ನಿಗೂಢ ಗ್ರಾಮ : ಇಲ್ಲಿಗೆ ಬರುತ್ತಲೇ ಪಕ್ಷಿಗಳು ಹಾರುವುದನ್ನು ಮರೆಯುತ್ತವೆ! ಕಾರಣ ಕೇಳಿದರೆ ಅಚ್ಚರಿಯಾಗುತ್ತದೆ!

ಜತಿಂಗಾ ಭಾರತ ಸೇರಿದಂತೆ ವಿಶ್ವದಾದ್ಯಂತದ ಪಕ್ಷಿವಿಜ್ಞಾನಿಗಳಿಗೆ ಒಂದು ನಿಗೂಢ ಸ್ಥಳವಾಗಿದೆ, ಏಕೆಂದರೆ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು ಇಲ್ಲಿಗೆ ಆ’ತ್ಮ’ಹ'”ತ್ಯೆ ಮಾಡಿಕೊಳ್ಳಲು ಬರುತ್ತವೆ! ಆಶ್ಚರ್ಯವಾಗುತ್ತದಲ್ವಾ, ಆದರೆ ಇದು ಸತ್ಯ. ಇಂದು ನಿನ್ನೆಯಲ್ಲ, ಸಾಕಷ್ಟು ವರ್ಷದಿಂದ ಇದು ನಡೆಯುತ್ತಾ ಬಂದಿದೆ.

ರಹಸ್ಯ ಗ್ರಾಮ :
ಬೆಳಿಗ್ಗೆ ಎದ್ದು ದಾರಿಯಲ್ಲಿ ಹೋಗುತ್ತಾ ಸುತ್ತಲೂ ನೋಡಿದರೆ ಬಹಳಷ್ಟು ಪಕ್ಷಿಗಳು ಸ;:ತ್ತು ಬಿದ್ದಿರುವುದನ್ನು ಕಾಣಿಸುತ್ತವೆ, ಬಹುಶಃ ನೈಸರ್ಗಿಕ ವಿಪತ್ತು ಅವುಗಳನ್ನು ಬೇಟೆಯಾಡಿರಬಹುದು ಅಥವಾ ಕೆಲವು ನೈಸರ್ಗಿಕ ಬದಲಾವಣೆಯಿಂದ ಹೀಗಾಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಆದರೆ ಇದು ಪ್ರತಿ ವರ್ಷ ನಡೆಯುತ್ತಾ ಎಂದು ಕೇಳಿದರೆ ಅವರ ಬಳಿ ಉತ್ತರ ಇರುವುದಿಲ್ಲ.

ಗಾಳಿ ವಿ’ಷಮಯವಾಗಿರಬಹುದು, ಅದೇ ಪಕ್ಷಿಗಳ ಸಾ'”ವಿಗೆ ಕಾರಣವಾಗಬಹುದು ಎಂದು ಕೂಡ ಕೆಲವರು ಹೇಳುತ್ತಾರೆ, ಆದರೆ ಇದು ಪ್ರತಿವರ್ಷ ಒಂದು ನಿರ್ದಿಷ್ಟ ತಿಂಗಳಲ್ಲಿಯೇ ಏಕೆ ಆಗುತ್ತದೆ ಎಂದು ಕೇಳಿದರೆ ಅದಕ್ಕೆ ಮರು ಉತ್ತರ ಇರುವುದಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಹೀಗೆ ಆಗುತ್ತಿದ್ದು ಯಾಕೆ ಎಂಬುದು ಇನ್ನೂ ಸವಾಲಾಗಿಯೇ ಉಳಿದಿದೆ.

