“IPL ನಲ್ಲಿ ಆಟಕ್ಕಿಂತ ಹಣದ ಚರ್ಚೆಯೇ ಅಧಿಕ, PSL ನಲ್ಲಿ ಮಾತ್ರ..,” ಡೇಲ್ ಸ್ಟೇನ್ ಹೇಳಿಕೆಯಿಂದ ಸಿಟ್ಟಾದ ಭಾರತೀಯ ಕ್ರಿಕೇಟ್ ಫ್ಯಾನ್ಸ್
ಐಪಿಎಲ್ ರೀತಿಯಲ್ಲಿಯೇ ಪಾಕಿಸ್ತಾನದಲ್ಲಿ ಪಿಎಸ್ಸೆಲ್ ಕ್ರಿಕೆಟ್ ಪಂದ್ಯಗಳು ನಡೆಯುತ್ತವೆ. ವಿದೇಶದಲ್ಲಿಯ ಅನೇಕ ಪ್ರಸಿದ್ಧ ಆಟಗಾರರು ಈ ಸ್ಪರ್ಧೆಗಳಲ್ಲಿಯೂ ಶಾಮೀಲಾಗಿ ಆಡುತ್ತಾರೆ. ದಕ್ಷಿಣ ಆಫ್ರಿಕಾದ ಮಾರಕ ವೇಗದ ಬೌಲರ್ ಡೇಲ್ ಸ್ಟೇನ್ ಈ ಲೀಗ್ ನಲ್ಲಿ ಕ್ವೆಟಾ ಗ್ಲಾಡಿಯೇಟರ್ಸ್ ತಂಡದಿಂದ ಆಡುತ್ತಾರೆ. ಇದೇ ಸಂದರ್ಭದಲ್ಲಿ ಡೇಲ್ ಸ್ಟೇನ್ ಅವರು ಪಿಎಸ್ಸೆಲ್ ಮತ್ತು ಐಪಿಎಲ್ ಪಂದ್ಯಗಳ ತುಲನೆಯನ್ನು ಮಾಡುವಾಗ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.
ಅವರ ಪ್ರಕಾರ ಐಪಿಎಲ್ ಗಿಂತಲೂ ಪಿಎಸ್ಸೆಲ್ ತುಂಬಾ ಲಾಭದಾಯಕವಾಗಿದೆಯಂತೆ. ಐಪಿಎಲ್ ಗಿಂತಲೂ ಇನ್ನಿತರ ಲೀಗ್ ಗಳಲ್ಲಿ ಆಡುವುದು ಆಟಗಾರರಿಗೆ ನಿಜಕ್ಕೂ ಲಾಭಕರವಾಗಿದೆ. ಐಪಿಎಲ್ ನಲ್ಲಿ ದೊಡ್ಡ ದೊಡ್ಡ ಫ್ರಾಂಚೈಸಿಗಳು ಇರುತ್ತಾರೆ. ಹೀಗಾಗಿ ಅಲ್ಲಿ ನಿಮಗೆ ಪ್ರತಿ ಪಂದ್ಯಕ್ಕೆ ಎಷ್ಟು ಹಣ ಸಿಗುತ್ತದೆ ಎಂಬುದು ಚರ್ಚೆಯಾಗುತ್ತದೆ. ಆದರೆ ನಿಮ್ಮ ಆಟದ ಬಗ್ಗೆ ಚರ್ಚೆ ಕಡಿಮೆಯಾಗುತ್ತದೆ. ಇದರಿಂದ ಕ್ರಿಕೆಟ್ ಹಿಂದೆ ಬೀಳುತ್ತದೆ. ಆದ್ದರಿಂದ ನನಗೆ ಈ ಚರ್ಚೆಯಿಂದ ಸ್ವಲ್ಪ ವಿರಾಮ ಬೇಕಾಗಿತ್ತು. ಇಲ್ಲಿ ಆಟಕ್ಕೆ ಬೆಲೆ ಕೊಡುವುದು ತುಂಬಾ ಮಹತ್ವದ್ದಾಗಿದೆ.
ಸ್ಟೇನ್ ಅವರು ಕಳೆದ ವರ್ಷ ಫೆಬ್ರವರಿಯಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಕಳೆದ ವರ್ಷದ ಕೊನೆಯಲ್ಲಿ ಶ್ರೀಲಂಕಾದಲ್ಲಿ ನಡೆದ ಲಂಕಾ ಪ್ರೀಮಿಯರ್ ಲೀಗ್ ನಲ್ಲಿಯೂ ಸ್ಟೇನ್ ಅವರು ಭಾಗವಹಿಸಿದ್ದರು. ಸದ್ಯಕ್ಕೆ ಮಾತ್ರ ಡೇಲ್ ಸ್ಟೇನ್ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ನಿಯಮಿತವಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಕಾಣಿಸುತ್ತಿಲ್ಲ.
ಐಪಿಎಲ್ ನಲ್ಲಿ ಡೇಲ್ ಸ್ಟೇನ್ ಅವರಿಗೆ ಸಾಕಷ್ಟು ಡಿಮಾಂಡ್ ಇತ್ತು. ಅಂತರರಾಷ್ಟ್ರೀಯ ಕ್ರಿಕೆಟ್ ನಂತೆ ಐಪಿಎಲ್ ನಲ್ಲಿ ಡೇಲ್ ಸ್ಟೇನ್ ಅವರ ಹೆಸರು ದೊಡ್ಡ ಆಟಗಾರರಲ್ಲಿ ಶಾಮೀಲಾಗಿದೆ. ಇವರು ಐಪಿಎಲ್ ನಲ್ಲಿ ಇಲ್ಲಿಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ ಲೈನ್ಸ್ ತಂಡಗಳ ಪ್ರತಿನಿಧಿತ್ವವನ್ನು ಮಾಡಿದ್ದಾರೆ. ಇವರು ತಮ್ಮ ಐಪಿಎಲ್ ಕರಿಯರ್ ನಲ್ಲಿ ಇಲ್ಲಿಯವರೆಗೆ ಒಟ್ಟು 95 ಪಂದ್ಯಗಳನ್ನಾಡಿ 97 ವಿಕೆಟ್ಗಳನ್ನು ಕಿತ್ತಿದ್ದಾರೆ.
ಐಪಿಎಲ್ 2020 ರಲ್ಲಿ ತುಂಬಾ ಕಳಪೆ ಪ್ರದರ್ಶನ ತೋರಿದ ಕಾರಣದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಟೇನ್ ಅವರಿಗೆ ಕರಾರಿನಿಂದ ಮುಕ್ತ ಮಾಡಿತು. ಅದರ ನಂತರ ಡೆಲ್ ಸ್ಟೇನ್ ಅವರು ಹೊಸ ವರ್ಷದ ಪ್ರಾರಂಭದಲ್ಲಿ ಇನ್ನು ಮುಂದೆ ಐಪಿಎಲ್ ನಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ಜಾಹೀರು ಮಾಡಿದರು.