ಜಿಯೋ ಜೊತೆ ಗೂಗಲ್ ಟೈ ಅಪ್ : ಕಡಿಮೆ ಬೆಲೆಗೆ ಸಿಗಲಿವೆ 5G ಸ್ಮಾರ್ಟ್ ಫೋನ್!

ಚೀನಾ ಫೋನುಗಳ ಹಾವಳಿ ತಪ್ಪಿಸಲು ಇದೊಂದು ಒಳ್ಳೆ ಪ್ರಯತ್ನವಾಗಿದ್ದು, ದೇಶಿ ಕಂಪನಿ ಜಿಯೋ ಜೊತೆಗೆ ಗೂಗಲ್ ಕೈ ಜೋಡಿಸಿದ್ದು, ಕೈಗೆಟುಕುವ ದರದಲ್ಲಿ ಸ್ಮಾರ್ಟ್ ಫೋನ್ ಗಳು ದೊರಕಲಿವೆ. ನಿಮಗೆ ಗೊತ್ತಿರುವಂತೆ ಸಧ್ಯ ಭಾರತದಲ್ಲಿ Xiaomiಕಂಪನಿಯ ಪೋನುಗಳೇ ಅತಿ ಹೆಚ್ಚು ಮಾರಾಟವಾಗುತ್ತಿದ್ದು, ಇದು ಚೈನಾ ಮೂಲದ್ದು.

ಅದರ ಜೊತೆ ಸ್ಪರ್ದಿಸಲಾರದೆ, ಹಲವಾರು ಸ್ಮಾರ್ಟ್ ಫೋನ್ ಗಳುಗೆ ಬೇಡಿಕೆಯೇ ಇಲ್ಲದಂತಾಗಿದೆ. ಹೀಗಿರುವಾಗ ಗೂಗಲ್ ನವರು ಜಿಯೋದೊಂದಿಗೆ ಸೇರಿ ಭಾರತದ ಮಾರುಕಟ್ಟೆಗೆ ಕೈಗೆಟುಕುವ ದರದ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಜಿಯೋ ಈ ಮೊದಲೇ ಸಾಮಾನ್ಯ ಜನರೂ ಕೂಡ ಇಂಟರ್ ನೆಟ್ ಬಳಸುವ ಹಾಗೆ ಯೋಜನೆ ರೂಪಿಸಿ ಅದರಲ್ಲಿ ಯಶಸ್ವಿಯಾಗಿದೆ. ನಂತರ ಕೂಡ ಅವರ ಯೋಜನೆಗಳು ಕೈಗೆಟುಕುವ ಹಾಗೆಯೇ ಇವೆ.

ಅದಕ್ಕಾಗೇ ದೈತ್ಯ ಡಿಜಿಟಲ್ ಕಂಪನಿ ಗೂಗಲ್ ಜಿಯೋ ಜೊತೆಗೆ ಸಖ್ಯ ಬೆಳೆಸಿದೆ‌. ಈ ಬಗ್ಗೆ ಸ್ವತಃ ಗೂಗಲ್ ಸಿಇಓ ಸುಂದರ್ ಪಿಚೈ ಮಾಹಿತಿ ನೀಡಿದ್ದು, “ನಾವು ರಿಲಯನ್ಸ್ ಜಿಯೋ ಜೊತೆಗೆ ನಿಕಟವಾಗಿ ತೊಡಗಿಸಿಕೊಂಡಿದ್ದು, ಈ ಯೋಜನೆಯೆ ಕೆಲಸ ನಡೆಯುತ್ತಿದೆ” ಎಂದು ಹೇಳಿಕೆ ನೀಡಿದ್ದಾರೆ.

ಈ ಸ್ಮಾರ್ಟ್ ಫೋನ್ ಬಿಡುಗಡೆ ಯಾವಾಗ ಏನು, ಎತ್ತ ಇವುಗಳ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲವಾದೂ, ಕಡಿಮೆ ಬೆಲೆಯ ಉತ್ತಮ ಫೋನ್ ತಯಾರಿಕೆಗೆ ನಾವು ಒತ್ತು ಕೊಟ್ಟಿದ್ದೇವೆ ಎಂದು ಸುಂದರ್ ಪಿಚೈ ಹೇಳಿಕೊಂಡಿದ್ದಾರೆ. 2020 ರಲ್ಲಿಯೇ ಇವೆರಡೂ ಕಂಪನಿ ಸ್ನೇಹಿತರಾಗುವತ್ತ ಮುನ್ನಡೆದಿದ್ದವು.

ಕಳೆದ ವರ್ಷ ಗೂಗಲ್ ಜಿಯೋ ಫ್ಲಾಟ್ ಫಾರ್ಮ್ ನಲ್ಲಿ 33, 737 ಕೋಟಿ ರುಪಾಯಿಗಳ ಶೇರು ಖರೀದಿ ಮಾಡಿತ್ತು. ಇದಕ್ಕೂ ಮೊದಲು ಫೇಸ್ಬುಕ್ ಕೂಡ ಭಾರತದ ಜಿಯೋ ಫ್ಲಾಟ್ ಫಾರ್ಮ್ ನಲ್ಲಿ ಭಾರಿ ಮೊತ್ತದ ಹೂಡಿಕೆ ಮಾಡಿತ್ತು. ಈಗ ಗೂಗಲ್ ಕೂಡ ಜೊತೆಯಾಗಿದೆ.

ಇನ್ನು ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಕಾರ್ಯಕ್ಕೆ ವೇಗ ನೀಡಲು ಗೂಗಲ್ 75 ಸಾವಿರ ಕೋಟಿ ರುಪಾಯಿಯನ್ನು ಮುಂದಿನ ಐದು ವರ್ಷಗಳಲ್ಲಿ ಹೂಡಿಕೆ ಮಾಡುವುದಾಗಿ ಗೂಗಲ್ ಕಳೆದ ವರ್ಷವೇ ಘೋಷಿಸಿತ್ತು. ಒಟ್ಟಾರೆಯಾಗಿ ಜಿಯೋ ಹಾಗೂ ಗೂಗಲ್ ಎರಡೂ ಸೇರಿ ಸಾಮಾನ್ಯ ಜನರಿಗೆ ಒಳ್ಳೆ ಫೋನ್ ಹಾಗೂ ಒಳ್ಳೆ ಸೇವೆ ಕೊಡುವ ಯೋಜನೆಯಲ್ಲಿವೆ.
-Team Infotrend