ನಿಸ್ಸಂಶಯವಾಗಿ ನಾವು ಅದನ್ನು ನೈಸರ್ಗಿಕ ರಹಸ್ಯವೆಂದು ಹೇಳಬಹುದು. ಮನಸೆಳೆಯುವ ಸೌಂದರ್ಯಕ್ಕೆ ಹೆಸರುವಾಸಿಯಾದ ರಾಜ್ಯವಾದರೂ ಅಸ್ಸಾಂನ ಅತ್ಯಂತ ಸುಂದರವಾದ ಮತ್ತು ಸಣ್ಣ ಹಳ್ಳಿಯಾದ ಈ ಜತಿಂಗಾ ವರ್ಷಕ್ಕೊಮ್ಮೆ ಅನೇಕ ಪಕ್ಷಿಗಳು ಒಗ್ಗೂಡಿ ಆ’ತ್ಮ’ಹ'”ತ್ಯೆ ಮಾಡಿಕೊಳ್ಳಲು ಬರುತ್ತವೆ ಎಂಬುದಕ್ಕೇನೇ ವಿಶ್ವಾದ್ಯಂತ ಪ್ರಸಿದ್ಧವಾಗಿದೆ.

ಸುಂದರ ಆದರೆ ನಿಗೂಢ :
ಜತಿಂಗವು ಅಸ್ಸಾಂನ ಉತ್ತರ ಕಾಚಾರ್ ಬೆಟ್ಟದಲ್ಲಿರುವ ಒಂದು ಸುಂದರ ಕಣಿವೆಯಾಗಿದೆ. ಈ ಪ್ರದೇಶವು ವಿಶೇಷವಾಗಿ ಕಿತ್ತಳೆ ತೋಟಗಳಿಗೆ ಹೆಸರುವಾಸಿಯಾಗಿದೆ ಮತ್ತು ಜನರು ಇಲ್ಲಿಗೆ ಭೇಟಿ ನೀಡಲು ದೂರದೂರದಿಂದ ಬರುತ್ತಾರೆ. ಮಳೆಗಾಲದಲ್ಲಿ ಮಂಜು ಕವಿದ ತಿಂಗಳುಗಳಲ್ಲಿ ಪಕ್ಷಿಗಳ ಆ’ತ್ಮ’ಹ'”ತ್ಯೆಯ ಘಟನೆಗಳು ಕಂಡುಬರುತ್ತವೆ, ಈ ಘಟನೆಗಳು ಸಂಜೆ 7 ರಿಂದ ರಾತ್ರಿ 10 ರವರೆಗೆ ಮಾತ್ರ ನಡೆಯುತ್ತವೆ.

ಗುಂಪಿನಲ್ಲಿ ಆ’ತ್ಮ’ಹ'”ತ್ಯೆ ಮಾಡಿಕೊಳ್ಳುತ್ತವೆ :
ಇಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಯಾವುದೇ ಒಂದು ಹಕ್ಕಿ ಆ’ತ್ಮ’ಹ'”ತ್ಯೆ ಮಾಡಿಕೊಳ್ಳುವುದಿಲ್ಲ, ಬದಲಿಗೆ ಒಟ್ಟಾಗಿ ಆ’ತ್ಮ’ಹ'”ತ್ಯೆ ಮಾಡಿಕೊಳ್ಳುತ್ತವೆ. ಹಾಗೆಯೇ ಈ ಆ’ತ್ಮ’ಹ'”ತ್ಯೆಯನ್ನು ಯಾವುದೋ ಒಂದು ಜಾತಿಯ ಪಕ್ಷಿಗಳು ಮಾಡಿಕೊಳ್ಳುವುದಿಲ್ಲ, ಅಲ್ಲಿ ಬರುವ ಎಲ್ಲಾ ರೀತಿಯ ವಲಸೆ ಹಕ್ಕಿಗಳು ಸಾವಿಗೆ ಶರಣಾಗುತ್ತವೆ.

