IAS ಸಂದರ್ಶನ ಪ್ರಶ್ನೆ: ಮಾನವನ ಶರೀರದ ಯಾವ ಭಾಗದಲ್ಲಿ ಬೆವರು ಬರುವುದಿಲ್ಲ?

ನಮ್ಮ ದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಯುವಜನರು ಐಎಎಸ್ ಅಧಿಕಾರಿಗಳಾಗುವ ಕನಸನ್ನು ಕಾಣುತ್ತಾರೆ. ಇನ್ನೂ ಅನೇಕರ ಗುರಿ ಐಎಎಸ್ ಅಧಿಕಾರಿ ಆಗಬೇಕೆಂಬುದೇ ಆಗಿರುತ್ತದೆ. ಆದರೆ ಅದಕ್ಕೆ ಪರೀಕ್ಷೆಗಳನ್ನು ಕೂಡಾ ಎದುರಿಸಬೇಕಾಗಿರುತ್ತದೆ. ಭಾರತದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಐಎಎಸ್ ಪರೀಕ್ಷೆಗಳು ಅತ್ಯಂತ ಕಠಿಣವಾದ ಪರೀಕ್ಷೆಗಳು ಎಂದೇ ಹೇಳಲಾಗುತ್ತದೆ. ಪ್ರತಿ‌ ವರ್ಷ ಕೂಡ ಲಕ್ಷಾಂತರ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಐಎಎಸ್ ಪರೀಕ್ಷೆಗಳನ್ನು ಕ್ಲಿಯರ್ ಮಾಡುವುದು ಬಹಳ ಶ್ರಮದ ಕೆಲಸ ಎನ್ನಲಾಗುತ್ತದೆ. ಐಎಎಸ್ ಪರೀಕ್ಷೆಗಳನ್ನು ಪಾಸ್ ಮಾಡಲು ಕಠಿಣವಾದ ಶ್ರಮ ಹಾಗೂ ನಿರಂತರವಾದ ಅಧ್ಯಯನ ಮಾತ್ರವಲ್ಲದೇ ಪ್ರತಿ ವಿಷಯದಲ್ಲಿ ಕೂಡಾ ಉತ್ತಮ ಜ್ಞಾನವನ್ನು ಪಡೆದುಕೊಂಡಿರುವುದು ಅನಿವಾರ್ಯ. ಐಎಎಸ್ ಪರೀಕ್ಷೆಗಳು ಮೂರು ಹಂತದಲ್ಲಿ ನಡೆಯುತ್ತದೆ. ಇದರಲ್ಲಿ ಲಿಖಿತ ಪರೀಕ್ಷೆಗಳ ಜೊತೆಗೆ ಮೌಖಿಕ ಪರೀಕ್ಷೆಯಾಗಿ ಸಂದರ್ಶನ ಕೂಡಾ ನಡೆಯುತ್ತದೆ.

ಲಿಖಿತ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಲವು ಸಂಕೀರ್ಣವಾದ ಪ್ರಶ್ನೆಗಳನ್ನು ಅಭ್ಯರ್ಥಿಗಳ ಮುಂದೆ ಇಡಲಾಗುತ್ತದೆ. ಈ ಪ್ರಶ್ನೆಗಳನ್ನು ಕೇಳುವ ಉದ್ದೇಶ ಅಭ್ಯರ್ಥಿಗಳು ಹೇಗೆ ಪ್ರಶ್ನೆಗಳನ್ನು ಬೇಗ ಅರ್ಥ ಮಾಡಿಕೊಂಡು ಸಮರ್ಪಕವಾದ ಉತ್ತರವನ್ನು ನೀಡಬಲ್ಲರು ಎಂಬುದನ್ನು ಪರೀಕ್ಷಿಸುವುದು ಮಾತ್ರವೇ ಅಲ್ಲದೆ, ಇದು ಅವರ ಜ್ಞಾನ ಹಾಗೂ ಕೌಶಲ್ಯಕ್ಕೆ ಸವಾಲು ಕೂಡ ಆಗಿರುತ್ತದೆ. ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಕೆಲವೊಮ್ಮೆ ಮೇಧಾವಿಗಳು ಕೂಡ ತಡ ಬಡಿಸುತ್ತಾರೆ ಎನ್ನಲಾಗುತ್ತದೆ. ಹಾಗಿದ್ದರೆ ಐಎಎಸ್ ಸಂದರ್ಶನದಲ್ಲಿ ಕೇಳಲಾಗುವ ಅಂತಹ ಕೆಲವು ಪ್ರಶ್ನೆಗಳು ಹಾಗೂ ಅವುಗಳ ಉತ್ತರಗಳನ್ನು ನಾವೀಗ ತಿಳಿಯೋಣ ಬನ್ನಿ.

