1935 ರಲ್ಲಿ ಜನಿಸಿದ ಮಹಿಳೆ 1935 ರಲ್ಲೇ ತೀರಿಕೊಳ್ಳುತ್ತಾಳೆ, ಆದರೂ ಅವಳ ವಯಸ್ಸು 70 ಆಗಿರುತ್ತದೆ! ಇದು ಹೇಗೆ ಸಾಧ್ಯ?

ನಮ್ಮ ದೇಶದ ಅತ್ಯುನ್ನತ ಹುದ್ದೆಗಳೆಂದರೆ ಐಎಎಸ್ ಐಪಿಎಸ್ ಹಾಗೂ ಐಎಫ್ಎಸ್ ಈ ಮೂರು ಹುದ್ದೆಗಳು, ಈ ಹುದ್ದೆಗಳಿಗೆ ಏರಲು ಭಾರತೀಯ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯನ್ನು ಪಾಸು ಮಾಡಲೇಬೇಕು. ಈ ಪರೀಕ್ಷೆಯಲ್ಲಿ ಮುಖ್ಯವಾಗಿ ಮೂರು ಪರೀಕ್ಷೆ ನಡೆಸಲಾಗುತ್ತದೆ ಅವುಗಳೆಂದರೆ ಪ್ರಿಲಿಮ್ಸ್ (ಪೂರ್ವಭಾವಿ), ಮೇನ್ಸ್ (ಮುಖ್ಯ ಪರೀಕ್ಷೆ) ಹಾಗೂ ಇಂಟರ್ವ್ಯೂ (ಸಂದರ್ಶನ) ಈ ಮೂರು ಪರೀಕ್ಷೆ ಪಾಸಾದ ನಂತರ ರಾಂಕ್ ಗಳ ಆಧಾರದ ಮೇಲೆ ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಕೆಡರ್ ಗಳ ಹುದ್ದೆಯನ್ನು ನೀಡುತ್ತಾರೆ.

ಆ ಮೂರು ಸ್ಥರದ ಪರೀಕ್ಷೆಗಳಲ್ಲಿ ಮುಖ್ಯವಾಗಿ ಇಂಟರ್ವ್ಯೂ ಬಹಳ ಮುಖ್ಯ ಹಾಗೂ ಕಠಿಣ ಪರೀಕ್ಷೆಯಾಗಿರುತ್ತದೆ. ಅಲ್ಲಿ ಕೇಳುವ ಕೆಲವು ಚಿತ್ರ ವಿಚಿತ್ರ ಪ್ರಶ್ನೆಗಳು ಈ ಕೆಳಗೆ ಇವೆ ಬನ್ನಿ ನೋಡೋಣ…

ಪ್ರಶ್ನೆ – ಟ್ವಿಟ್ಟರ್ ಐಕಾನ್ ನಲ್ಲಿ ಕಾಣಸಿಗುವ ಪಕ್ಷಿಯ ಹೆಸರೇನು?
ಉತ್ತರ – ಟ್ವಿಟ್ಟರ್ ಐಕಾನ್ ನಲ್ಲಿ ಕಾಣಸಿಗುವ ಪಕ್ಷಿಯ ಹೆಸರು ಲ್ಯಾರಿ
ಪ್ರಶ್ನೆ– ಯಾವ ಪಕ್ಷಿ ಯಾವತ್ತೂ ನೆಲದ ಮೇಲೆ ಕಾಲು ಇಡುವುದಿಲ್ಲ?
ಉತ್ತರ – ಹರಿಯಾಲ್ ಬರ್ಡ್ (ಹಳದಿ ಪಾದದ ಹಸಿರು ಪಾರಿವಾಳ) ಇದು ಯಾವತ್ತೂ ಭೂಮಿಯ ಮೇಲೆ ತನ್ನ ಪಾದವನ್ನು ಇಡುವುದಿಲ್ಲ! ಈ ಪಕ್ಷಿ ಮಹಾರಾಷ್ಟ್ರದ ರಾಜ್ಯ ಪಕ್ಷಿಯಾಗಿದೆ.

