ಜಗತ್ತಿನ ಅತಿ ದುಬಾರಿ ಪಾರಿವಾಳವಿದು; ಇದರ ಬೆಲೆಯಲ್ಲಿ ಬೆಂಗಳೂರಂತಹ ಮಹಾನಗರದಲ್ಲಿ ಡಜನ್ ಫ್ಲ್ಯಾಟ್ ಖರೀದಿಸಬಹುದು!

ಒಂದು ಸಾಧಾರಣವಾದ ಪಾರಿವಾಳದ ಬೆಲೆ ಎಂದಾಗ ನಾವು ಲಕ್ಷ, ಕೋಟಿಗಳ ಲೆಕ್ಕದಲ್ಲಂತೂ ಊಹೆ ಮಾಡುವುದು ಸಾಧ್ಯವಿಲ್ಲ ಅಲ್ಲವೇ? ಆದರೆ ಇಲ್ಲೊಂದು ಪಾರಿವಾಳದ ಬೆಲೆಯನ್ನು ಕೇಳಿದರೆ ನೀವು ನಿಜವಾಗಲೂ ಅದನ್ನು ನಿಮ್ಮ ಮನಸ್ಸಿನಲ್ಲಿ ಊಹೆ ಕೂಡಾ ಮಾಡಿರುವುದಕ್ಕೆ ಸಾಧ್ಯವಿಲ್ಲ ಬಿಡಿ. ಏಕೆಂದರೆ ಈ ಪಾರಿವಾಳದ ಬೆಲೆ ಎಷ್ಟಿದೆಯೆಂದರೆ ಆ ಹಣದಲ್ಲಿ ಬೆಂಗಳೂರು, ಮುಂಬೈ ಅಥವಾ ದೆಹಲಿಯಂತಹ ಮಹಾನಗರದಲ್ಲಿ ಒಂದೊಂದು ಕೋಟಿ ಬೆಲೆಯ ಒಂದು ಡಜನ್ ಫ್ಲಾಟ್ ಗಳನ್ನು ಖರೀದಿ ಮಾಡಬಹುದಾಗಿದೆ. ಈ ಪಾರಿವಾಳ ನಿಜವಾಗಿಯೂ ನಮ್ಮ ನಿಮ್ಮ ಮನೆಯ ಛಾವಣಿಯ ಮೇಲೆ ಬಂದು ಕೂರುವ ಸಾಮಾನ್ಯ ಪಾರಿವಾಳವಂತೂ ಅಲ್ಲ.

ಈ ಪಾರಿವಾಳ ತನ್ನ ಪ್ರಭೇದದಲ್ಲಿ ಅತಿ ವೇಗವಾಗಿ ಹಾರುವ ಪಾರಿವಾಳ ಎನ್ನುವ ಹೆಗ್ಗಳಿಕೆ ಪಡೆದಿದ್ದು, ಕೆಲವು ದಿನಗಳ ಹಿಂದೆ ನಡೆದ ಹರಾಜಿನಲ್ಲಿ ಈ ಪಾರಿವಾಳ ವನ್ನು 14 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಈ ಪಾರಿವಾಳದ ಹೆಸರು ನ್ಯೂ ಕಿಮ್ ಎನ್ನಲಾಗಿದೆ. ಇದು ಬೆಲ್ಜಿಯನ್ ಜಾತಿಗೆ ಸೇರಿದ ಪಾರಿವಾಳವಾಗಿದ್ದು, ಇದು 14.14 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ. ಈ ಪಾರಿವಾಳವನ್ನು ಚೀನಾದ ಶ್ರೀಮಂತ ವ್ಯಕ್ತಿಯೊಬ್ಬನು ಪಿಪಾದ ಪಿಜನ್ ಸೆಂಟರ್ ನಲ್ಲಿ ನಡೆದ ಹರಾಜಿನಲ್ಲಿ ಓ ಪಾರಿವಾಳವನ್ನು ಖರೀದಿ ಮಾಡಿದ್ದೆನ್ನಲಾಗಿದೆ. ಈ ಪಾರಿವಾಳ ಖರೀದಿ ಮಾಡಲು ಇಬ್ಬರು ಚೀನಿಯರು ಹರಾಜಿನಲ್ಲಿ ದರ ಕೂಗಿದ್ದರನ್ನೆಲಾಗಿದೆ.