ಪ್ರಶ್ನೆ- 1 : ಬಿಹಾರದ ಮೊದಲ ಮುಸ್ಲಿಂ ಮುಖ್ಯಮಂತ್ರಿ ಯಾರ-?
ಉತ್ತರ : ಅಬ್ದುಲ್ ಗಫೂರ್ ಖಾನ್ ಬಿಹಾರದ ಮೊದಲ ಮುಸ್ಲಿಂ ಮುಖ್ಯಮಂತ್ರಿಯಾಗಿದ್ದರು.

ಪ್ರಶ್ನೆ-2 : ಯಾರ ಜನ್ಮದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ?
ಉತ್ತರ : ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ಪ್ರಶ್ನೆ-3 : ಯಾವ ಪ್ರಸ್ಥಭೂಮಿಯನ್ನು ಏಷ್ಯಾದ ಮೇಲ್ಛಾವಣಿ ಎಂದು ಕರೆಯಲಾಗುತ್ತದೆ?
ಉತ್ತರ: ಟಿಬೆಟನ್ನು ಏಷ್ಯಾದ ಮೇಲ್ಛಾವಣಿ ಎಂದು ಕರೆಯಲಾಗುತ್ತದೆ.

ಪ್ರಶ್ನೆ-4: ಫೆವಿಕೋಲ್ ಯಾವ ಡಬ್ಬದಲ್ಲಿ ಇರುವುದೋ ಅದಕ್ಕೆ ಏಕೆ ಅಂಟಿಕೊಳ್ಳುವುದಿಲ್ಲ?
ಉತ್ತರ : ಫೆವಿಕೋಲ್ ಗಾಳಿಯ ಸಂಪರ್ಕಕ್ಕೆ ಬಂದಾಗ ಮಾತ್ರವೇ ಇತರೇ ವಸ್ತುಗಳಿಗೆ ಅಂಟಿಕೊಳ್ಳುತ್ತದೆ.

ಪ್ರಶ್ನೆ- 5 : ಯಾವ ದೇಶದಲ್ಲಿ ಕೇವಲ 40 ನಿಮಿಷಗಳವರೆಗೆ ಮಾತ್ರ ರಾತ್ರಿಯಾಗುತ್ತದೆ?
ಉತ್ತರ : ನಾರ್ವೆ ದೇಶದಲ್ಲಿ ಕೇವಲ 40 ನಿಮಿಷಗಳವರೆಗೆ ರಾತ್ರಿಯಾಗುತ್ತದೆ. ಈ ದೇಶವನ್ನು ದಿ ಕಂಟ್ರಿ ಆಫ್ ಮಿಡ್ನೈಟ್ ಸನ್ ಎಂದು ಕರೆಯಲಾಗುತ್ತದೆ.

ಪ್ರಶ್ನೆ-6 : ವಿಶ್ವದ ಯಾವ ಒಂದು ರಾಷ್ಟ್ರದಲ್ಲಿ ಕೃಷಿ ಅಥವಾ ವ್ಯವಸಾಯವನ್ನು ಮಾಡುವುದಿಲ್ಲ?
ಉತ್ತರ: ಇಡೀ ವಿಶ್ವದಲ್ಲಿ ಸಿಂಗಪುರ್ ಮಾತ್ರವೇ ವ್ಯವಸಾಯ ಮಾಡದ ದೇಶವಾಗಿದೆ.

