Video; ಜನರ ಭಕ್ತಿಯಲ್ಲಿ ಲೀನವಾಗಿ ಜೊತೆ ಜೊತೆಗೆ ಧುಮ್ಮಿಕ್ಕಿ ಕುಣಿದ ಮಂಗಗಳು; ನೋಡಿ ಅದ್ಭುತ ಭಕ್ತಿಯ ದೃಶ್ಯ.

ಮಂಗಗಳ ವಿಡಿಯೋಗಳು ಮನುಷ್ಯನಿಗೆ ಏನಾದರೂ ಇಂಟರೆಸ್ಟ್ ಕಂಟೆಂಟ್ ನೀಡುತ್ತವೆ. ಈ ವಿಡಿಯೋ ದೃಶ್ಯಗಳನ್ನು ನಿಜಕ್ಕೂ ಯಾರೂ ಮಿಸ್ ಮಾಡಿಕೊಳ್ಳುವುದಿಲ್ಲ. ಕಾರಣ ಮಂಗವಿದ್ದಲ್ಲಿ ಮಂಗಾಟ ಇದ್ದದ್ದೆ, ಅಲ್ವಾ? ಮಂಗನ ಮಂಗಾಟದ ವಿಡಿಯೋಗಳು ನೆಟ್ಟಿಗರಿಗೆ ಎಲ್ಲಕ್ಕೂ ಹೆಚ್ಚು ಇಷ್ಟವಾಗುತ್ತವೆ. ಇಂಥ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಣದಲ್ಲಿ ವೈರಲ್ ಆಗುತ್ತವೆ.

ಕೆಲವೊಂದು ಮಂಗಗಳು ತುಂಬಾ ವಿಚಿತ್ರವಾಗಿ ವರ್ತಿಸುತ್ತವೆ. ಈ ವರ್ತನೆ ಮನುಷ್ಯನಿಗೆ ತುಂಬಾ ಯೂನಿಕ್ ಅನಿಸುತ್ತದೆ. ಇದಕ್ಕೂ ಮೊದಲು ಮಂಗಗಳ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗಿವೆ. ಅವುಗಳಲ್ಲಿ ಒಂದು ಮಂಗ ಬಟ್ಟೆ ತೊಳೆಯುತ್ತಿದ್ದರೆ ಇನ್ನೊಂದು ಮಂಗ ಹುಡುಗನೊಬ್ಬನಿಗೆ ಬ್ರೂಸ್ ಲೀ ತರ ಕಿಕ್ ನೀಡುತ್ತೆ. ಮತ್ತೆ ಬೇರೊಂದು ಮಂಗ ಚೂರಿಯನ್ನು ಮಸೆಯುತ್ತಿದೆ.

ಸದ್ಯ ಇಲ್ಲಿ ನೋಡಲಿರುವ ವಿಡಿಯೋ ನಿಜಕ್ಕೂ ಅದ್ಭುತವಾಗಿದೆ. ಕಾರಣ ವಿಡಿಯೋದಲ್ಲಿ ಕಂಡುಬರುವ ದೃಶ್ಯ ಅಚ್ಚರಿ ಮೂಡಿಸುವಂತಿದೆ. ಇಲ್ಲಿ ಜನರೆಲ್ಲರೂ ಕೂಡಿ ಕೂಗು ಹಾಕುತ್ತಾ ಯಾವುದೋ ಒಂದು ಮೆರವಣಿಗೆಯಲ್ಲಿ ಜೊತೆಗೂಡಿ ತಾಳ ವಾದ್ಯಗಳೊಂದಿಗೆ ಭಕ್ತಿ ಪರವಶರಾಗಿ ನಡೆದಿದ್ದಾರೆ. ಈ ಸಂದರ್ಭದಲ್ಲಿ ದಾರಿ ಮಧ್ಯೆ ಮಂಗಗಳು ಭೇಟಿಯಾಗಿವೆ. ಜನರ ಈ ಜೋಷ್ ಕಂಡು ಮಂಗಗಳು ಸಹ ಈ ಭಕ್ತರ ಜೊತೆಗೆ ಭಕ್ತಿಯಲ್ಲಿ ಲೀನವಾಗಿ ಕುಣಿದಾಡಿವೆ, ನಲಿದಾಡಿವೆ. ಭಕ್ತಜನರು ಯಾವ ಪ್ರಕಾರ, ಭಕ್ತಿಯಿಂದ ನಲಿದಾಡುತ್ತಿದ್ದಾರೆ ಹಾಗೆಯೇ ಈ ಮಂಗಗಳು ಅವರನ್ನು ನೋಡಿ ಅವರಂತೆ ಅನುಕರಣ ಮಾಡುತ್ತಿವೆ. ಈ ದೃಶ್ಯ ನೋಡಲು ನಿಜಕ್ಕೂ ವಿಶೇಷವಾಗಿದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by R V…02 (@v_k_patil183_r_v_02)

ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ v_k_patil183_r_v_02 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 5 ಲಕ್ಷ 48 ಸಾವಿರ ವೀಕ್ಷಣೆಯನ್ನು ಪಡೆದಿದೆ, ಹಾಗೂ ಐವತ್ತು ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಇನ್ನು ಈ ವಿಡಿಯೋಗೆ ಸಂಬಂಧಿಸಿದ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡಿದವರ ಬಗ್ಗೆ ಹೇಳುವುದಾದರೆ, ಪ್ರಸ್ತುತ ವಿಡಿಯೋ ತುಂಬಾ ಜನರಿಗೆ ಇಂಪ್ರೆಸ್ ಮಾಡಿದೆ. ಒಬ್ಬ ಯೂಸರ್ ಈ ವಿಡಿಯೋವನ್ನು ನೋಡಿ, “ನಿಜವಾಗಿ ಇಷ್ಟೊಂದು ಮಂಗಗಳನ್ನು ನೋಡಿ ಸ್ವತಃ ಮಂಗನೇ ಫುಲ್ ಕನ್ಫ್ಯೂಸ್ ಆಗಿ ಕುಣಿಯುತ್ತಿದ್ದಾನೆ” ಎಂದಿದ್ದಾನೆ. ಇನ್ನೊಬ್ಬ ನೆಟ್ಟಿಗ, ಎಷ್ಟೇ ಆಗಲಿ ಮಂಗ ನಮ್ಮ ಪೂರ್ವಜನೆಯಾಗಿದ್ದಾನೆ ಎಂದು ಕಮೆಂಟ್ ಮಾಡಿದ್ದಾನೆ.