ಜವಾರಿ ಐಡಿಯಾ: ಕೈ ಸ್ಪರ್ಶ ಮಾಡಿದೇನೆ ನೆಲದ ಮೇಲಿಂದ ಸೆಗಣಿ ಎತ್ತುವ ಈ ಜವಾರಿ ಐಡಿಯಾ! ರೈತನ ಈ ಅದ್ಭುತ ಟ್ರಿಕ್ ವೈರಲ್…
ಅನೇಕ ರೈತರು ತಮ್ಮ ತೋಟದಲ್ಲಿ ಏನಾದರೂ ಹೊಸ ಹೊಸ ಸಂಶೋಧನೆಗಳನ್ನು ರೂಪಿಸುವ ವೃತ್ತಿ ಹೊಂದಿರುತ್ತಾರೆ. ತೋಟದಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಲು ರೈತರು ಈಗಾಗಲೇ ಅನೇಕ ಯಂತ್ರಗಳನ್ನು ತಯಾರಿಸಿದ್ದನ್ನು ಈ ಮೊದಲು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಇಂಟರ್ ನೆಟ್ ನ ಹೆಚ್ಚುತ್ತಿರುವ ಉಪಯೋಗದಿಂದಾಗಿ ರೈತರು ತಯಾರಿಸಿದ ಯಂತ್ರಗಳ ಮಾಹಿತಿ ಬಹು ಬೇಗ ಎಲ್ಲಕಡೆ ಹಬ್ಬುತ್ತಿದೆ.
ಈಗ ರೈತರೊಬ್ಬರು ತಮ್ಮ ಕಲ್ಪನೆಯಿಂದ ತಯಾರಿಸಿದ ಈ ಟ್ರಿಕ್ಸ್ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ. ಹೀಗಾಗಿ ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ರೈತ ಒಂದು ತಂತ್ರಜ್ಞಾನ ಬಳಸಿ ಕೈ ಸ್ಪರ್ಶ ಮಾಡದೆ ನೆಲದ ಮೇಲೆ ಬಿದ್ದ ದನಗಳ ಸೆಗಣಿ ತೆಗೆಯುವ ಟ್ರಿಕ್ಸ್ ಬಗ್ಗೆ Z ನ್ಯೂಸ್ ವರದಿ ಮಾಡಿದೆ.
ತೋಟದಲ್ಲಿ, ದನಗಳ ಕೊಟ್ಟಿಗೆಯಲ್ಲಿ ಅಥವಾ ಮನೆಯಂಗಳದಲ್ಲಿ ದನಗಳು ಇದ್ದರೆ ಆ ಭಾಗ ಸದಾ ಸ್ವಚ್ಛತೆಯಿಂದ ಕೊಡಿರಬೇಕೆಂದು ರೈತ ಪರಿಶ್ರಮ ತೆಗೆದುಕೊಳ್ಳುತ್ತಾನೆ. ಇದರಲ್ಲಿ ಶ್ರಮ ಮತ್ತು ಸಮಯ ತುಂಬಾ ನಷ್ಟವಾಗುತ್ತದೆ. ಆದರೆ ಈ ವೀಡಿಯೊದಲ್ಲಿಯ ಐಡಿಯಾದಿಂದ ಈಗ ರೈತನಿಗೆ ಇದು ಸಹಜ ಸುಲಭವಾಗಲಿದೆ.
ಕೈಗಳ ಉಪಯೋಗ ಮಾಡದೇನೆ ದನಗಳ ಸೆಗಣಿ ಎತ್ತಿ ಕೊಟ್ಟಿಗೆ, ಅಂಗಳ ಸ್ವಚ್ಚವಾಗಿಡಲು ರೈತ ತಯಾರಿಸಿದ ಈ ಉಪಕರಣ ಸದ್ಯ ವಿಶೇಷ ಚರ್ಚೆಯಲ್ಲಿದೆ. ಈ ವೀಡಿಯೋವನ್ನು ‘ಜುಗಾಡು ಲೈಫ್ ಹ್ಯಾಕ್’ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಇದಕ್ಕೆ ಸೆಗಣಿ ಎತ್ತುವ ದೇಸಿ ಜುಗಾಡು ಉಪಕರಣ ಎಂದು ಕ್ಯಾಪ್ಶನ್ ನೀಡಲಾಗಿದೆ.
ನೋಡಿ ಈ ವಿಡಿಯೋ…
View this post on Instagram