ಪ್ರಶ್ನೆ- 7 : ಮಂಜುಗಡ್ಡೆ ತೂಕ ಇದ್ದರೂ ಕೂಡ ನೀರಿನ ಮೇಲೆ ಏಕೆ ತೇಲುತ್ತದೆ?
ಉತ್ತರ: ನೀರಿನ ಮೇಲೆ ಮಂಜುಗಡ್ಡೆ ತೇಲಲು ಪ್ರಮುಖವಾದ ಕಾರಣ ಅದರ ಸಾಂದ್ರತೆಯಾಗಿರುತ್ತದೆ.

ಪ್ರಶ್ನೆ- 8 : ನೀರಿನಲ್ಲಿ ಕೂಡಾ ಉರಿಯುವಂತಹ ವಸ್ತು ಯಾವುದು?
ಉತ್ತರ : ಸೋಡಿಯಂ ನೀರಿನಲ್ಲಿ ಕೂಡಾ ಉರಿಯಬಲ್ಲುದು.

ಪ್ರಶ್ನೆ -9 :ಯಾವ ಜೀವಿಯ ತಲೆಯನ್ನು ಕತ್ತರಿಸಿದ ನಂತರವೂ ಅದು ಕೆಲವು ದಿನಗಳ ಕಾಲ ಬದುಕಿರುತ್ತದೆ?
ಉತ್ತರ: ಜಿರಳೆಯ ತಲೆಯನ್ನು ಕತ್ತರಿಸಿದರೂ ಕೂಡ ಕೆಲವು ದಿನಗಳ ಕಾಲ ಬದುಕಿರುತ್ತದೆ.

ಪ್ರಶ್ನೆ -10: ಇಡೀ ಜಗತ್ತಿನಲ್ಲಿ ಯಾವ ದೇಶದಲ್ಲಿ ಒಂದು ಹೊಲ-ಗದ್ದೆ ಕೂಡ ಕಾಣಿಸುವುದಿಲ್ಲ?
ಉತ್ತರ: ಸಿಂಗಪುರ್

ಪ್ರಶ್ನೆ- 11: ಮನುಷ್ಯನ ಜೀವನದಲ್ಲಿ ಅವನಿಗೆ ಸಂಬಂಧಪಟ್ಟ ಯಾವುದು ಯಾವಾಗಲೂ ಬೆಳೆಯುತ್ತಲೆ ಇರುತ್ತದೆ?
ಉತ್ತರ: ಅದು ಮನುಷ್ಯನ ವಯಸ್ಸು

ಪ್ರಶ್ನೆ -12 : ಯಾವ ವಸ್ತು ಹೊರಗಡೆ ಉಚಿತವಾಗಿ ದೊರೆಯುತ್ತದೆ ಹಾಗೂ ಅದನ್ನಜ ಆಸ್ಪತ್ರೆಯಲ್ಲಿ ಹಣಕೊಟ್ಟು ಪಡೆಯಬೇಕಾಗುತ್ತದೆ?
ಉತ್ತರ: ಆಕ್ಸಿಜನ್

ಪ್ರಶ್ನೆ -13: ಯಾವ ದೇಶದಲ್ಲಿ ನೀಲಿ ಬಣ್ಣದ ಜೀನ್ಸ್ ಅನ್ನು ಧರಿಸಲು ನಿಷೇಧ ಹೇರಲಾಗಿದೆ?
ಉತ್ತರ: ಉತ್ತರ ಕೊರಿಯಾದಲ್ಲಿ ನೀಲಿ ಬಣ್ಣದ ಜೀನ್ಸ್ ಧರಿಸಲು ನಿಷೇಧವನ್ನು ಹೇರಲಾಗಿದೆ

ಪ್ರಶ್ನೆ- 14: ನಿಮ್ಮಿಂದ ವಸ್ತುವನ್ನು ಹಾಗೂ ಹಣವನ್ನು ಕೂಡಾ ಪಡೆಯುವ ವ್ಯಾಪಾರಿ ಯಾರು?
ಉತ್ತರ: ಕ್ಷೌರಿಕ

ಪ್ರಶ್ನೆ -15 ಮಾನವನ ಶರೀರದ ಯಾವ ಭಾಗದಲ್ಲಿ ಬೆವರು ಬರುವುದಿಲ್ಲ?
ಉತ್ತರ: ತುಟಿಗಳಮೇಲೆ ಬೆವರು ಬರುವುದಿಲ್ಲ.