ಅಲ್ಲದೇ ಇವರಿಬ್ಬರೂ ಕೂಡಾ ತಮ್ಮ ಹೆಸರನ್ನು ಎಲ್ಲೂ ಕೂಡಾ ಬಯಲು ಮಾಡಿಲ್ಲ. ಹರಾಜಿನಲ್ಲಿ ಕೂಡಾ ಇವರು ಸೂಪರ್ ಡೂಪರ್ ಮತ್ತು ಹಿಟ್ ಮ್ಯಾನ್ ಎನ್ನುವ ಹೆಸರಿನಲ್ಲೇ ಹರಾಜನ್ನು ಕೂಗಿದ್ದರು ಎನ್ನಲಾಗಿದೆ. ಹಿಟ್ ಮ್ಯಾನ್ ಮೊದಲ ಬೆಲೆಯನ್ನು ಕೂಗಿದ್ದರು ಎನ್ನಲಾಗಿದೆ. ಆದರೆ ಕೊನೆಗೆ ಸೂಪರ್ ಡೂಪರ್ 1.9 ಮಿಲಿಯನ್ ಯುಎಸ್ ಡಾಲರ್ಸ್ ಅಂದರೆ ಸುಮಾರು 14.14 ಕೋಟಿ ರೂಪಾಯಿಗಳನ್ನು ಹರಾಜಿನಲ್ಲಿ ಕೂಗಿ ನ್ಯೂ ಕಿಮ್ ಅನ್ನು ಖರೀದಿ ಮಾಡಿದ್ದಾರೆ. ಕೆಲವರು ಈ ಹರಾಜಿನಲ್ಲಿ ಎರಡು ಹೆಸರಿನಿಂದ ಭಾಗವಹಿಸಿದ್ದವರು ಒಬ್ಬರೇ ವ್ಯಕ್ತಿ ಎಂದು ಕೆಲವರು ಹೇಳಿದ್ದಾರೆ.

ಇನ್ನು ಈ ಹರಾಜಿನಲ್ಲಿ ಪಾರಿವಾಳವನ್ನು ಸಾಕಿದ್ದ ವ್ಯಕ್ತಿಯ ಕುಟುಂಬ ಕೂಡಾ ಇತ್ತು ಎನ್ನಲಾಗಿದೆ. 76 ವರ್ಷದ ಗ್ಯಾಸ್ಟನ್ ವ್ಯಾನ್ ಡಿ ವುವರ್ ಮತ್ತು ಆತನ ಮಕ್ಕಳು ಈ ರೇಸಿಂಗ್ ಪಾರಿವಾಳಗಳನ್ನು ಸಾಕುತ್ತಾರೆ ಮತ್ತು ಅವುಗಳಿಗೆ ವೇಗವಾಗಿ ಹಾರುವ ತರಬೇತಿಯನ್ನು ನೀಡಿ ಮಾರಾಟ ಮಾಡುತ್ತಾರೆ. ಈ ಬಾರಿ ಅವರು ಮಾರಿದ ಪಾರಿವಾಳಗಳ ಸಂಖ್ಯೆ 445 ಹಾಗೂ ಗಳಿಸಿದ ಹಣ 52.15 ಕೋಟಿ ಎನ್ನಲಾಗಿದೆ‌. ನ್ಯೂ ಕಿಮ್ ನ ಪ್ರಬೇಧದ ಪಾರಿವಾಳಗಳು 15 ವರ್ಷಗಳ ಕಾಲ ಬದುಕ ಬಲ್ಲವು ಎನ್ನಲಾಗಿದೆ.

ಚೀನಾ ಮತ್ತು ಯೂರೋಪ್ ಗಳಲ್ಲಿ ಶ್ರೀಮಂತರು ಪಾರಿವಾಳಗಳ ರೇಸ್ ನಲ್ಲಿ ಕುದುರೆ ರೇಸಿನಂತೆ ಹಣ ಹಾಕಿ ಕೆಲವರು ಗಳಿಸಿದರೆ, ಕೆಲವರು ಹಣ ಹಾ ಳು ಕೂಡಾ ಮಾಡಿಕೊಳ್ಳುತ್ತಿದ್ದಾರೆ. ದ್ವಿತೀಯ ವಿಶ್ವ ಯು ಧ್ಧದ ಕಾಲದಲ್ಲಿ ಬೆಲ್ಜಿಯಮ್ ನ ಬಳಿ ಸುಮಾರು 2.50 ಲಕ್ಷ ಪಾರಿವಾಳಗಳ ಸೇನೆಯು ಇತ್ತಂತೆ. ಇವು ಸಂದೇಶಗಳನ್ನು ಕಳುಹಿಸಲು ಬಳಸುತ್ತಿದ್ದುದ್ದು ಮಾತ್ರವೇ ಅಲ್ಲದೇ ಪಾರಿವಾಳಗಳ ಫೆಡರೇಷನ್‌ ಕೂಡಾ ಇತ್ತು ಎನ್ನಲಾಗಿದೆ. ಐವತ್ತು ವರ್ಷಗಳ ಹಿಂದಿನವರೆಗೂ ಕೂಡಾ ಫ್ರಾನ್ಸ್ ನಲ್ಲಿ ಪಾರಿವಾಳಗಳನ್ನು ವಾತಾವರಣ ಬಗ್ಗೆ ತಿಳಿಯಲು ತರಬೇತಿ ನೀಡುತ್ತಿದ್ದರು ಎನ್ನಲಾಗಿದೆ.