IPL ಲಖನೌ ತಂಡದ ನಾಯಕತ್ವಕ್ಕೆ ಈ ಮೂವರು ದಿಗ್ಗಜರಿದ್ದಾರೆ ಸ್ಪರ್ಧೆಯಲ್ಲಿ; ನಿಮ್ಮ ಊಹೆ ಕರೆಕ್ಟಾ? ಚೆಕ್ ಮಾಡಿಕೊಳ್ಳಿ….

ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು 2 ಹೊಸ ತಂಡಗಳ ಘೋಷಣೆ ಮಾಡಲಾಯಿತು. ಅಹಮದಾಬಾದ್ ಮತ್ತು ಲಖನೌ ಇವೆರಡು ಐಪಿಎಲ್ ಸ್ಪರ್ಧೆಯಲ್ಲಿಯ 9 ನೇ ಮತ್ತು 10 ನೇ ಫ್ರೇಂಚಾಯಿಜಿಯಾಗಿದ್ದಾರೆ. ಈ ತಂಡಗಳ ಮಾಲೀಕರ ಮೇಲೆ ತಮ್ಮ ತಂಡಕ್ಕಾಗಿ ಆಟಗಾರರನ್ನು ಹಾಗೂ ನಾಯಕನನ್ನು ಆಯ್ಕೆ ಮಾಡುವ ದೊಡ್ಡ ಜವಾಬ್ದಾರಿ ಇದೆ. ಈ ಕೆಲಸ ಅಂದುಕೊಂಡಷ್ಟು ಸುಲಭವೇನಲ್ಲ.

ಈ ಕಂಪನಿಯ ಹೊಸ ತಂಡ…

ಆರ್ ಪಿ- ಎಸ್ ಜಿ ಗ್ರೂಪ್ ಲಖನೌ ಫ್ರೇಂಚಾಯಿಜಿಯನ್ನು 7090 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಸಿವಿಸಿ ಕ್ಯಾಪಿಟಲ್ ಗ್ರೂಪ್ ಅಹಮದಾಬಾದ್ ತಂಡದ ಮಾಲೀಕತ್ವವನ್ನು 5166 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.

ಲಖನೌ ತಂಡದ ನಾಯಕರಾಗಿ ಈ ಮೂವರಲ್ಲಿ ಒಬ್ಬರು ಆಯ್ಕೆಯಾಗಬಹುದು.

  1. ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾದ ಈ ಸ್ಟಾರ್ ಆಟಗಾರ ಸದ್ಯ ದೆಹಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ. ಇವರಿಗೆ ಈ ತಂಡದ ಪ್ಲೇಯಿಂಗ್ ಎಲೇವನ್ ನಲ್ಲಿ ಸುಲಭವಾಗಿ ಸ್ಥಾನ ಸಿಗುವದಲ್ಲದೆ ಲಖನೌ ಫ್ರೆಂಚಾಯಿಜಿಯು ನಾಯಕತ್ವದ ಜವಾಬ್ದಾರಿಯನ್ನು ಸಹ ನೀಡಬಲ್ಲದು. ಇವರು ಇದಕ್ಕೂ ಮೊದಲು ಪುಣೆ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಾಯಕತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ.

  1. ಶ್ರೇಯಸ್ ಅಯ್ಯರ್

ಶ್ರೇಯಸ್ ಅವರು ಮುಂದಿನ ವರ್ಷ ಬೇರೆ ತಂಡದ ಕಡೆಯಿಂದ ಆಡುವ ಸಾಧ್ಯತೆಗಳಿವೆ. ಕಾರಣ ದೆಹಲಿಯು ರಿಷಭ್ ಪಂತ್ ಗೆ ನಾಯಕತ್ವದ ಜವಾಬ್ದಾರಿಯನ್ನು ಮುಂದೆಯೂ ಇಡಲಿದೆ. ಇಂಥ ಪರಿಸ್ಥಿಯಲ್ಲಿ ಒಂದು ವೇಳೆ ಲಖನೌ ತಂಡ ಅವರಿಗೆ ಖರೀದಿಸಿ ನಾಯಕ ಪಟ್ಟವನ್ನು ಸಹ ನೀಡಬಹುದು. ಇವರು 2020 ರಲ್ಲಿ ದೆಹಲಿ ತಂಡವನ್ನು ಫೈನಲ್ ವರೆಗೆ ತೆಗೆದುಕೊಂಡು ಹೋಗಿದ್ದರು. ಲಖನೌ ಮಾಲಿಕರು ದೀರ್ಘ ಅವಧಿಯ ಸಲುವಾಗಿ ನಾಯಕನ ಶೋಧದಲ್ಲಿ ಇದ್ದರೆ ಶ್ರೇಯಸ್ ಅಯ್ಯರ್ ಅವರು ಒಳ್ಳೆಯ ಆಯ್ಕೆಯಾಗಲಿದ್ದಾರೆ.

  1. ಡೇವಿಡ್ ವಾರ್ನರ್

ಸನ್ ರೈಜರ್ಸ್ ಹೈದ್ರಾಬಾದ್ ತಂಡದಿಂದ ಡೇವಿಡ್ ವಾರ್ನರ್ ಹೊರಹೋಗುವುದು ಆದಷ್ಟು ನಿಶ್ಚಿತವಾಗಿದೆ. ಹೀಗಾಗಿ ಅವರು ಹರಾಜಿನಲ್ಲಿ ಇಳಿಯುವ ಸಾಧ್ಯತೆಗಳಿವೆ. ಇಂಥ ಪರಿಸ್ಥಿತಿಯಲ್ಲಿ ಲಖನೌ ತಂಡ ಅವರ ಕಡೆಗೆ ನಾಯಕತ್ವದ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ. ಈ ವರ್ಷ ಹೈದ್ರಾಬಾದ್ ತಂಡದ ಆಟ ಅಷ್ಟೊಂದು ಹೇಳಿಕೊಳ್ಳುವಂತೆ ಇರಲಿಲ್ಲ. ಹೀಗಾಗಿ ವಾರ್ನರ್ ಗೆ ಇದರ ಬೆಲೆ ತೆತ್ತಬೇಕಾಯಿತು. ಮೊದಲು ವಾರ್ನರ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು. ತದ ನಂತರ ಪ್ಲೇಯಿಂಗ್ ಇಲೆವೆನ್ ನಿಂದಲೂ ಹೊರಗೆ ಇಡುತ್ತಾ ಬಂದರು.