IPL ನಲ್ಲಿ ಕೋಚ್ ಗೆ ಯಾವ ಟೀಂ ಎಷ್ಟು ಸಂಭಾವನೆ ಕೊಡುತ್ತಿದೆ ಗೊತ್ತಾ? RCB ತಂಡದ ಕೋಚ್….

ಜಗತ್ತಿನಲ್ಲಿಯೇ ಅತಿ ಶ್ರೀಮಂತ ಸಂಸ್ಥೆಯಾದ BCCI ಹುಟ್ಟು ಹಾಕಿದ ಮುದ್ದಿನ ಮಗು IPL ನಡೆಸುತ್ತಿರುವ ಸ್ಪರ್ಧೆಗಳು ಇಂದು ಜಗತ್ತಿನ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಸ್ಪರ್ಧೆಗಳಾಗಿವೆ. ಇಲ್ಲಿ ತಂಡದ ಫ್ರೆಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಹರಾಜಿನ ಮುಖಾಂತರ ಮನಸ್ಸಿಗೆ ಬಂದಂತೆ ಹಣವನ್ನು ಕೊಟ್ಟು ಖರೀದಿ ಮಾಡಿಕೊಳ್ಳುತ್ತಾರೆ. ಐಪಿಎಲ್ ನಿಂದಾಗಿ ಭಾರತದ ಉದಯೋನ್ಮುಖ ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಗಳಿಸಲು ಒಂದು ಒಳ್ಳೆಯ ಪ್ಲಾಟ್ ಫಾರ್ಮ್ ನಿರ್ಮಾಣವಾಗಿದೆ. ಇಲ್ಲಿ ಉದಯೋನ್ಮುಖ ಆಟಗಾರರು ಒಳ್ಳೆಯ ಆಟವನ್ನು ಪ್ರದರ್ಶಿಸಿದರೆ ಅವರಿಗೆ ಭಾರತದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ದೊರೆಯಲು ಸುಲಭವಾಗುತ್ತದೆ.

ಅದೇ ರೀತಿ ಪ್ರತಿಯೊಂದು ಐಪಿಎಲ್ ತಂಡಕ್ಕೆ ತರಬೇತುದಾರರಾಗಿ ನೇಮಕ ಮಾಡಲಾಗುತ್ತದೆ. ಈ ಚುಟುಕು ಕ್ರಿಕೆಟ್ ನಲ್ಲಿ ತರಬೇತುದಾರರ ಪಾತ್ರವೂ ಮುಖ್ಯವಾಗಿದೆ. ಹೀಗಾಗಿ ಪ್ರತಿಯೊಂದು ತಂಡವು ಕ್ರಿಕೆಟ್ನಲ್ಲಿ ಉತ್ತಮವಾಗಿ ಪ್ರದರ್ಶನವನ್ನು ನೀಡಿದ ಒಳ್ಳೆಯ ಮಾಜಿ ಆಟಗಾರರನ್ನು ತಮ್ಮ ತಂಡದ ಪ್ರಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳುತ್ತದೆ. ಹೀಗೆ ನೇಮಕ ಮಾಡಿದ ತರಬೇತುದಾರರಿಗೆ ತಂಡದ ಮುಖಾಂತರ ಕೈತುಂಬಾ ಸಂಬಳವನ್ನು ಕೊಡಲಾಗುತ್ತದೆ. ಈ ಲೇಖನದಲ್ಲಿ ಪ್ರತಿಯೊಂದು ತಂಡದ ತರಬೇತುದಾರರಿಗೆ ಎಷ್ಟೊಂದು ಸಂಬಳವಿದೆ ಎನ್ನುವ ಮಾಹಿತಿಯನ್ನು ಕಲೆ ಹಾಕಿದ್ದೇವೆ. ಹಾಗಾದರೆ ತಿಳಿದುಕೊಳ್ಳಿ ನಿಮ್ಮ ಫೇವರೆಟ್ ತಂಡದ ಕೋಚ್ ಗೆ ಇರುವ ಸಂಬಳವೆಷ್ಟು ಎಂದು?

