IAS ಪಾಸಾದೆ ಅಂತ ಊರ ತುಂಬಾ ಹಂಚಿದನು ಸ್ವೀಟ್; ಸತ್ಯ ತಿಳಿದ ಮೇಲೆ ಬಂತು ಹಾರ್ಟ್ ಅಟ್ಯಾಕ್! ಕನಸು ನುಚ್ಚುನೂರು.

ಈಗಷ್ಟೇ UPSC ಫಲಿತಾಂಶ ಜಾಹೀರಾಗಿದೆ. ಈ ಪರೀಕ್ಷೆಯಲ್ಲಿ ಕೆಲವರಿಗೆ ಯಶಸ್ಸು ಸಿಕ್ಕರೆ ಇನ್ನೂ ಅನೇಕರಿಗೆ ನಿರಾಶೆಯಾಗಿದೆ. ಪಾಸಾದ ವಿದ್ಯಾರ್ಥಿಗಳು ತಮ್ಮ ಖುಷಿಯನ್ನು ಜೋರಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಇದೇ ರೀತಿ ಬುಲಂದ್ ಶಹರಿನ ನಿವಾಸಿ ಉತ್ತಮ ಭಾರದ್ವಾಜ್ ಕೂಡ ತಾನು ಉತ್ತೀರ್ಣನಾದ ಖುಷಿ ಊರ ತುಂಬಾ ಸ್ವೀಟ್ ಹಂಚಿ ಸೆಲೆಬ್ರೇಟ್ ಮಾಡಿದ್ದನು. ಆದರೆ ಸತ್ಯ ಗೊತ್ತಾದ ಮೇಲೆ ಮಾತ್ರ ಅಲ್ಲಿ ಬೇರೆಯೇ ಘಟನೆ ವರದಿಯಾಗಿದೆ.

UPSC ಫಲಿತಾಂಶವನ್ನು ನೋಡುವಾಗ ಉತ್ತಮ ಭಾರದ್ವಾಜ್ ತನ್ನ ರೋಲ್ ನಂಬರ್ ನ ಕೊನೆಯ ಡಿಜಿಟ್ ಕಡೆಗೆ ಸರಿಯಾಗಿ ಗಮನವೇ ನೀಡಿಲ್ಲ. ಆತ ರೋಲ್ ನಂಬರ್ ಟೈಪ್ ಮಾಡಿದಾಗ ವೆಬ್ ಸೈಟ್ ನಲ್ಲಿ ಕೇವಲ ಆತನ ಹೆಸರು ತೋರಿಸಿದೆ. ಹೀಗಾಗಿ ತಾನು IAS ಆಗಿ ಬಿಟ್ಟೆನು ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾನೆ.

ನಂತರ ಹರಿಯಾಣಾದ ಒಬ್ಬ ವಿದ್ಯಾರ್ಥಿ ಇದಕ್ಕೆ ಆಕ್ಷೇಪವನ್ನು ತೆಗೆದುಕೊಂಡಿದ್ದಾನೆ. ಹರಿಯಾಣಾದ ಉತ್ತಮ ಭಾರದ್ವಾಜ್ ನ ರೋಲ್ ನಂಬರ್ 3516891 ಇದ್ದು ಬುಲಂದ್ ಶಹರಿನ ಉತ್ತಮ ಭಾರದ್ವಾಜ್ ನ ರೋಲ್ ನಂಬರ್ 3516894 ಇದೆ. ಕೊನೆಯ ಒಂದು ಡಿಜಿಟ್ ಈ ಎಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಹರಿಯಾಣದ ಉತ್ತಮ ಭಾರದ್ವಾಜ್ ಇದಕ್ಕೆ ಆಕ್ಷೇಪಣೆ ತೆಗೆದುಕೊಂಡ ನಂತರ ತಾನು UPSC ಯಲ್ಲಿ ಉತ್ತೀರ್ಣನಾಗಿಲ್ಲ ಎಂಬುದು ತಿಳಿದು ಬಂದಿದೆ.

ಪಾಪ ಉತ್ತಮ ಭಾರದ್ವಾಜ್ ಈ ಪರೀಕ್ಷೆಯನ್ನು ಮೊದಲಬಾರಿಗೆ ನೀಡಿದ್ದ. ಆದರೆ ಸತ್ಯ ತಿಳಿದಾದ ಮೇಲೆ ಬುಲಂದ್ ಶಹರಿನ ಉತ್ತಮ ಭಾರದ್ವಾಜ್ ನಿಗೆ ಕಾಲ್ಕೆಳಗಿನ ಭೂಮಿಯೇ ಬಾಯಿ ತೆರೆದು ನುಂಗಿದ ಅನುಭವವಾಗಿದೆ. ಈ ನೋವಿನಿಂದಾಗಿ ಆತನಿಗೆ ಹಠಾತ್ ಅಟ್ಯಾಕ್ ಬಂದಿದೆ. ಮತ್ತೆ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯಕ್ಕೆ ಆತನ ಆರೋಗ್ಯ ಚೆನ್ನಾಗಿದೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ.

ತಮ್ಮ ಮಗ ಐಎಎಸ್ ಆದನು ಎಂಬ ಖುಷಿಯಲ್ಲಿ ತಂದೆ ತಾಯಿಗಳು ತಮ್ಮ ನೆಂಟರಿಷ್ಟರಿಗೆಲ್ಲ ಸಿಹಿ ಹಂಚಿಯಾಗಿತ್ತು. ಮಾಧ್ಯಮಗಳು ಆತನ ಸಂದರ್ಶನವನ್ನು ಸಹ ತೆಗೆದುಕೊಂಡಿದ್ದವು. ಆತನೂ ತನ್ನ ಯಶಸ್ಸಿನ ಮರ್ಮವನ್ನು ಈ ಸಂದರ್ಶನದಲ್ಲಿ ಹೇಳಿದ್ದ. ಆದರೆ ಎಲ್ಲವೂ ತಿಳಿದಾದ ಮೇಲೆ ಮಾತ್ರ ಉತ್ತಮ ಸಂಪೂರ್ಣವಾಗಿ ನಿರಾಶೆ ಹೊಂದಿದ್ದ.