Video; ಇದು ಯಾವ ಸೀಮೆ ಉಯ್ಯಾಲೆ ಆಟವಯ್ಯಾ? ಒಬ್ಬರಲ್ಲ, ಇಬ್ಬರಲ್ಲ, ಮೂವರಲ್ಲ…ನೋಡಿ ಎಷ್ಟು ಜನ ಅಂತ!
ಭಾರತ ಸಾವಿರಾರು ವರ್ಷಗಳಿಂದ ಹಲವಾರು ಸಾಂಪ್ರದಾಯಿಕ ಆಟಗಳನ್ನು ಮತ್ತು ಕ್ರೀಡೆಗಳನ್ನು ಆಡುತ್ತಾ ಬಂದಿದೆ. ವಿಶೇಷವೆಂದರೆ ನಮ್ಮ ಭಾರತೀಯ ಆಟಗಳಿಗೆ ಹೆಚ್ಚಿನ ಸಲಕರಣೆಗಳು ಅಥವಾ ದೊಡ್ಡ ದೊಡ್ಡ ಮೈದಾನಗಳ ಅಗತ್ಯ, ಅವಶ್ಯಕತೆ ಇರುವುದಿಲ್ಲ. ಕೆಲವು ಸಾಂಪ್ರದಾಯಿಕ ಭಾರತೀಯ ಆಟಗಳನ್ನು ಭಾರತದ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಆಡಲಾಗುತ್ತದೆ ಅಥವಾ ಅದೇ ಆಟಗಳಿಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.
ನಮ್ಮ ದೇಶ ಭಾರತ ವಿವಿಧ ರೀತಿಯ ಸಂಪ್ರದಾಯಗಳನ್ನು ಹೊಂದಿದ ಶ್ರೀಮಂತ ದೇಶವಾಗಿದೆ. ಈ ದೇಶದ ವಿವಿಧ ಹಬ್ಬಗಳಲ್ಲಿಯೂ ಸಹ ಬೇರೆ ಬೇರೆ ಆಟಗಳನ್ನು ಆಡಲಾಗುತ್ತದೆ. ನಮ್ಮ ದೇಶದ ಆಟಗಳು ಆಡಲು ಶಕ್ತಿಯ ಜೊತೆಗೆ ಯುಕ್ತಿಯ ಅವಶ್ಯಕತೆಯೂ ಇರುತ್ತದೆ.
ಸದ್ಯ ಚಿಕ್ಕವರಿದ್ದಾಗ ಎಲ್ಲರಿಗೂ ಇಷ್ಟವಾಗುವ ಸುಂದರ ಆಟವೆಂದರೆ ಉಯ್ಯಾಲೆ. ಇದು ಹೆಚ್ಚಾಗಿ ಶ್ರಾವಣ ಮಾಸದಲ್ಲಿ ಆಡಲಾಗುತ್ತದೆ. ಉಯ್ಯಾಲೆ ಒಬ್ಬರು ಹೆಚ್ಚಾದರೆ ಇಬ್ಬರು ಜೊತೆಗೂಡಿ ಆಡಬಹುದು. ಇದಕ್ಕೆ ಅವಶ್ಯಕತೆ ಇರುವ ಸಾಧನ ಸಾಮಗ್ರಿಗಳೆಂದರೆ, ಒಂದು ರೆಂಬೆಗಳಿಂದ ಕೂಡಿದ ಶಕ್ತಿಶಾಲಿ ಮರ ತದನಂತರ ಉದ್ದನೆಯ ರೋಪ್ (ಹಗ್ಗ). ಹಗ್ಗವನ್ನು ಮರದ ರೆಂಬೆಗೆ ಕಟ್ಟಿ ಕೆಳಗೆ ನೇತಾಡಿಸಿ ನಂತರ ತೂಗಿಕೊಂಡು ಆಡುವ ಆಟವೇ ಉಯ್ಯಾಲೆ ಆಟ.
