ಬಿಲ್ ಗೇಟ್ಸ್ – ವಾರೆನ್ ಬಫೆಟ್ ಅಲ್ಲ, ಟಾಟಾ ಗ್ರೂಪ್ ಸಂಸ್ಥಾಪಕ ಜಮ್ಶೆಡ್ ಟಾಟಾ ವಿಶ್ವದ ಅತಿದೊಡ್ಡ ದಾನಿ! ಟಾಟಾ ಗ್ರೂಪ್ ದಾನ ಮಾಡಿದ ಮೊತ್ತ ಕೇಳಿದರೆ ದಂಗಾಗ್ತಿರಿ!

ವಿಶ್ವದ ಅತಿದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾದ ವಾರೆನ್ ಬಫೆಟ್ (Warren Buffet) ನಿನ್ನೆ ಬಿಲ್ ಗೇಟ್ಸ್ ಫೌಂಡೇಶನ್‌ಗೆ 30 ಸಾವಿರ ಕೋಟಿ ರೂ. ದಾನ ಮಾಡಿದರು! ಇದರ ನಂತರ ವಿಶ್ವದ ಅತಿದೊಡ್ಡ ದಾನಿ ಯಾರು ಎಂಬ ಚರ್ಚೆಯು ಮತ್ತೊಮ್ಮೆ ಸುರುವಾಗಿದೆ. ಆದರೆ ತುಂಬಾ ಜನರಿಗೆ ಗೊತ್ತಿರಲಿಕ್ಕಿಲ್ಲ, ಟಾಟಾ ಗ್ರೂಪ್‌ ನ ಸಂಸ್ಥಾಪಕ ಜಮ್ಶೆಡ್ ಟಾಟಾ (Jamsetji Tata) ಅವರ ಹೆಸರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಕಳೆದ 100 ವರ್ಷಗಳಲ್ಲಿ ಜಮ್ಸೆಟ್ಜಿ ಟಾಟಾ 102 ಅರಬ್ ಡಾಲರ್ (102 Billion Dollars) ದೇಣಿಗೆ ನೀಡುವ ಮೂಲಕ ವಿಶ್ವದ ಅತಿದೊಡ್ಡ ಲೋಕೋಪಕಾರಿ ಎಂದು ಹೊರಹೊಮ್ಮಿದ್ದಾರೆ! ಹುರುನ್ ರಿಸರ್ಚ್ ಪೋರ್ಟ್ (Hurun Research) ಮತ್ತು ಎಡೆಲ್ಗೈವ್ ಫೌಂಡೇಶನ್ (EdelGive Foundation) ಸಿದ್ಧಪಡಿಸಿದ ಟಾಪ್ -50 ದಾನಿಗಳ ಪಟ್ಟಿಯಲ್ಲಿ ಜಮ್ಸೆಟ್ಜಿ ಟಾಟಾ ಅಗ್ರಸ್ಥಾನದಲ್ಲಿದೆ.

ಜಮ್ಸೆಟ್ಜಿ ಟಾಟಾ 1892 ರಿಂದ ದಾನವನ್ನು ಪ್ರಾರಂಭಿಸಿದರು :
ವಿಶ್ವದ ಉನ್ನತ ದಾನಿಗಳ ಪಟ್ಟಿಯು ಟಾಟಾ ಒಂದು ಗ್ರುಪ್ ನ ಸ್ಥಾಪಕ ಎಂದು ತೋರಿಸುತ್ತದೆ, ಅದು ಉಪ್ಪಿನಿಂದ ಹಿಡಿದು ಸಾಫ್ಟ್‌ವೇರ್ ವರೆಗೆ ಎಲ್ಲವನ್ನೂ ಮಾಡುತ್ತದೆ. ಇದುವರೆಗೆ 74.6 ಅರಬ್ ಡಾಲರ್ ದೇಣಿಗೆ ನೀಡಿದ ಬಿಲ್ ಗೇಟ್ಸ್ (Bill Gates) ಮತ್ತು ಅವರ ಪತ್ನಿ ಮೆಲಿಂಡಾ ಅವರಂತಹ ಅನೇಕ ದತ್ತಿ ಸಂಸ್ಥೆಗಳಿಗಿಂತ ಟಾಟಾ ಒಂದು ಗ್ರುಪ್ ಮುಂದಿದೆ.

