IPL 2022:ಸಂಕಷ್ಟಕ್ಕೆ ಸಿಲುಕುತ್ತಿದಂತೆಯೇ’ಈ’ ಪದಕ್ಕೆ ರಾಜೀನಾಮೆ ನೀಡಿದ ಸೌರವ್ ಗಾಂಗೂಲಿ!
ಮುಂದಿನ ವರ್ಷ ಐಪಿಎಲ್ ಆಡಲು ಎರಡು ಹೊಸ ತಂಡಗಳ ಘೋಷಣೆಯನ್ನು ಸೋಮವಾರ ದುಬೈ ನಲ್ಲಿ ಮಾಡಲಾಗಿದೆ. ಲಖನೌ ಮತ್ತು ಅಹಮದಾಬಾದ್ ಎಂಬ ಹೊಸ ಟೀಮ್ ಗಳ ರಚನೆ ಮಾಡಲಾಗಿದೆ. ಮುಂಬರುವ ಐಪಿಎಲ್ ಹರಾಜಿನಲ್ಲಿ ಈ ಎರಡು ಹೊಸ ತಂಡಗಳು ಸಹಭಾಗಿತ್ವ ತಗೆದುಕೊಂಡು ಆಟಗಾರರನ್ನು ಆಯ್ಕೆ ಮಾಡಕೊಳ್ಳಲಿವೆ. ಲಖನೌ ಫ್ರಾಂಚೈಸಿಯ ಮಾಲಿಕ ಸಂಜೀವ ಗೋಯಂಕಾ ಇದ್ದಾರೆ. ಇವರ RPSG ಗ್ರೂಪ್ ಲಖನೌ ಟೀಮ್ ನ್ನು ಸುಮಾರು 7090 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಗೋಯಂಕಾ ಇವರ ಗ್ರೂಪ್ ಗೆ ಲಖನೌ ಫ್ರಾಂಚೈಸಿ ದೊರೆತ ಮಾಹಿತಿ ಪ್ರಸಾರ ವಾಗುತ್ತಿದ್ದಂತೆಯೇ ಬಿಸಿಸಿಐ ಅಧ್ಯಕ್ಷ ಸೌರವ ಗಂಗೂಲಿ ಅವರು ವಿವಾದದಲ್ಲಿ ಸಿಲುಕಿ ಕೊಂಡಿದ್ದಾರೆ.
ಗೋಯಂಕಾ ಇವರು ಇಂಡಿಯನ್ ಸೂಪರ್ ಲೀಗ್ ನಲ್ಲಿಯ ಎಟಿಕೆ-ಮೋಹನ್ ಬಾಗಾನ್ ತಂಡದ ಸಹಮಾಲೀಕರಾಗಿದ್ದಾರೆ. ಗಂಗೂಲಿಯವರು ಸಹ ಅವರ ಟೀಮ್ ನಲ್ಲಿ ಸಹಭಾಗಿ ಯಾಗಿದ್ದರು. ಗಂಗೂಲಿಯವರು ಈ ಟೀಮ್ ನ ಸಂಚಾಲಕ ಮಂಡಳಿಯಲ್ಲಿ ಸಹಭಾಗಿ ಯಾಗಿದ್ದು ಸಂಜಯ್ ಗೋಯಂಕಾ ಇವರು ಸಂಚಾಲಕರಾಗಿದ್ದರೆ. ಹೀಗಾಗಿ ಹೊಸ ಟೀಮ್ ನಲ್ಲಿ ಸಹ ಗಾಂಗೂಲಿಯವರು ಸಹಭಾಗಿಯಾಗಿದ್ದರೆಯೇ? ಎಂಬ ಪ್ರಶ್ನೆ ನಿರ್ಮಾಣವಾಗಿದೆ.

ಕೊನೆಗೆ ಗಂಗೂಲಿಯವರು ಈ ಕುರಿತು ವಾದವಿವಾದಗಳನ್ನು ತೊಡೆದು ಹಾಕಲು ಎಟಿಕೆ ಮೋಹಮ್ ಬಾಗಾನ್ ಟೀಮ್ ನ ಸಂಚಾಲಕ ಪದಕ್ಕೆ ರಾಜೀನಾಮೆನೀಡಿದ್ದಾರೆ. ಗಾಂಗೂಲಿಯವರು ‘ಕ್ರಿಕಬಜ್’ ನೊಂದಿಗೆ ಮಾತನಾಡುತ್ತಿರುವಾಗ ಈ ಪದಕ್ಕೆ ರಾಜೀನಾಮೆ ಕೊಟ್ಟಿರುವದಾಗಿ ತಿಳಿಸಿದ್ದಾರೆ. ಇದಕ್ಕೂ ಮೊದಲು ಲಖನೌ ಟೀಮ್ ನ ಮಾಲೀಕರಾದ ಸಂಜೀವ ಗೋಯಂಕಾ ಅವರು ಸಹ ಗಾಂಗುಲಿಯವರು ಈ ಪದದ ರಾಜೀನಾಮೆ ನೀಡುವವರಿದ್ದಾರೆ ಎಂದು ತಿಳಿಸಿದ್ದರು.