Video; ಜಾಲಿ ಮೂಡ್ ನಲ್ಲಿ ಸಂಚರಿಸುತ್ತಿದ್ದ ಕರಡಿಗೆ ಹಠಾತ್ ಎದುರಾಯಿತು ಕನ್ನಡಿ; ತಾಳಿತು ಕ್ಷಣದಲ್ಲಿ ಪ್ರಚಂಡ ಭೈರವನ ರೂಪ..!
ಕಾಡು ಪ್ರಾಣಿಗಳ ಮನಸ್ಸಿನಲ್ಲಿ ಯಾವಾಗ ಏನು ಬರುತ್ತದೆ? ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಅದರಲ್ಲೂ ಕರಡಿ ತುಂಬಾ ಮೂಡಿ ಮತ್ತು ಜಾಲಿ ಪ್ರಾಣಿ. ಈ ಪ್ರಾಣಿಯ ಮಹಾ ಭಯಂಕರ ಹಾಗೂ ಅಷ್ಟೇ ವಿಶೇಷ ವಿಡಿಯೋ ಒಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ಕರಡಿಯೊಂದು ಕಾಡಿನಲ್ಲಿ ಮುಕ್ತವಾಗಿ ತನ್ನದೇ ಲೋಕದಲ್ಲಿ ಜಾಲಿಯಾಗಿ ಸುತ್ತಾಡುತ್ತಿದೆ. ಅದಕ್ಕೆ ಜಗತ್ತಿನ ಯಾವ ಪರಿವೆಯೇ ಇಲ್ಲ ಎಂದು ವಿಡಿಯೋ ನೋಡುವಾಗ ಕಂಡು ಬರುತ್ತಿದೆ. ಅದು ತಿರುಗಾಡುತ್ತಿರಬೇಕಾದರೆ ಅಲ್ಲಿಯೇ ಮರಕ್ಕೆ ತೂಗು ಹಾಕಿದ ಕನ್ನಡಿಯೊಂದು ಅದಕ್ಕೆ ಕಾಣಿಸುತ್ತದೆ. ಸಹಜವಾಗಿ ಕರಡಿಯು ಆ ಕನ್ನಡಿಯ ಎದುರು ಬರುತ್ತದೆ. ಕನ್ನಡಿಯ ಎದುರು ಬರುವದೇ ತಡ ಕರಡಿಯು ತನ್ನ ನಿಯಂತ್ರವನ್ನೇ ಕಳೆದುಕೊಂಡು ಬಿಡುತ್ತದೆ. ಹಾಗೂ ತಲೆ ಕೆಟ್ಟವರಂತೆ ವರ್ತಿಸಲು ಶುರು ಮಾಡುತ್ತದೆ. ಅದು ಮೊದಲು ಕನ್ನಡಿಯ ಹಿಂದೆ ಬಂದು ಇನ್ನೊಂದು ಕರಡಿ ಇದೆಯೆಂದು ನೋಡುತ್ತದೆ. ಅಲ್ಲಿ ಏನೂ ಕಾಣದೆ ಇದ್ದಾಗ ಮತ್ತೆ ಎದುರಿಗೆ ಬಂದು ಕನ್ನಡಿಯಲ್ಲಿ ನೋಡುತ್ತದೆ. ಆಗ ಮಾತ್ರ ಅದರ ಕೋಪ ನೆತ್ತಿಗೆ ಏರಿ ಕನ್ನಡಿಯನ್ನು ಮರದಿಂದ ಬೇರ್ಪಡಿಸಿ ಕಿತ್ತಿ ಕೆಳಗೆ ಬಿಸಾಕಿ ಬಿಡುತ್ತದೆ. ಈ ಸಂದರ್ಭದಲ್ಲಿ ಕರಡಿಯು ಅಕ್ಷರಶಃ ರೌದ್ರ ರೂಪ ತಾಳಿದ್ದನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದು..
ವಿಡಿಯೋ ನೋಡಿ
He doesn’t like mirror… pic.twitter.com/Xb0QgPUcdb
— Dr.Samrat Gowda IFS (@IfsSamrat) July 16, 2022
ಈ ವಿಡಿಯೋವನ್ನು ಟ್ವಿಟರ್ ನಲ್ಲಿ IFS ಆಫೀಸರ್ ಡಾ. ಸಾಮ್ರಾಟ್ ಗೌಡ ಅವರು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಜೊತೆಗೆ He doesn’t like mirror… ಎಂದು ಕ್ಯಾಪ್ಶನ್ ನೀಡಿದ್ದಾರೆ.