IT ರೇಡ್; 8 ಮಷೀನ್ ಗಳು 24 ಗಂಟೆ ನಾನ್ ಸ್ಟಾಪ್ ಕ್ಯಾಶ್ ಕೌಂಟ್ ಮಾಡಿ ದಣಿದ ನಂತರ ಕಂಟೇನರ್ ನ್ನು ಕರೆಸಿಕೊಳ್ಳಲಾಯಿತು…!
ಉತ್ತರಪ್ರದೇಶದಲ್ಲಿ ಒಂದು ಕಡೆ ಚುನಾವಣೆಯ ಓಡಾಟ ಕಂಡು ಬರುತ್ತಿದ್ದರೆ ಇನ್ನೊಂದು ಕಡೆ ಕಾನ್ಪುರದಲ್ಲಿ ಪರ್ಫ್ಯೂಮ್ ಮಾರಾಟಗಾರನ ಕಡೆಗೆ 150 ಕೋಟಿ ರೂಪಾಯಿಗಳ ನಗದು ಹಣ ಸಿಕ್ಕ ಸುದ್ದಿಯೊಂದು ಜೋರಾಗಿ ವೈರಲ್ ಆಗುತ್ತಿದೆ. ಈ ವ್ಯಾಪಾರಿಯ ಮನೆಯಲ್ಲಿದ್ದ ಕಬರ್ಡ್ ಗಳು ಹಣದಿಂದ ತುಂಬಿಹೋಗಿದ್ದನ್ನು ನೋಡಿ ರೇಡ್ ಹಾಕಿದ ಅಧಿಕಾರಿಗಳು ಸಹ ಬೆಚ್ಚಿಬಿದ್ದಿದ್ದಾರೆ. ಇಷ್ಟೊಂದು ಹಣವನ್ನು ಎಣಿಸುವುದು ನಮ್ಮಿಂದ ಸಾಧ್ಯವಾಗದು ಎಂಬ ಅರಿವು ಆದಮೇಲೆ ಹಣ ಎಣಿಸುವುದಕ್ಕಾಗಿ 8 ಮಷೀನ್ ಗಳನ್ನು ತರಿಸಲಾಯಿತು. 24 ಗಂಟೆಗಳು ಕಳೆದರೂ ಸಹ ಹಣ ಎಣಿಸುವ ಪ್ರಕ್ರಿಯೆ ಇನ್ನೂ ಪೂರ್ಣವಾಗಿರಲಿಲ್ಲ. ಈಗ ಹಣ ರವಾನೆ ಮಾಡಲು ದೊಡ್ಡ ಕಂಟೇನರ್ ಒಂದನ್ನು ತರಲಾಗಿದೆ. ಈ ರೇಡ್ ಹಾಕಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಕೋಣೆಯಲ್ಲಿಯ ಹಣದ ಹಾಸಿಗೆ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಏತನ್ಮಧ್ಯೆ ಈ ವ್ಯಾಪಾರಿಯು ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ನಿಕಟವರ್ತಿ ಎಂದು ತಿಳಿದುಬಂದಿದೆ.
ಕಾನಪುರ್ ನಲ್ಲಿಯ ಪ್ರಸಿದ್ಧ ಪರ್ಫ್ಯೂಮ ವ್ಯಾಪಾರಿ ಪಿಯುಶ್ ಜೈನ್ ಅವರ ಕನೋಜ್ ನಲ್ಲಿಯ ಮನೆಯ ಮೇಲೆ ಗುರುವಾರದಂದು ರೇಡ್ ಹಾಕಲಾಯಿತು. ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ವಿಭಾಗ ಇಬ್ಬರು ಮಾಡಿದ ಸಂಯುಕ್ತ ಕಾರ್ಯಾಚರಣೆ ಇದಾಗಿದೆ. ಈ ಮನೆಯಲ್ಲಿರುವ ಎಲ್ಲ ಕಪಾಟುಗಳು ಕ್ಯಾಶ್ ನಿಂದ ತುಂಬಿದ್ದವು. ಇಲ್ಲಿರುವ ಹಣವನ್ನು ಎಣಿಸುವ ಸಲುವಾಗಿ 8 ಮಷೀನ್ ಗಳನ್ನು ತರಿಸಲಾಯಿತು. ಹಾಗೂ ಜೊತೆಗೆ ಬ್ಯಾಂಕಿನ ಅಧಿಕಾರಿಗಳನ್ನು ಸಹ ಕರೆಸಲಾಯಿತು. ಗುರುವಾರದಂದು ಪ್ರಾರಂಭವಾದ ಕಾರ್ಯಾಚರಣೆ ಶುಕ್ರವಾರದ ದಿನವೂ ಹಾಗೆಯೇ ಮುಂದುವರಿದಿತ್ತು. ಇಲ್ಲಿಯವರೆಗೆ ಒಟ್ಟು ಎಣಿಸಿದ ಹಣ 150 ಕೋಟಿ ರೂಪಾಯಿಗಳ ಮೇಲಿದೆ. ಈ ಕಾರ್ಯಾಚರಣೆಯ ಫೋಟೋಗಳಲ್ಲಿ ನೋಡಲಾಗಿ ಎಲ್ಲಿ ನೋಡಿದಲ್ಲಿ ಹಣವೇ ಹಣ ಕಾಣಿಸುತ್ತಿದೆ. ನೆಲಮನೆಯಲ್ಲಿಯೂ ಸಹ ಸಾಕಷ್ಟು ಪ್ರಮಾಣದಲ್ಲಿ ನಗದು ಹಣ ಸಿಕ್ಕಿರುವ ಮಾಹಿತಿ ಬಂದಿದೆ.
