VIDEO : ಮೀಟ್ ಆಗಿಯೂ ಮಿಕ್ಸ್ ಆಗದ ಮಹಾಸಾಗರಗಳು! : ಪ್ರಕೃತಿಯ ವಿಶಿಷ್ಟ ರಹಸ್ಯ ಇದು!

ಭೂಮಿಯ ಮೇಲೆ 70 ಪ್ರತಿಶತದಷ್ಟು ನೀರು ಇದೆ ಎಂದು ನೀವು ತಿಳಿದಿರಬೇಕು. ಇದರಲ್ಲಿ ಸಮುದ್ರದಿಂದ ಹಿಡಿದು ಹಿಮಾವೃತ ಕಲ್ಲುಗಳು ಮತ್ತು ನದಿಗಳವರೆಗೆ ಎಲ್ಲವೂ ಬರುತ್ತವೆ. ಜಗತ್ತಿನಲ್ಲಿ ಐದು ಮಹಾಸಾಗರಗಳಿವೆ, ಅವುಗಳನ್ನು ಅಳೆಯಲಾಗದು, ಅಂದರೆ ಅವುಗಳಿಗೆ ಯಾವುದೇ ಗಡಿಗಳಿಲ್ಲ. ಸಾಗರಗಳ ಆರಂಭ ಮತ್ತು ಅಂತ್ಯವನ್ನು ಕಂಡುಹಿಡಿಯುವುದು ಬಹಳ ಕಷ್ಟದ ಕೆಲಸ.

ಸಾಗರದ ಆಳದಲ್ಲಿಯೂ ಹಲವು ರಹಸ್ಯಗಳು ಅಡಗಿವೆ. ಈ ಸಾಗರಗಳಿಗೆ ಸಂಬಂಧಿಸಿದ ರಹಸ್ಯವನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ. ಕೆಳಗೆ ಒಂದು ಹಿಂದಿ – ಇನ್ನೊಂದು ಕನ್ನಡ ಎರಡು ವಿಡಿಯೊ ಇವೆ, ಆಸಕ್ತರು ನೋಡಿ, ಎರಡರಲ್ಲೂ ವಿಭಿನ್ನ ಹಾಗೂ ಹೆಚ್ಚಿನ ಮಾಹಿತಿ ಇದೆ.

ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರವು ಅಲಾಸ್ಕಾ ಕೊಲ್ಲಿಯಲ್ಲಿ ಭೇಟಿಯಾಗುತ್ತವೆ, ಆದರೆ ಈ ಎರಡು ಸಾಗರಗಳು ಸಹ ಒಟ್ಟಿಗೆ ಸೇರುವುದಿಲ್ಲ ಎಂದು ನಾವು ಹೇಳಬಹುದು. ಏಕೆಂದರೆ ಅವರ ನೀರು ಎಂದಿಗೂ ಪರಸ್ಪರ ಬೆರೆಯುವುದಿಲ್ಲ. ಹಿಂದೂ ಮಹಾಸಾಗರದ ಮತ್ತು ಪೆಸಿಫಿಕ್ ಮಹಾಸಾಗರ ನೀರು ಪ್ರತ್ಯೇಕವಾಗಿ ಉಳಿಯುತ್ತದೆ, ಹರಿಯುತ್ತದೆ.

ಸಾಗರಗಳ ಬಗ್ಗೆ ಎಷ್ಟು ಅಧ್ಯಯನ ಮಾಡಿದರೂ ಅದು ಕಡಿಮೆಯೇ ಸರಿ. ಪ್ರತಿದಿನ ಸಂಶೋಧನೆಗಳು ಮುಂದುವರೆದಿರುತ್ತವೆ, ಆದರೂ ಅಚ್ಚರಿಯ ಸಂಗಂತಿಯೇನೆದರೆ ಕೇವಲ 20% ಮಾತ್ರ ಸಾಗರಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿದೆಯಂತೆ! ಅಲ್ಲಿಗೆ ಸಾಗರಗಳು ತಮ್ಮ ಒಡಲಾಳದಲ್ಲಿ ಅದೆಷ್ಟು ರಹಸ್ಯ ಅಡಿಗಿಸಿಟ್ಟುಕೊಂಡಿರಬಹುದು ಲೆಕ್ಕ ಹಾಕಿ.

