India China Faceoff: ಸೈನ್ಯಕ್ಕೆ ‘ಎಮರ್ಜೆನ್ಸಿ ಪಾವರ್ಸ್’ ; ಚೀನಾಗೆ ಪ್ರತ್ತ್ಯುತ್ತರ ಕೊಡಲು ಸರಕಾರದಿಂದ ಸೈನ್ಯಕ್ಕೆ “ಫ್ರೀ ಹ್ಯಾಂಡ್”!

ನವದೆಹಲಿ: ಲಡಾಖ್‌ನ ಗಲ್ವಾನ್ ಕಣಿವೆಯ ಎಲ್‌ಒಸಿಯಲ್ಲಿ ಇಂಡೋ-ಚೀನಾ ಪಡೆಗಳ ನಡುವೆ ನಡೆದ ಹಿಂ’ಸಾ’ತ್ಮಕ ಚಕಮಕಿಯಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಸಾ’ವ’ನ್ನಪ್ಪಿದ್ದಾರೆ. ಅಲ್ಲದೆ ಭಾರತದ ಸೈನಿಕರು ಕನಿಷ್ಠ 43 ಚೀನಾದ ಸೈನಿಕರನ್ನು ಮ’ಟ್ಟಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಅದರ ನಂತರ, ಚೀನಾದ ಆಕ್ರಮಣಕಾರಿ ಕ್ರಮಕ್ಕೆ ಸ್ಪಂದಿಸಲು ಮೋದಿ ಸರ್ಕಾರವು ಸೈನ್ಯಕ್ಕೆ ಸರ್ವಾಧಿಕಾರ ನೀಡಿದೆ. ವಾಸ್ತವವಾಗಿ ನಿಯಂತ್ರಣದ ರೇಖೆಯಲ್ಲಿ (ಎಲ್‌ಎಸಿ), ಚೀನಾದ ಯಾವುದೇ ಆಕ್ರಮಣಶೀಲತೆಯ ವಿರುದ್ಧ ಹೋರಾಡಲು ಸರಕಾರವು ಭಾರತೀಯ ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ತುರ್ತುಪರಿಸ್ಥಿತಿಯ ಅಧಿಕಾರ ನೀಡಲಾಗಿದೆ. ಸೋಮವಾರ ರಾತ್ರಿ ನಡೆದ ಹಿಂ’ಸಾ’ತ್ಮಕ ಚಕಮಕಿಗಳ ನಂತರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಯಾವ ಸ್ಥಳದಲ್ಲಿ ಸಂಘರ್ಷ ನಡೆದಿದೆ ಆ ಗಲ್ವಾನ್ ಕಣಿವೆಯಲ್ಲಿ ಚೀನಾ ವಿರುದ್ಧ ಕ್ರಮ ಕೈಗೊಳ್ಳಲು ಅಲ್ಲಿರುವ ಭಾರತೀಯ ಸೇನೆಗೆ ಸಂಪೂರ್ಣ ಅನುಮತಿ ನೀಡಲಾಗಿದೆ. ವಿಶೇಷವೆಂದರೇ ಈ ಭಾಗದಲ್ಲೇ ಚೀನಾದ ಪಿಎಲ್ಎನ್ ಯು’ದ್ಧದ ಪ್ರ್ಯಾಕ್ಟೀಸ್ ಮಾಡಿದೆ. ಕಳೆದ ಒಂದು ತಿಂಗಳಿನಿಂದ ಲಡಾಖ್ ಗಡಿಯಲ್ಲಿ ಭಾರತೀಯ ಸೇನೆ ಮತ್ತು ಚೀನಾ ಸೈನ್ಯ ಪರಸ್ಪರ ಮುಖಾಮುಖಿಯಾಗಿದ್ದಾರೆ. ಚೀನಾದ ಸೈನಿಕರು ಆಗಾಗ್ಗೆ ಭಾರತದ ಭೂಮಿಯಲ್ಲಿ ನುಸುಳುತ್ತಿದ್ದರೆ ಭಾರತದ ಸೈನ್ಯ ಅದನ್ನು ತಡೆಯುತ್ತಿದ್ದರಿಂದ ಎರಡು ದೇಶಗಳ ನಡುವೆ ಚಕಮಕಿ ನಡೆಯುತ್ತಿದೆ. ಇದಕ್ಕಿಂತ ಮುಂಚೆ ಪ್ರಧಾನಿ ಮೋದಿಯವರು ಚೀನಾಗೆ ನೀವು ಬಯಸಿದ್ದ ಹಾಗೆ ನಾವು ಪ್ರತ್ಯುತ್ತರ ಕೊಡಲು ಸಿದ್ಧರಿದ್ದೇವೆ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿದ್ದರು.

ನಾವು ಯಾರನ್ನೂ ಕೆರಳಿಸಲಿಲ್ಲ. ಅಲ್ಲದೆ ನಾವು ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವದ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ. ಅಲ್ಲದೆ ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವ ಸಮಯ ಬಂದಾಗಲೆಲ್ಲ ನಮ್ಮ ಶಕ್ತಿಯನ್ನು ನಾವು ಪ್ರದರ್ಶಿಸಿದ್ದೇವೆ. ನಮ್ಮ ದೇಶದ ಸೈನಿಕರು ಹೋರಾಡುತ್ತಾ ಶ’ಹೀದ್ ಆಗಿದ್ದಾರೆ ಅವರ ಬಗ್ಗೆ ನಮ್ಮ ದೇಶಕ್ಕೆ ಅಭಿಮಾನವಿದೆ. ನಾವು ಕಾಲಕಾಲಕ್ಕೆ ನಮ್ಮ ಸಾಮರ್ಥ್ಯಗಳನ್ನು ಸಾಬೀತುಪಡಿಸಿದ್ದೇವೆ. ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗುವುದಿಲ್ಲ. ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವದ ಬಗ್ಗೆ ಅವಮಾನ ಮಾಡಲು ಯಾರಿಗೂ ಬಿಡುವುದಿಲ್ಲ, ಈ ಸಂದರ್ಭದಲ್ಲಿ ಭಾರತದ ಜನತೆಗೆ ಗೊಂದಲಿಕ್ಕಿಡಾಗುವ ಅವಶ್ಯಕತೆಯೇ ಇಲ್ಲ. ಭಾರತಕ್ಕೆ ಶಾಂತಿ ಬೇಕಾಗಿದೆ. ಒಂದು ವೇಳೆ ಭಾರತವನ್ನು ಸಂಘರ್ಷಕ್ಕೆ ದೂಡಿದರೆ ಪ್ರತೀಕಾರ ತೀರಿಸಿಕೊಳ್ಳಬಹುದು ಎಂದು ಮೋದಿ ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.