ದೊಡ್ಡ ಪ್ರಮಾಣದಲ್ಲಿ ಹಣ ಸಿಕ್ಕಿರುವ ಕಾರಣದಿಂದಾಗಿ ಆ ಹಣದ ವಿನಿಯೋಗವನ್ನು ಸಹ ಸುರಕ್ಷಿತವಾಗಿ ಮಾಡುವ ಜವಾಬ್ದಾರಿ ಜಿಎಸ್ಟಿ ಅಧಿಕಾರಿಗಳ ಮೇಲೆ ಹಾಗೂ ಆದಾಯ ತೆರಿಗೆ ಅಧಿಕಾರಿಗಳ ಮೇಲಿದೆ. ಇದೇ ಕಾರಣದಿಂದ ಅಧಿಕಾರಿಗಳು ಹಣವನ್ನು ರವಾನಿಸಲು ದೊಡ್ಡ ಕಂಟೇನರ್ ಅನ್ನು ತರಿಸಿಕೊಂಡಿದ್ದಾರೆ. ಈ ಕಂಟೇನರ್ ಅಲ್ಲಿ ಹಣ ತುಂಬುವ ಕೆಲಸ ಪೊಲೀಸ್ ಸೆಕ್ಯುರಿಟಿಯಲ್ಲಿ ಜೋರಾಗಿ ನಡೆದಿದೆ. ಮನೆಯಲ್ಲಿ ಉಪಸ್ಥಿತನಿದ್ದ ಮಗ ಪ್ರತ್ಯೂಷ್ ಜೈನ್ ನಿಗೆ ತಂಡವು ಚೆನ್ನಾಗಿ ತನಿಖೆ ಮಾಡುತ್ತಿದೆ.
ಅಖಿಲೇಶ್ ಅವರ ನಿಕಟವರ್ತಿ..
ಪಿಯುಶ್ ಜೈನ್ ಈತ ಕಾನ್ಪುರ್ ನಲ್ಲಿಯ ಪ್ರಸಿದ್ಧ ಪರ್ಫ್ಯೂಮ್ ವ್ಯಾಪಾರಿಯಾಗಿದ್ದಾನೆ. ಸಮಾಜವಾದಿ ಪಾರ್ಟಿಯ ಅಧ್ಯಕ್ಷರಾದ ಅಖಿಲೇಶ್ ಯಾದವ್ ಅವರ ನಿಕಟವರ್ತಿ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಜೈನ್ ಅವರು ಸಮಾಜವಾದಿ ಹೆಸರಿನ ಪರ್ಫ್ಯೂಮ್ ಸಹ ಲಾಂಚ್ ಮಾಡಿದ್ದರು. ಈ ತನಿಖೆಯಲ್ಲಿ ತುಂಬಾ ಮಹತ್ವದ ಮಾಹಿತಿಗಳು ಅಧಿಕಾರಿಗಳ ಕೈಗೆ ಸಿಕ್ಕಿವೆ. ಆ ಮಾಹಿತಿಯ ಪ್ರಕಾರ ಜೈನ್ ಅವರ ಕನೋಜ್, ಕಾನಪುರ್ ಜೊತೆಗೆ ಮುಂಬೈಯಲ್ಲಿಯೂ ಸಹ ಅನೇಕ ಆಫೀಸ್ ಗಳು ಇದ್ದು ಸುಮಾರು 40 ಕಂಪನಿಗಳ ಮಾಧ್ಯಮದಿಂದ ತಮ್ಮ ವ್ಯಾಪಾರವನ್ನು ಚಲಾಯಿಸುತ್ತಿದ್ದರು. ಜೈನ್ ಅವರು ದೊಡ್ಡ ಪ್ರಮಾಣದಲ್ಲಿ ಟ್ಯಾಕ್ಸ್ ವಂಚನೆ ಮಾಡಿರುವ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.