ಪ್ರಶ್ನೆ – ನಮ್ಮ ಶರೀರದ ಅತ್ಯಂತ ಬಲಿಷ್ಠ ಅಂಗ ಯಾವುದು?
ಉತ್ತರ – ನಮ್ಮ ಶರೀರದ ಅತ್ಯಂತ ಬಲಿಷ್ಠ ಅಂಗ ನಾಲಿಗೆಯಾಗಿದೆ!
ಪ್ರಶ್ನೆ – ಪೊಲೀಸರಿಗೆ ಹಿಂದಿಯಲ್ಲಿ ಏನೆಂದು ಕರೆಯುತ್ತಾರೆ?
ಉತ್ತರ – ‘ರಾಜಕೀಯ ಜನ ರಕ್ಷಕ್’ ಎಂದು ಕರೆಯುತ್ತಾರೆ.
ಪ್ರಶ್ನೆ – ತೆಂಡೂಲ್ಕರ್ ಸಮಿತಿಯ ಸ್ಥಾಪನೆ ಯಾವ ಕಾರಣಕ್ಕಾಗಿ ಆಯಿತು?
ಉತ್ತರ – ತೆಂಡೂಲ್ಕರ್ ಸಮಿತಿಯ ಸ್ಥಾಪನೆಯಾಗಿದ್ದು ಕೃಷಿ ಉತ್ಪಾದನೆಯನ್ನು ಅಳೆಯಲು!
ಪ್ರಶ್ನೆ – ಬ್ಯಾಂಕ್ ಗೆ ಹಿಂದಿಯಲ್ಲಿ ಏನೆಂದು ಕರೆಯುತ್ತಾರೆ?
ಉತ್ತರ – ಬ್ಯಾಂಕ್ ಗೆ ಹಿಂದಿಯಲ್ಲಿ ಆದಿ ಕೋಶ್ ಎಂದು ಕರೆಯುತ್ತಾರೆ.

ಪ್ರಶ್ನೆ – ವಿಶ್ವದ ಅತ್ಯಂತ ಸಿಹಿ ಹಾಗೂ ಶುದ್ಧ ನೀರಿನ ಕೆರೆ ಯಾವುದು?
ಉತ್ತರ – ರಷ್ಯಾದೇಶದಲ್ಲಿರುವ ಬಾಯಕಲ್ ಎಂಬ ಕೆರೆಯು ಅತ್ಯಂತ ಸಿಹಿ, ಆಳವಾದ ಹಾಗೂ ಶುದ್ಧ ನೀರಿನ ಕೆರೆಯಾಗಿದೆ.
ಪ್ರಶ್ನೆ – ಫ್ರೀಜ್ ನಲ್ಲಿ ತಣ್ಣೀರು ಹಾಗೂ ಬಿಸಿ ನೀರು ಎರಡನ್ನೂ ಇಟ್ಟರೆ ಮೊದಲು ಯಾವ ನೀರು ಬರ್ಫ್ ಆಗುತ್ತದೆ?
ಉತ್ತರ – ಮೊದಲು ಬಿಸಿ ನೀರು ಬರ್ಫ್ ಆಗಿ ಬದಲಾಗುತ್ತದೆ.
ಪ್ರಶ್ನೆ – ಸೌರ ಮಂಡಲದ ಯಾವ ಗೃಹದ ಮೇಲೆ ವಜ್ರದ ಮಳೆ ಸುರಿಯುತ್ತದೆ?
ಉತ್ತರ – ಶನಿ ಹಾಗೂ ಗುರು ಗ್ರಹಗಳ ಮೇಲೆ ವಜ್ರದ ಮಳೆ ಸುರಿಯುತ್ತದೆ.

ಪ್ರಶ್ನೆ – 1935 ರಲ್ಲಿ ಜನಿಸಿದ ಒಬ್ಬ ಮಹಿಳೆ 1935 ರಲ್ಲೇ ತೀರಿಕೊಳ್ಳುತ್ತಾಳೆ, ಆದರೂ ಅವಳ ವಯಸ್ಸು 70 ಆಗಿರುತ್ತದೆ ಇದು ಹೇಗೆ..??
ಉತ್ತರ – 1935 ನೇ ಇಸ್ವಿಯಲ್ಲಿ ಜನಿಸಿದ ಮಹಿಳೆ ತನ್ನ 70 ನೇ ವಯಸ್ಸಿನ್ನಲ್ಲಿ ಅದೇ ಆಸ್ಪತ್ರೆಯಲ್ಲಿ 19 ನೇ ಕೋಣೆಯ 35 ನೇ ಬೆಡ್ ನಲ್ಲಿ ತೀರಿಕೊಳ್ಳುತ್ತಾಳೆ1