ಗೇಟ್ಸ್ ದಂಪತಿಗಳಲ್ಲದೆ, ವಾರೆನ್ ಬಫೆಟ್ ಇದುವರೆಗೆ 37.4 ಅರಬ್ ಡಾಲರ್, ಜಾರ್ಜ್ ಸೊರೊಸ್ 34.8 ಅರಬ್ ಡಾಲರ್ ಮತ್ತು ಜಾನ್ ಡಿ ರಾಕ್ಫೆಲ್ಲರ್ 26.8 ಅರಬ್ ಡಾಲರ್ ದೇಣಿಗೆ ನೀಡಿದ್ದಾರೆ. ಭಾರತದ ಟಾಟಾ ಸಮೂಹದ ಸಂಸ್ಥಾಪಕ ಜಮ್ಸೆಟ್ಜಿ ಟಾಟಾ ವಿಶ್ವದ ಅತಿದೊಡ್ಡ ಲೋಕೋಪಕಾರಿ ಎಂದು ಹುರುನ್ ಅಧ್ಯಕ್ಷ ಮತ್ತು ಮುಖ್ಯ ಸಂಶೋಧಕ ರೂಪರ್ಟ್ ಹೂಗ್ವರ್ಫ್ ಹೇಳಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಮ್ಸೆಟ್ಜಿ ತನ್ನ ಆಸ್ತಿಯ ಮೂರನೇ ಎರಡರಷ್ಟು ಹಣವನ್ನು ಟ್ರಸ್ಟ್‌ಗೆ ನೀಡಿದ್ದಾರೆ ಎಂದು ಅವರು ಹೇಳಿದರು. ಜಮ್ಸೆಟ್ಜಿ ಟಾಟಾ 1892 ರಿಂದ ದಾನ ಮಾಡಲು ಪ್ರಾರಂಭಿಸಿದರು. ಇದುವರೆಗೂ ಗ್ರುಪ್ ಕಡೆಯಿಂದ ದಾನ ಮುಂದುವರೆದೇ ಇದೆ.

ಈ ಪಟ್ಟಿಯಲ್ಲಿ ಎರಡನೇ ಭಾರತೀಯ ಅಜೀಮ್ ಪ್ರೇಮ್ ಜೀ :
ಹುರುನ್ ರಿಪೋರ್ಟ್ ಮತ್ತು ಎಡೆಲ್ಗೈವ್ ಫೌಂಡೇಶನ್ ನವರ ಈ ಪಟ್ಟಿಯಲ್ಲಿ ಎರಡನೇ ಭಾರತೀಯ ವಿಪ್ರೊ (Wipro) ಅವರ ಅಜೀಮ್ ಪ್ರೇಮ್ಜಿ (Azim Premji) ಅವರ ಹೆಸರು ಕೂಡ ದಾಖಲಾಗಿದೆ. ಅವರು ತಮ್ಮ ಒಟ್ಟು ಸಂಪತ್ತಿನಲ್ಲಿ ಸುಮಾರು 22 ಅರಬ್ ಡಾಲರ್ ಲೋಕೋಪಕಾರಿ ಕೆಲಸಗಳಿಗಾಗಿ ದಾನ ಮಾಡಿದ್ದಾರೆ.

ಕಳೆದ ಶತಮಾನದ ಅಗ್ರ 50 ದಾನಿಗಳ ಪಟ್ಟಿಯಲ್ಲಿಲ್ಲದ ಆಲ್ಫ್ರೆಡ್ ನೊಬೆಲ್ ಅವರಂತೆ ಕೆಲವು ಹೆಸರುಗಳಿವೆ ಎಂದು ಹೂಗ್ವರ್ಫ್ ಹೇಳಿದ್ದಾರೆ. ಪಟ್ಟಿಯಲ್ಲಿ 39 ಜನರು ಅಮೆರಿಕದವರು. ಇದರ ನಂತರ ಬ್ರಿಟನ್‌ನಿಂದ (ಯುಕೆ) 5 ಜನರು ಮತ್ತು ಚೀನಾದ 3 ಜನರು ಭಾಗಿಯಾಗಿದ್ದಾರೆ. ಇದರಲ್ಲಿ ಈಗಾಗಲೇ ಒಟ್ಟು 37 ದಾನಿಗಳು ಸಾವನ್ನಪ್ಪಿದ್ದಾರೆ.

ಈ ಟಾಪ್ – 50 ದಾನಿಗಳ ಪಟ್ಟಿಯಲ್ಲಿ ಕೇವಲ 13 ಜನರು ಮಾತ್ರ ಜೀವಂತವಾಗಿದ್ದಾರೆ. ಇಂದಿನ ಶತಕೋಟ್ಯಾಧಿಪತಿಗಳು ದಾನ ಮಾಡುವುದಕ್ಕಿಂತ ವೇಗವಾಗಿ ಗಳಿಸುತ್ತಿದ್ದಾರೆ ಎಂದು ಹೂಗ್ವರ್ಫ್ ಹೇಳಿದ್ದಾರೆ, ಅದರರ್ಥ ಬರಬರುತ್ತಾ ದಾನದ ಪ್ರಮಾಣ ಕಡಿಮೆಯಾಗುತ್ತದೆ. ಹೆಮ್ಮೆ ಪಡುವ ವಿಚಾರವೆಂದರೆ, ಇಡೀ ಜಗತ್ತಿನ ಅತಿ ದೊಡ್ಡ ದಾನ ಧರ್ಮ ಮಾಡುವ ವ್ಯಕ್ತಿಯಾಗಿ ಭಾರತದವರೇ ನಂಬರ್ ಒನ್ ಇದ್ದಾರೆ.