ಇಂಥ ಈ ಉಯ್ಯಾಲೆ ಆಟ ಪ್ರಸ್ತುತ ವಿಡಿಯೋ ದೃಶ್ಯದಲ್ಲಿ ಕಂಡುಬರುತ್ತದೆ. ಮಕ್ಕಳೆಂದರೆ ಮಂಗಗಳಿದ್ದ ಹಾಗೆ. ಈ ಮಕ್ಕಳ ತಲೆಯಲ್ಲಿ ಯಾವಾಗ ಏನು ಹೊಳೆದು, ಯಾವ ಐಡಿಯಾ ವರ್ಕೌಟ್ ಮಾಡುತ್ತಾರೆ ಸ್ವಲ್ಪವೂ ಗೊತ್ತಾಗುವುದಿಲ್ಲ. ಸದ್ಯ ಇದೇ ವಿಡಿಯೋದಲ್ಲಿ ನೋಡಿ ಗೊತ್ತಾಗುತ್ತದೆ ಅವರ ಆಟ ಎಂತದ್ದು ಎಂದು.
ಉಯ್ಯಾಲೆ ಮೊದಲು ಒಬ್ಬನೇ ಆಡುತ್ತಿರುತ್ತಾನೆ. ಅದು ಅತ್ತ ಕಡೆಯಿಂದ ತೂಗಿಕೊಂಡು ಬರುತ್ತಲೇ ಅದೇ ಮೋಷನ್ ನಲ್ಲಿ ಬೇರೊಬ್ಬ ಅದಕ್ಕೆ ಅಟ್ಯಾಚ್ ಆಗುತ್ತಾನೆ. ಇದೇ ರೀತಿ ಮೂರನೆಯನವನೊಬ್ಬ ಆ ಇಬ್ಬರಲ್ಲಿ ಕೂಡಿಕೊಳ್ಳುತ್ತಾನೆ. ಇದೇ ರೀತಿ ಕೊನೆಗೆ ನಾಲ್ಕನೇ ಹುಡುಗನೊಬ್ಬ ಉಯ್ಯಾಲೆಯ ಜೊತೆಗೆ ಅಟ್ಯಾಚ್ ಆಗುತ್ತಾನೆ. ಅವನು ಅಟ್ಯಾಚ್ ಆಗಿ ಹೋಗುವಷ್ಟರಲ್ಲಿ ಉಯ್ಯಾಲೆ ತುಂಡಾಗಿ ನಾಲ್ಕೂ ಜನರು ಕೆಳಗೆ ಬೀಳುತ್ತಾರೆ. ಮಕ್ಕಳ ಈ ಆಟ ಒಮ್ಮೆ ನೋಡಿಯೇ ಬಿಡಿ.
ನೋಡಿ ಈ ಆಟದ ವಿಡಿಯೋ…
View this post on Instagram
ಪ್ರಸ್ತುತ ಈ ಆಟವನ್ನು ಪ್ರದರ್ಶಿಸುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಮಿಸ್ ಸೋಶಿಯಲ್ ರವೀಂದ್ರ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ತಮ್ಮ ಕಮೆಂಟ್ ನಲ್ಲಿ ವ್ಯಕ್ತ ಮಾಡಿದ್ದಾರೆ.
ಒಬ್ಬ ಯೂಸರ್, ಈ ಆಟವನ್ನು ನೋಡಿ “ಟ್ಯಾಲೆಂಟ್ ಆಫ್ ಇಂಡಿಯಾ” ಎಂದಿದ್ದಾನೆ. ಇನ್ನೊಬ್ಬ ಯೂಸರ್ ತುಂಬಾ ತಮಾಷೆಯಾಗಿ ಹೀಗೆ ಹೇಳುತ್ತಾನೆ, ‘ಈ ರೀತಿ ಬರೀ ಹುಡುಗರೇ ಆಡುತ್ತಾರೆ’, ಎಂದಿದ್ದಾನೆ.