IND vs NZ : ಇರುವ ಒಂದು ಹೃದಯವನ್ನು ಎಷ್ಟು ಬಾರಿ ಗೆಲ್ಲುವಿರಿ? ಪಂದ್ಯ ಡ್ರಾ ಆದ ನಂತರ ದ್ರಾವಿಡ್ ಮಾಡಿದ ಈ ಕೆಲಸಕ್ಕೆ ಒಂದು ಬಿಗ್ ಸೆಲ್ಯೂಟ್!
ತಮ್ಮ ಶಾಂತವಾದ ಸ್ವಭಾವಕ್ಕೆ ಮತ್ತು ಉತ್ತಮ ದರ್ಜೆಯ ಕೋಚಿಂಗ್ ಸಲುವಾಗಿ ರಾಹುಲ್ ದ್ರಾವಿಡ್ ಅವರನ್ನು ಗುರುತಿಸಲಾಗುತ್ತದೆ. ಕಾನ್ಪುರ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬರೀ ಒಂದೇ ಒಂದು ವಿಕೆಟ್ ಅಂತರದಲ್ಲಿ ಜಯದಿಂದ ದೂರ ಉಳಿಯಬೇಕಾಯಿತು. ಈ ಪಂದ್ಯದ ನಂತರ ರಾಹುಲ್ ದ್ರಾವಿಡ್ ಅವರು ನಡೆದುಕೊಂಡ ರೀತಿ ತುಂಬಾ ಶ್ಲಾಘನೀಯವಾಗಿದೆ. ಪಂದ್ಯವು ಡ್ರಾನಲ್ಲಿ ಮುಕ್ತಾಯವಾದ ನಂತರ ಕೋಚ್ ರಾಹುಲ್ ದ್ರಾವಿಡ್ ಅವರು ಸ್ಟೇಡಿಯಂನ ಗ್ರೌಂಡ್ಸಮನ್ ಗೆ 35 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ. ಪಂದ್ಯದ ಐದೂ ದಿನಗಳವರೆಗೆ ಪಿಚ್ ಉತ್ತಮವಾಗಿ ಇದ್ದ ಕಾರಣ ಅಲ್ಲಿಯ ಗ್ರೌಂಡ್ಸಮನ್ ಗೆ 35 ಸಾವಿರ ರೂಪಾಯಿಗಳನ್ನು ನೀಡುವುದರ ಜೊತೆಗೆ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ಪಂದ್ಯದ ಐದನೆಯ ಹಾಗೂ ಕೊನೆಯ ದಿನ ನ್ಯೂಜಿಲೆಂಡ್ ತಂಡವು 94 ಓವರ್ಗಳನ್ನು ಆಡಿ ಬರೀ ಎಂಟು ವಿಕೆಟ್ಗಳನ್ನು ಕಳೆದುಕೊಂಡಿತ್ತು. ನಾಲ್ಕನೆಯ ದಿನ ಭಾರತ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಹೀಗೆ ಒಟ್ಟು 9 ವಿಕೆಟ್ ಪಡೆದ ಭಾರತಕ್ಕೆ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ಸು ಲಭಿಸಲಿಲ್ಲ ಹಾಗೂ ಪಂದ್ಯ ಡ್ರಾ ನಲ್ಲಿ ಮುಗಿಯಿತು. ಹೀಗೆ ಈ ಎರಡು ಪಂದ್ಯಗಳ ಸರಣಿ ಸದ್ಯ 0-0 ಸಮಬಲದಲ್ಲಿ ಸಾಗಿದೆ. ಕೊನೆಯ ಟೆಸ್ಟ್ ಪಂದ್ಯ ಡಿಸೆಂಬರ್ 3 ರಿಂದ ಮುಂಬೈಯಲ್ಲಿ ಪ್ರಾರಂಭವಾಗಲಿದೆ.
ಪಂದ್ಯ ಮುಗಿದ ನಂತರ ಯೂಪಿ ಕ್ರಿಕೆಟ್ ಅಸೋಸಿಯೇಷನ್ ಈ ಬಗ್ಗೆ ಮಾಹಿತಿ ನೀಡಿತು. ರಾಹುಲ್ ದ್ರಾವಿಡ್ ಅವರು ವೈಯಕ್ತಿಕವಾಗಿ ನಮ್ಮ ಗ್ರೌಂಡ್ಸಮನ್ ಗೆ 35 ಸಾವಿರ ರೂಪಾಯಿಗಳನ್ನು ನೀಡಿದ್ದಾರೆಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ ಗಳು ಒಟ್ಟು 19 ವಿಕೆಟ್ಗಳನ್ನು ಪಡೆದರೆ ನ್ಯೂಜಿಲೆಂಡ್ ಬೌಲರ್ಗಳು 17 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ತರಬೇತುದಾರರಾಗಿ ರಾಹುಲ್ ದ್ರಾವಿಡ್ ಅವರ ಮೊದಲ ಟೆಸ್ಟ್ ಪಂದ್ಯ ಇದಾಗಿತ್ತು.