ಭೂಮಿಯ ಮೇಲಿರುವ ಐದು ಸಾಗರಗಳು ಏಳು ಖಂಡಗಳನ್ನು ಸಂಪರ್ಕಿಸುತ್ತವೆ. ಆದರೆ ಇವುಗಳ ಆರಂಭ ಮತ್ತು ಅಂತ್ಯ ಕಂಡುಹಿಡಿಯುವುದು ಸುಲಭವಲ್ಲ. ಅವುಗಳಲ್ಲಿ ಹಿಂದೂ ಮಹಾಸಾಗರ – ಫೆಸಿಪಿಕ್ ಮಹಾಸಾಗರ ಅಲಾಸ್ಕ ಕೊನೆಯಲ್ಲಿ ಸಂಧಿಸುತ್ತವೆ. ಆದರೆ ಅವು ಅಲ್ಲಿ ಭೇಟಿಯಾದರೂ ಬೆರೆಯುವುದಿಲ್ಲ.

ಈ ದೃಶ್ಯವನ್ನು ಕಣ್ಣಾರೆ ನೋಡಿದರೆ ನಂಬಲೂ ಆಗದಷ್ಟು ಅಚ್ಚರಿಯಾಗುತ್ತದೆ. ಈ ಎರಡೂ ಭೇಟಿಯಾಗಿ ಜೊತೆಯಾಗೇ ಹರಿದರೂ ಅವು ಮಿಕ್ಸ್ ಆಗುವುದಿಲ್ಲ. ಈ ದೃಶ್ಯವನ್ನು ಮೊದಲ ಬಾರಿಗೆ ಇತ್ತೀಚೆಗೆ 2010 ರಲ್ಲಿ ಅಲಾಸ್ಕಾದ ಕೆಂಟ್ ಸ್ಮಿತ್ ಎಂಬ ಛಾಯಾಗ್ರಾಯಕ ಕ್ಲಿಕ್ ಮಾಡಿದಾಗಲೇ ಪ್ರಪಂಚಕ್ಕೆ ಇದರ ಕುರಿತು ಸ್ಪಷ್ಟ ಅರಿವಾಗಿದ್ದು.

ವಾಸ್ತವವಾಗಿ ಹಿಮಬಂಡೆಯಿಂದ ಹರಿದು ಬರುವ ನೀರು ತಿಳಿ ನೀಲಿ ಬಣ್ಣದ್ದಾಗಿದ್ದರೆ, ಸಮುದ್ರಗಳಿಂದ ಬರುವ ನೀರು ಗಾಢ ನೀಲಿ ಬಣ್ಣದ್ದಾಗಿರುತ್ತದೆ. ಎರಡೂ ಸಾಗರಗಳ ನೀರು ವಿಭಿನ್ನವಾಗಿದೆ ಎಂದು ನೀವು ಇಲ್ಲಿ ನೋಡಬಹುದು. ಒಂದು ಕಡೆಯ ನೀರಿನ ಬಣ್ಣ ನೀಲಿ ಇದ್ದರೆ ಮತ್ತೊಂದು ತಿಳಿ ಹಸಿರು ಬಣ್ಣದ್ದು. ಕೆಲವರು ಈ ರಹಸ್ಯವನ್ನು ಧಾರ್ಮಿಕ ನಂಬಿಕೆಗಳೊಂದಿಗೆ ತಳುಕಿ ಹಾಕಿ ನೋಡುತ್ತಾರೆ,

