆದರೆ ತಿನ್ನಲು ಸಾಧ್ಯವಿಲ್ಲ, ಯಾವುದು ಆ ವಸ್ತು?
ಉ:- ಪ್ಲೇಟ್
ಪ್ರಶ್ನೆ:- ಬೆಂಕಿ ಹತ್ತಿ ಉರಿಯುತ್ತಿರುವ ಮನೆಯ ಮುಂದೆ ಮೂರು ಜನರು ನಿಂತಿದ್ದರು, ಅದರಲ್ಲಿಯ ಒಬ್ಬನು ಉಳಿದವರಿಬ್ಬರಿಗೂ ಆ ಮನೆಯಲ್ಲಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗುತ್ತಾನೆ, ಯಾಕೆ?
ಉ:- ಯಾಕೆಂದರೆ, ಅವರು ಮೂವರು ಫಾಯರ್ ಬ್ರಿಗೇಡ್ ಸಿಬ್ಬಂದಿ ವರ್ಗದವರು ಇದ್ದರು.
ಪ್ರಶ್ನೆ:- ಅದು ಯಾವ ಪರಿಸ್ಥಿತಿಯಲ್ಲಿ ಗಂಡ 20 ರಿಂದ 30 ನಿಮಿಷಗಳಲ್ಲಿ ದಣಿದು ಹೋಗುತ್ತಾನೆ. ಆದರೆ ಪತ್ನಿ ಇನ್ನೂ ಸ್ವಲ್ಪ ಮಾಡೋಣ ನಿಜವಾಗಿಯೂ ತುಂಬಾ ಮಜಾ ಬರುತ್ತಿದೆ ಎನ್ನುತ್ತಾಳೆ?
ಉ:- ಶಾಪಿಂಗ್.
ಪ್ರಶ್ನೆ:- ಎರಡು ಮನೆಗಳಿಗೆ ಏಕಕಾಲಕ್ಕೆ ಬೆಂಕಿ ತಗುಲಿದೆ. ಅದರಲ್ಲಿ ಒಂದು ಶ್ರೀಮಂತನ ಮನೆ ಇದೆ, ಇನ್ನೊಂದು ಬಡವನ ಮನೆ ಇದೆ. ಪೊಲೀಸರು ಯಾರ ಮನೆಯ ಬೆಂಕಿಯನ್ನು ಮೊದಲು ನಂದಿಸುವರು.
ಉ:- ಬೆಂಕಿ ಆರಿಸುವ ಕೆಲಸ ಫಾಯರ್ ಬ್ರಿಗೇಡ್ ನವರದು, ಆ ಕೆಲಸ ಪೊಲೀಸರದಲ್ಲ.
ಪ್ರಶ್ನೆ:- ನಾನು ನಾಲ್ಕು ವರ್ಷದವನಾಗಿದ್ದಾಗ ನನ್ನ ತಮ್ಮನ ವಯಸ್ಸು ನನ್ನ ಎರಡು ಪಟ್ಟು ಇತ್ತು, ಈಗ ನಾನು 18 ವರ್ಷದವನಾಗಿದ್ದರೆ ನನ್ನ ತಮ್ಮನ ವಯಸ್ಸು ಎಷ್ಟಿರಬಹುದು ಹೇಳಿ?
ಉ:- 22 ವರ್ಷಗಳು.