ಕಿಂಗ್‌ಫಿಶರ್, ಟೈಗರ್ ಬೈಟನ್ ಮತ್ತು ಲಿಟಲ್ ಎಗ್ರೆಟ್‌ ನಂತಹ ಪಕ್ಷಿಗಳು ಈ ನಿಗೂಢ ಸಾ'”ವಿಗೆ ಬ’ಲಿಯಾಗುತ್ತವೆ. ಒಂದೇ ಸಮಯದಲ್ಲಿ ಅನೇಕ ಪಕ್ಷಿಗಳು ಏಕೆ ಆ’ತ್ಮ’ಹ'”ತ್ಯೆ ಮಾಡಿಕೊಳ್ಳುತ್ತವೆ ಎಂಬ ಪ್ರಶ್ನೆ ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ.

ಕಾರಣ ಗೊತ್ತಿಲ್ಲ :
ಇಲ್ಲಿಯವರೆಗೆ ಅನೇಕ ಸಂಶೋಧನೆಗಳು ನಡೆದಿವೆ ಮತ್ತು ಅನೇಕ ವಾದಗಳನ್ನು ಕೂಡ ಮಂಡಿಸಲಾಗಿದೆ. ಆದರೆ ಇಲ್ಲಿಯವರೆಗೆ ಅಂತಹ ಯಾವುದೇ ಸಂಪೂರ್ಣವಾಗಿ ಒಪ್ಪಿಕೊಳ್ಳುವಂಥ ಯಾವುದೇ ಥಿಯರಿಯನ್ನು ಯಾರೂ ಮಂಡಿಸಿಲ್ಲ. ಒಟ್ಟಾರೆಯಾಗಿ ಈ ರಹಸ್ಯವನ್ನು ಬಹಿರಂಗಪಡಿಸಲಾಗಿಲ್ಲ.

ಅನೇಕ ಪಕ್ಷಿವಿಜ್ಞಾನಿಗಳು ಈ ಅಪರೂಪದ ವಿದ್ಯಮಾನವು ಕಾಂತೀಯ ಬಲದಿಂದ ಉಂಟಾಗಿದೆ ಎಂದು ನಂಬುತ್ತಾರೆ. ಹಲವು ಪಕ್ಷಿವಿಜ್ಞಾನಿಗಳು ತೇವಾಂಶವುಳ್ಳ ಮತ್ತು ಮಂಜಿನ ವಾತಾವರಣದಲ್ಲಿ ಗಾಳಿ ವೇಗವಾಗಿ ಬೀಸಲು ಪ್ರಾರಂಭಿಸಿದಾಗ, ಪಕ್ಷಿಗಳು ರಾತ್ರಿಯ ಕತ್ತಲೆಯಲ್ಲಿ ದೀಪಗಳ ಸುತ್ತಲೂ ಹಾರಲು ಪ್ರಾರಂಭಿಸುತ್ತವೆ. ವೇಗವಾಗಿ ಹಾರುವಾಗ ಅದು ಹತ್ತಿರದ ಮರ ಮತ್ತು ಗೋಡೆಗೆ ಡಿಕ್ಕಿ ಹೊಡೆದು ಸಾ'”ಯುತ್ತವೆ ಎನ್ನುತ್ತಾರೆ. ಆದರೆ ಭಾರತದ ಬೇರೆಲ್ಲೂ ಯಾಕೆ ಹೀಗಾಗುವುದಿಲ್ಲ ಎಂದು ಕೇಳಿದರೆ ಸುಮ್ಮನಾಗುತ್ತಾರೆ

ಇನ್ನು ಸ್ಥಳೀಯ ನಿವಾಸಿಗಳು ಇದನ್ನು ದೆವ್ವ – ಭೂತದ ಕೆಲಸ ಎನ್ನುತ್ತಾರೆ, ಇದು ಕೂಡ ನಂಬಲು ಆಗಲಾರದ ಕಾರಣ. ಒಟ್ಟಿನಲ್ಲಿ ಇದು ಇವತ್ತಿಗೂ ನಿಗೂಢವಾಗಿಯೇ ಉಳಿದಿದೆ.
-Team Infotrend