ಪದವಿ ಆದವರಿಗೆ SBI ನಲ್ಲಿ ಉದ್ಯೋಗಾವಕಾಶ : ಪ್ರಾದೇಶಿಕ ಭಾಷೆಯಲ್ಲಿ ಆನ್ ಲೈನ್ ಪರೀಕ್ಷೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಡಿಗ್ರಿ ಆದವರಿಗೆ ಒಳ್ಳೆ ಅವಕಾಶವಿದ್ದು, ದೇಶಾದ್ಯಂತ ಇರುವ ಎಸ್ಬಿಐ ಬ್ರಾಂಚ್ ಗಳಲ್ಲಿ ಕ್ಲರಿಕಲ್ ಕೇಡರ್ ನಲ್ಲಿ ಜ್ಯೂನಿಯರ್ ಅಸೋಸಿಯೇಟ್ಸ್ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕೆಳಗಿನ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಸಬಹುದು.
ಎಸ್ಬಿಐ ನೇಮಕಾತಿ ರಾಷ್ಟಮಟ್ಟದಲ್ಲಿ ನಡೆಯುತ್ತದಾದರೂ, ಅಭ್ಯರ್ಥಿಗಳು ಒಂದು ರಾಜ್ಯದಿಂದ ಮಾತ್ರ ಅರ್ಜಿ ಸಲ್ಲಿಸಬಹುದು. ಅವರು ಯಾವ ರಾಜ್ಯದಿಂದ ಅರ್ಜಿ ಸಲ್ಲಿಸುತ್ತಾರೋ ಆ ರಾಜ್ಯದ ಪ್ರಾದೇಶಿಕ ಭಾಷೆಯನ್ನು ಮಾತನಾಡಲು, ಬರೆಯಲು, ಓದಲು ಬರಬೇಕು. ಹತ್ತನೇ ತರಗತಿ ಅಥವಾ ದ್ವಿತಿಯ ಪಿಯುಸಿಯಲ್ಲಿ ಆ ಪ್ರಾದೇಶಿಕ ಭಾಷೆಯನ್ನು ಅಧ್ಯಯನ ಮಾಡಿರಬೇಕು.
ಹಲವು ರಾಜ್ಯಗಳಲ್ಲಿ ಭರ್ತಿ ಮಾಡಲಿರುವ ಹುದ್ದೆಗಳ ವಿವರ :
ಗುಜರಾತ್ – 942, ಮಹಾರಾಷ್ಟ್ರ – 640, ಚಂಡಿಗಡ – 510, ಕರ್ನಾಟಕ – 426, ತಮಿಳುನಾಡು – 475, ದೆಹಲಿ – 369, ಹೈದರಾಬಾದ್ – 275, ಭೂಪಾಲ್ – 208 ಹೀಗೆ ದೇಶಾದ್ಯಂತ ಒಟ್ಟು 5121 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.
ಇನ್ನು ಕರ್ನಾಟಕದಲ್ಲಿ ನೇಮಕ ಮಾಡಿಕೊಳ್ಳುವ ಹುದ್ದೆಗಖ ಬಗ್ಗೆ ಹೇಳಬೇಕೆಂದರೆ, ಇಲ್ಲಿನ 426 ಹುದ್ದೆಗಳಲ್ಲಿ 26 ಬ್ಯಾಕ್ ಲಾಗ್ ಹುದ್ದೆ ಇವೆ, ಸಾಮಾನ್ಯವರ್ಗದವರಿಗೆ 160, S.C ಯವರಿಗೆ 64, S.T ಯವರಿಗೆ 49, ಆರ್ಥಿಕವಾಗಿ ಹಿಂದುಳಿದವರಿಗೆ 40 ಹೀಗೆ ಹಂಚಿಕೆ ಮಾಡಲಾಗಿದೆ. ಸಂಪೂರ್ಣ ವಿವರ ಅರ್ಜಿ ಅಲ್ಲಿಸುವಾಗ ನೋಡಬಹುದು.
ಅಭರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿರಬೇಕು, ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. ಅರ್ಜಿದಾರರಿಗೆ ಕನಿಷ್ಟ 20, ಗರಿಷ್ಟ 28 ವಯಸ್ಸಾಗಿರಬೇಕು. ಮಾಸಿಕ ಸಂಬಳ 19,900 ರಿಂದ 47,920 ರೂ. ಇರುತ್ತದೆ.
ಆಯ್ಕೆ ಪ್ರಕ್ರಿಯೆಯೆ ಮೊದಲ ಭಾಗವಾಗಿ ಆನ್ ಲೈನ್ ಪರೀಕ್ಷೆ ನಡೆಸಲಾಗುವುದು, ಉಳಿದ ವಿವರ ವೆಬ್ ಸೈಟ್ ನಲ್ಲಿ ಲಭ್ಯವಿವೆ. ಅರ್ಜಿ ಶುಲ್ಕ : ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ ಅರ್ಜಿದಾರರನ್ನು ಹೊರತುಪಡಿಸಿ ಉಳಿದವರು 750/- ರೂ. ಪಾವತಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-05-2021, ಹೆಚ್ಚಿನ ಮಾಹಿತಿಗೆ bank.sbi ಗೆ ಭೇಟಿ ಕೋಡಿ.
-Team Infotrend