ಮಾಹೆಲಾ ಜಯವರ್ಧನೆ:- ಶ್ರೀಲಂಕಾ ತಂಡದ ಒಂದು ಸಮಯದ ಭರವಸೆಯ ಮಧ್ಯಮ ಕ್ರಮಾಂಕದ ಆಟಗಾರ ಮಹೇಲಾ ಜಯವರ್ಧನೆ ಅವರನ್ನು ಮುಂಬೈ ಇಂಡಿಯನ್ಸ್ ತಂಡ ತಮ್ಮ ತರಬೇತುದಾರನಾಗಿ ನೇಮಕ ಮಾಡಿಕೊಂಡಿದೆ. ಶ್ರೀಲಂಕಾ ದೇಶದ ವತಿಯಿಂದ ಆಡುವಾಗ ಇವರು ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ತಲಾ 10 ಸಾವಿರ ರನ್ ಗಳ ಗಡಿ ದಾಟಿದ್ದಾರೆ. ಇಂಥ ಅನುಭವಿ ಆಟಗಾರರಾದ ಜಯವರ್ಧನೆ ಅವರ ಬ್ಯಾಟಿಂಗ್ ಅನುಭವವನ್ನು ತಮ್ಮ ತಂಡಕ್ಕೆ ಉಪಯೋಗಿಸಿಕೊಳ್ಳುವ ಸಲುವಾಗಿ ಮುಂಬೈ ಇಂಡಿಯನ್ಸ್ ತಂಡ ಇವರಿಗೆ ಐಪಿಎಲ್ ನ ಒಂದು ಹಂಗಾಮಿಗೆ 2.25 ಕೋಟಿ ರೂಪಾಯಿಗಳನ್ನು ಕೊಡುತ್ತದೆ

ಟ್ರೇವರ್ ಬೆಲ್ಲಿಸ್:- ಇಂಗ್ಲೆಂಡ್ ವು 2019 ರ ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಮಹತ್ವದ ಪಾತ್ರವನ್ನು ನಿರ್ವಹಿಸಿದ ತರಬೇತುದಾರ ಟ್ರೆವರ್ ಬೆಲ್ಲಿಸ್. ಜೊತೆಗೆ ಇವರು ಸಿಡ್ನಿ ಸಿಕ್ಸರ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಇವರಿಗೂ ಸಹಿತ ಸ್ಪರ್ಧೆಯಲ್ಲಿ ವಿಜೇತರನ್ನಾಗಿ ಮಾಡಿದ ಯಶಸ್ವಿ ಕೋಚ್ ಆಗಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ಮ್ಯಾನೇಜ್ಮೆಂಟ್ ಅವರು ಇವರಿಗೆ ಮಹೇಲಾ ಜಯವರ್ಧನೆ ಅವರಷ್ಟೇ 2.25 ಕೋಟಿಗಳಷ್ಟು ಸಂಬಳ ನೀಡುತ್ತದೆ.

ಅನಿಲ್ ಕುಂಬಳೆ:- ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ 2020ರ ಕಿರೀಟವನ್ನು ಧರಿಸುವ ಸಲುವಾಗಿ ಅನಿಲ್ ಕುಂಬ್ಳೆ ಅವರನ್ನು ತಮ್ಮ ಮಾರ್ಗದರ್ಶಕರನ್ನಾಗಿ ಆರಿಸಿಕೊಂಡಿದೆ. ಇದಕ್ಕಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ಮ್ಯಾನೇಜ್ಮೆಂಟ್ ವು ಅನಿಲ್ ಕುಂಬ್ಳೆ ಅವರಿಗೆ ಐಪಿಎಲ್ ದ ಒಂದು ಹಂಗಾಮಿಯಾಗಿ ಸುಮಾರು 4 ಕೋಟಿ ರೂಪಾಯಿಗಳನ್ನು ಕೊಡಲಿದೆ.

ಸ್ಟೀಫನ್ ಫ್ಲೆಮಿಂಗ್:- ಸಿಎಸ್ಕೆ ತಂಡಕ್ಕೆ ಮೂರು ಬಾರಿ ಐಪಿಎಲ್ ಮುಕುಟವನ್ನು ಗೆಲ್ಲಿಸಿಕೊಡುವಲ್ಲಿ ಸ್ಟೀಫನ್ ಫ್ಲೆಮಿಂಗ್ ಯಶಸ್ವಿಯಾಗಿದ್ದಾರೆ. ಇವರು ತಮ್ಮ ನಾಯಕತ್ವದಲ್ಲಿ ನ್ಯೂಜಿಲೆಂಡ್’ ಗೆ ಐಸಿಸಿಯ ಏಕಮೇವ ಚಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ಯಶಸ್ವಿ ನಾಯಕ. ಚೆನ್ನೈ ಸೂಪರ್ ಕಿಂಗ್ಸ್ ಸ್ಟೀಫನ್ ಫ್ಲೆಮಿಂಗ್ ಅವರಿಗೆ 3.4 ಕೋಟಿಗಳಷ್ಟು ಹಣವನ್ನು ಕೊಡುತ್ತದೆ.