ಕೆಲವರು ಇದನ್ನು ದೇವರ ಪವಾಡವೆಂದು ಪರಿಗಣಿಸುತ್ತಾರೆ. ಆದರೆ ಈ ಎರಡು ಸಾಗರಗಳ ನೀರು ಪರಸ್ಪರ ಯಾಕೆ ಮಿಕ್ಸ್ ಆಗುವುದಿಲ್ಲ ಎಂಬುದಕ್ಕೆ ವೈಜ್ಞಾನಿಕ ಕಾರಣ ಇದೆ. ವಿಜ್ಞಾನಿಗಳ ಪ್ರಕಾರ, ಎರಡು ಸಾಗರಗಳು ಮಿಕ್ಸಾಗದಿರಲು ಕಾರಣವೆಂದರೆ ಉಪ್ಪು ನೀರು ಮತ್ತು ಶುದ್ಧ ನೀರಿನ ಸಾಂದ್ರತೆ, ತಾಪಮಾನ ಮತ್ತು ಲವಣಾಂಶದಲ್ಲಿನ ವ್ಯತ್ಯಾಸ.

ಈ ಎರಡು ಸಾಗರಗಳು ಸಂಧಿಸುವ ಸ್ಥಳದಲ್ಲಿ ನೊರೆಯಂಥ ಗೋಡೆಯು ರೂಪುಗೊಳ್ಳುತ್ತದೆ. ವಿಭಿನ್ನ ಸಾಂದ್ರತೆಯಿಂದಾಗಿ ಎರಡೂ ಪರಸ್ಪರ ಭೇಟಿಯಾಗುತ್ತವೆ ಆದರೆ ಅವುಗಳ ನೀರು ಬೆರೆಯುವುದಿಲ್ಲ. ಎರಡು ಸಾಗರಗಳು ಮಿಕ್ಸಾಗದಿರುವುದಕ್ಕೆ ಇನ್ನೊಂದು ಕಾರಣ ಹೇಳಲಾಗುತ್ತದೆ. ಸೂರ್ಯನ ಕಿರಣಗಳು ವಿಭಿನ್ನ ಸಾಂದ್ರತೆಯ ನೀರಿನ ಮೇಲೆ ಬಿದ್ದಾಗ ಅವುಗಳ ಬಣ್ಣ ಬದಲಾಗುತ್ತದೆ ಎಂದು ನಂಬಲಾಗಿದೆ. ಇದರಿಂದ ಎರಡು ಸಾಗರಗಳು ಸಂಧಿಸುತ್ತವೆ ಎಂದು ತೋರುತ್ತದೆ, ಆದರೆ ಅವುಗಳ ನೀರು ಪರಸ್ಪರ ಬೆರೆಯುವುದಿಲ್ಲ.

ಒಟ್ಟಿನಲ್ಲಿ ಈ ಎರಡೂ ಸಾಗರಗಳಷ್ಟೇ ಅಲ್ಲ, ಭೂಮಿ ಮೇಲಿನ ಐದೂ ಸಾಗರಗಳ ನೀರು ಪರಸ್ಪರ ಭೇಟಿಯಾದರೂ ಅವು ಬೆರೆಯುವುದಿಲ್ಲ. ಹಾಗೆ ನೋಡಿದರೆ ಸಾಗರಕ್ಕೆ ಸಂಬಂಧಿಸಿದ ರಹಸ್ಯಗಳು ಸಾಕಷ್ಟಿವೆ, ಸದ್ಯಕ್ಕೆ ಈ ನೀರು ಬೆರೆಯದಿರುವುದಕ್ಕೆ ಸಂಬಂಧಿಸಿದಂತೆ ಮೇಲೆ ಎರಡು ವಿಡಿಯೊ ಇದಾವೆ, ಒಂದು ಹಿಂದಿ ಮತ್ತೊಂದು ಕನ್ನಡ, ಆಸಕ್ತಿ ಇರುವವರು ನೋಡಿ…

-Team Infotrend