VIDEO : ಭಯದ ವಾತಾವರಣದಲ್ಲಿ ನೀರು ಕುಡಿದರೂ ವಿಷವಾಗುತ್ತೆ, ಭಯ ಬಿಟ್ಟು ಬದುಕಿ -ತಮ್ಮದೇ ಆದ ಶೈಲಿಯಲ್ಲಿ ಧೈರ್ಯ ಹೇಳಿರುವ ಸಾಹಿತಿ ಕೆ ಕಲ್ಯಾಣ್

ಎಲ್ಲ ಚಾನೆಲ್ ಗಳು, ಪತ್ರಿಕೆಗಳು ಜನರಲ್ಲಿ ಕೇವಲ ಭಯ ಬಿತ್ತುತ್ತಿವೆ. ಧೈರ್ಯ ಹೇಳುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಪರಸ್ಥಿತಿ ಹೇಗಾಗಿದೆಯೆಂದರೆ, ಕೊರೋನ ಬಂದವರೆಲ್ಲ ಸತ್ತೇ ಹೋಗುತ್ತಾರೇನೋ ಅನಿಸುವಷ್ಟು ಭಯ ಜನರಲ್ಲಿ ತುಂಬಿಕೊಂಡಿದೆ. ಹೀಗಿರುವಾಗ ಪ್ರಜ್ಞಾವಂತರು ಜನರಲ್ಲಿ ಧೈರ್ಯ ತುಂಬುವುದರ ಜೊತೆಗೆ ಜಾಗರೂಕತೆ ಮೂಡಿಸಬೇಕು‌. ಆ ಕೆಲಸವನ್ನು ಕೆ.ಕಲ್ಯಾಣ್ ಸಮರ್ಥವಾಗಿ ಮಾಡಿದ್ದಾರೆ ಅನ್ನಬಹುದು.

ನ್ಯೂಸ್ ಫರ್ಸ್ಟ್ ಕನ್ನಡ ದವರಿಗೆ ಮಾತಾಡಿರುವ ಅವರ ವಿಡಿಯೊ ಕೆಳಗಿದೆ‌. ಅದರಲ್ಲಿ ಕೆ.ಕಲ್ಯಾಣ್ ಎಳೆಎಳೆಯಾಗಿ ಪರಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಕಡ್ಡಿ ಇದ್ದುದನ್ನು ಗುಡ್ಡ ಮಾಡುವ ಮೀಡಿಯಾಗಳ ಮಧ್ಯೆ ಇಂಥದೊಂದು ಧೈರ್ಯ ಹೇಳುವ ತುಣುಕುಗಳನ್ನು ಪ್ರಸಾರ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ.

ದೇಶದಲ್ಲಿ ದಿನಕ್ಕೆ ನಾಲ್ಕು ಲಕ್ಷಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹಾಗೆಯೇ ದಿನಕ್ಕೆ ಲಕ್ಷಗಟ್ಟಲೇ ಸೋಂಕಿತರು ಸೋಂಕುಮುಕ್ತರಾಗಿ ಮನೆ ಸೇರಿಕೊಳ್ಳುತ್ತಿದ್ದಾರೆ. ಸಾವಿರ ಸಂಖ್ಯೆಯಲ್ಲಿ ಸಾವು ಕೂಡ ಆಗುತ್ತವೆ. ಆದರೆ ನೀವು ಗಮನಿಸಿರಬಹುದು : ಮಾಧ್ಯಮಗಳು ಸಾವಿನ ಸಂಖ್ಯೆಗೇ ಹೆಚ್ಚು ಒತ್ತು ಕೊಡುತ್ತವೆಯೇ ಹೊರತು, ಡಿಸ್ಚಾರ್ಜ್ ಆಗಿ ಮನೆಗೆ ಹೋದವರನ್ನು ಹೈಲೈಟ್ ಮಾಡುವುದೇ ಇಲ್ಲ.

ಕರ್ನಾಟಕದಲ್ಲೂ ದಿನಕ್ಕೆ ಸಾವಿರಾರು ಜನ ಹುಷಾರಾಗಿ ಮನೆಗೆ ಹೋಗುತ್ತಾರೆ. ಮಾಧ್ಯಮಗಳು ಹಾಗೆ ಡಿಸ್ಚಾರ್ಜ್ ಆದವರನ್ನು ಮಾತಾಡಿಸಿ, ಅವರ ಅನುಭವ ಕೇಳಿ, ಅವರಿಂದ ಧೈರ್ಯ ಹಳಿಸುವ ಕೆಲಸವನ್ನು ಮಾಡಬಹುದಲ್ವಾ? ಹೀಗೆ ಮಾಡುವುದರಿಂದ ಜನ ಭಯದಿಂದ ಸಾಯುವುದು ತಪ್ಪುತ್ತದೆ‌. ಕೆಳಗೆ ವಿಡಿಯೊ ಇದೆ ನೋಡಿ…

ಈಗಲೂ ಕೆಲವು ಕಡೆ ಪಾಸಿಟಿವ್ ಎಂದಾಕ್ಷಣ ಹೆದರಿ ಜೀವ ಕಳೆದುಕೊಳ್ಳುವ ಘಟನೆಗಳು ವರದಿಯಾಗುತ್ತಿವೆ. ಮಾಧ್ಯಮಗಳು ಹೂಗೆ ಧೈರ್ಯ ಕೊಡುವುದರಿಂದ ಜನರಿಗೆ ಉಪಕಾರ ಮಾಡಿದ ಹಾಗಾಗುತ್ತದೆ. ಅಲ್ವಾ?
ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ.
-Team Infotrend