ತಲೈವಿ’ ಚಿತ್ರದ ನಂತರ ಈಗ ಮೇಡಂ ಇಂದಿರಾ ಗಾಂಧಿ ಆಗಲಿದ್ದಾರೆ ಕಂಗನಾ ರನೌತ್! ಚಿತ್ರದ ಪ್ರಮುಖ ವಿಷಯ ಏನ್ ಗೊತ್ತಾ?

ಕಂಗನಾ ರನೌತ್ ಈಗ ಮತ್ತೊಂದು ರಾಜಕೀಯ ಚಿತ್ರದ ಭಾಗವಾಗಲಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಚರಿತ್ರೆ ‘ತಲೈವಿ’ ಬಿಡುಗಡೆಯಾಗುವ ಮೊದಲೇ ಕಂಗನಾ ಈಗ ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ಆರಂಭಿಸಿದ್ದಾರೆ. ‘ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವ ನಟಿ, ಈಗ ತಮ್ಮ ಮುಂದಿನ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಂಗನಾ ಈ ಚಿತ್ರಕ್ಕಾಗಿ ತುಂಬಾ ಉತ್ಸುಕರಾಗಿದ್ದಾರೆ. ಕಂಗನಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಲವು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಈ ಪಾತ್ರಕ್ಕೆ ಹೊಂದಿಕೊಳ್ಳಲು ದೇಹದ ಅಳತೆಗಳನ್ನು ನೀಡುತ್ತಿದ್ದಾರೆ. 1975 ರ ತುರ್ತು ಪರಿಸ್ಥಿತಿಯನ್ನು ಆಧರಿಸಿ ತನ್ನ ಚಿತ್ರ ನಿರ್ಮಾಣವಾಗಲಿದೆ, ಇದೇ ಚಿತ್ರದ ಪ್ರಮುಖ ವಿಷಯವಾಗಲಿದೆ ಎಂದು ಕಂಗನಾ ಬರೆದಿದ್ದಾರೆ.

ಕಂಗನಾ ಈ ಚಿತ್ರಕ್ಕಾಗಿ ತನ್ನ ಪ್ರೊಡಕ್ಷನ್ ಹೌಸ್ ಮಣಿಕರ್ಣಿಕಾ ಕಚೇರಿಯಲ್ಲಿ ತನ್ನ ಅಳತೆಗಳನ್ನು ನೀಡುತ್ತಿದ್ದಾಳೆ. ಕಂಗನಾ ಈ ವರ್ಷದ ಆರಂಭದಲ್ಲಿ ತನ್ನ ಚಿತ್ರವನ್ನು ಘೋಷಿಸಿದ್ದರು ಮತ್ತು ಅವರ ಚಿತ್ರ ಬಯೋಪಿಕ್ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಬದಲಿಗೆ ಅದು ‘ಗ್ರ್ಯಾಂಡ್ ಪೀರಿಯಡ್ ಡ್ರಾಮಾ’ ಆಗಿರುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಅಂತಹ ರಾಜಕೀಯ ನಾಟಕವು ಇಂದಿನ ಪೀಳಿಗೆಗೆ ಇಂದಿನ ಭಾರತದ ಸಾಮಾಜಿಕ-ರಾಜಕೀಯ ವಾತಾವರಣವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂಬುದು ಕಂಗನಾ ಅನಿಸಿಕೆ. ಕಂಗನಾ ಅವರ ಮುಂಬರುವ ಚಿತ್ರ ‘ತಲೈವಿ’ ಗಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

ಈ ಚಿತ್ರದ ಟ್ರೈಲರ್‌ನಿಂದಾಗಿ ಇದರ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಕಂಗನಾ ಅವರ ಚಿತ್ರಕ್ಕೆ ಒಂದು ದಿನ ಮೊದಲು ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣಪತ್ರ ಸಿಕ್ಕಿದೆ. ಕಂಗನಾ ಅವರ ಈ ಚಿತ್ರ ಏಪ್ರಿಲ್ 23 ರಂದು ಬಿಡುಗಡೆಯಾಗಬೇಕಿತ್ತು, ಆದರೆ ಕೊರೋನ ಕಾರಣಕ್ಕಾಗಿ ಬಿಡುಗಡೆಯನ್ನು ಮುಂದೂಡಲಾಗಿದೆ.