ಆಂಡ್ರ್ಯೂ ಮ್ಯಾಕ್ಡೊನಾಲ್ಡ್:- ಆಲ್-ರೌಂಡರ್ ಆಟಕ್ಕೆ ಪ್ರಸಿದ್ಧರಾದ ಆಂಡ್ರ್ಯೂ ಮ್ಯಾಕ್ಡೊನಾಲ್ಡ್ ಅವರನ್ನು ರಾಜಸ್ತಾನ ರಾಯಲ್ಸ್ ತಂಡವು ತಮ್ಮ ಮುಖ್ಯ ಕೋಚ್ ರನ್ನಾಗಿ ನೇಮಕ ಮಾಡಿಕೊಂಡಿದೆ. ಆಸ್ಟ್ರೇಲಿಯಾದ ವರಾದ ಇವರು ಐಪಿಎಲ್ ತಂಡದ ಕೋಚ್ ಆಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಇದೇ ಮೊದಲ ಬಾರಿ. ಇವರಿಗೆ ರಾಜಸ್ಥಾನ್ ರಾಯಲ್ಸ್ ತಂಡವು ಪ್ರಶಿಕ್ಷಕರ ಜವಾಬ್ದಾರಿಯನ್ನು ನಿರ್ವಹಿಸಲು 3.4 ಕೋಟಿಗಳಷ್ಟು ಹಣವನ್ನು ನೀಡುತ್ತದೆ.

ರಿಕಿ ಪಾಂಟಿಂಗ್:- ಮುಂಬೈ ಇಂಡಿಯನ್ಸ್ ತಂಡದ ತರಬೇತುದಾರರಾಗಿ ಕೆಲವು ವರ್ಷ ಗಳವರೆಗೆ ಕೆಲಸ ಮಾಡಿದ ಆಸ್ಟ್ರೇಲಿಯಾದ ಎಲ್ಲಕ್ಕೂ ಯಶಸ್ವಿಯಾದ ಈ ನಾಯಕ 2017 ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮ್ಯಾನೇಜ್ಮೆಂಟ್ ಇವರಿಗೆ 3.4 ಕೋಟಿಗಳಷ್ಟು ಹಣವನ್ನು ಕೊಡಲು ಮುಂದಾಗಿದೆ.

ಬ್ರೆಂಡನ್ ಮೆಕಲಮ್:- ಸ್ಪೋಟಕ ಹೊಡೆತಗಳಿಗೆ ಹೆಸರುವಾಸಿಯಾದ ನ್ಯೂಜಿಲೆಂಡ್ ನ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಬ್ರೆಂಡನ್ ಮೆಕಲಮ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ತರಬೇತುದಾರರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಇವರು ಮೊದಲು ಐಪಿಎಲ್ ನಲ್ಲಿ ಸಿಎಸ್ಕೆ, ಕೋಚಿ ಟಸ್ಕರ್ಸ್ ಕೆರಳ, ಗುಜರಾತ್ ಲಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಡೆಯಿಂದಲೂ ಆಡಿದವರಾಗಿದ್ದಾರೆ. ಈಗ 2020 ರಲ್ಲಿ ಕೆಕೆಆರ್ ತಂಡದ ತರಬೇತುದಾರರಾಗಿ ಕೆಲಸ ಮಾಡಲು ಇವರು 3.4 ಕೋಟಿಗಳಷ್ಟು ಹಣವನ್ನು ತೆಗೆದುಕೊಳ್ಳುತ್ತಾರೆ.

ಸೈಮನ್ ಕ್ಯಾಟಿಚ್:- ಕೊನೆಯದಾಗಿ ನಮ್ಮೆಲ್ಲರ ಪ್ರೀತಿಯ ಮತ್ತು ಅಭಿಮಾನದ ಹಾಗೂ ಐಪಿಎಲ್ ನಲ್ಲಿಯೇ ತುಂಬಾ ಗ್ಲಾಮರಸ್ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತರಬೇತುದಾರನಾಗಿ ಸೈಮನ್ ಕ್ಯಾಟಿಚ್ ಅವರನ್ನು ನೇಮಿಸಲಾಗಿದೆ. ಇವರು ಮುಖ್ಯ ತರಬೇತುದಾರರಾಗಿ ಇದೇ ವರ್ಷದಿಂದ ಈ ಜವಾಬ್ದಾರಿಯನ್ನು ಹೊತ್ತುಕೊಂಡು ಆರ್ಸಿಬಿಗೆ ಮುನ್ನಡೆಸಲಿದ್ದಾರೆ. ಇವರ ಈ ಕಾರ್ಯಕ್ಕೆ ಆರ್ಸಿಬಿ ತಂಡವು ಐಪಿಎಲ್ ನ ಈ ಒಂದು ಹಂಗಾಮಿಗೆ 4 ಕೋಟಿ ರೂಪಾಯಿಗಳನ್ನು ಕೊಡಲಿದೆ.