ಫನ್ನಿ ಜೋಕ್ಸ್; ಪತಿ: ನಾನು ಒಂದು ವೇಳೆ ತೀರಿಕೊಂಡರೆ ನೀನು ಬೇರೆ ಮದುವೆಯನ್ನು ಮಾಡಿಕೊಳ್ಳುತ್ತೀಯಾ? ಪತ್ನಿ: ?
ಇಂದಿನ ಈ ಕಂಪ್ಯೂಟರ್ ಯುಗದಲ್ಲಿ ಎಲ್ಲ ಕೆಲಸಗಳು ತುಂಬಾ ಫಾಸ್ಟ್ ಆಗುತ್ತವೆ, ಬೇಗ ಮುಗಿಯುತ್ತವೆ ಎಂಬ ಭ್ರಮೆಯಲ್ಲಿ ವ್ಯಕ್ತಿ ಕೆಲಸ ಮಾಡಿಯೇ ಮಾಡುತ್ತಿದ್ದಾನೆ, ಆದರೆ ಕೆಲಸಗಳೇನು ಮುಗಿಯುತ್ತಿಲ್ಲ ಮನುಷ್ಯನಿಗೆ ಬಿಡುವೇನು ಸಿಗುತ್ತಿಲ್ಲ ಅಲ್ವಾ? ಆದರೂ ಇಂಥ ಬೇಜಾರಾದ ಮನಸ್ಸಿಗೆ ವ್ಯಕ್ತಿ ಏನಾದರೂ ನೆಮ್ಮದಿ ಹುಡುಕಲು ಯತ್ನಿಸುತ್ತಾನೆ. ಇಂಥ ಮನಸ್ಸಿಗೆ ಲಾಫ್ಟರ್ ಜೋಕ್ಸ್ ಗಳು ತುಷಾರ ಸಿಂಚನ ಮಾಡುತ್ತವೆ ನಿಜ.
ಮಿತ್ರರೇ, ಇವತ್ತಿನ ಲೇಖನದಲ್ಲಿ ನಿಮಗಾಗಿ ಸೂಪರ್ ಪಂಚ್ ಗಳಿರುವ ತಮಾಷೆಯ ಜೋಕ್ ಗಳನ್ನು ತಂದಿದ್ದೇವೆ. ಪ್ರಸ್ತುತ ಈ ಜೋಕ್ಸ್ ಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿವೆ. ನಮಗೆ ತುಂಬಾ ವಿಶ್ವಾಸವಿದೆ ಈ ಜೋಕ್ಸ್ ಗಳು ನಿಮಗೆ ಇಷ್ಟವಾಗುತ್ತವೆ ಎಂದು. ಹಾಗಾದರೆ ಟೈಮ್ ವೇಸ್ಟ್ ಮಾಡದೆ ಶುರು ಮಾಡಿ ಓದಲು.
* ಒಮ್ಮೆ ಹುಚ್ಚನೊಬ್ಬ ಬೆಂಕಿ ಹತ್ತಿಸದೇನೆ ಬೀಡಿ ಸೇದುತ್ತಿದ್ದ…ಅದನ್ನು ನೋಡಿದ ಬೇರೊಬ್ಬ ಹುಚ್ಚ, ಏನಪ್ಪಾ ನಿನ್ನ ಬೀಡಿಯಿಂದ ಹೊಗೆಯೆ ಬರುತ್ತಿಲ್ಲವಲ್ಲ ಎನ್ನುತ್ತಾನೆ.
ಮೊದಲ ಹುಚ್ಚ : ಶುದ್ಧ ಹುಚ್ಚನ ಹಾಗೆ ಮಾತಾಡ್ತಿಯಲ್ಲೋ ನೀನು, CNG ಬೀಡಿ ಕಣೋ ಇದು…ಎನ್ನುತ್ತಾನೆ.
* ಚಿಕ್ಕಣ್ಣ: ಅಣ್ಣ ನಾಳೆ ಸರ್ಕಸ್ ನೋಡಲು ಹೋಗೋಣ.
ದೊಡ್ಡಣ್ಣ: ನಾನು ನನ್ನ ಹೆಂಡ್ತಿಗೂ ಜೊತೇಲಿ ಕರೆದುಕೊಂಡು ಬರುತ್ತೇನೆ.
ಚಿಕ್ಕಣ್ಣ: ನಿನ್ನ ಹೆಂಡತಿ ಮತ್ತು ನಾದಿನಿ ಇಬ್ಬರೂ ಒಂದೇ ಸಮಯಕ್ಕೆ ಹುಲಿಯ ಪಂಜರದಲ್ಲಿ ಬಿದ್ದರೆ ಯಾರನ್ನು ಉಳಿಸುವೆ?
ದೊಡ್ಡಣ್ಣ: ಹುಲಿಗೆ..! ಯಾಕೆಂದರೆ ಜಗತ್ತಿನಲ್ಲಿ ಹುಲಿಗಳ ಸಂಖ್ಯೆ ತುಂಬಾ ಕಡಿಮೆಯಾಗುತ್ತಿವೆ, ಗೊತ್ತಲ್ವಾ.
* ಸಂತೂಗೆ 2 ಕೋಟಿ ರೂಪಾಯಿಗಳ ಲಾಟರಿ ಹೊಡೆಯಿತು.
ಲಾಟರಿ ಮಾಲೀಕ: ನಿಮಗೆ ಟ್ಯಾಕ್ಸ್ ಎಲ್ಲ ಕಟ್ ಮಾಡಿ 1.75 ಕೋಟಿ ರೂಪಾಯಿಗಳ ಮೊತ್ತ ದೊರೆಯುತ್ತದೆ ಎಂದು ಹೇಳುತ್ತಾನೆ.
ಸಂತೂ: ಏ ಮೂದೇವಿ ಅದೆಲ್ಲ ಆಗಾಕಿಲ್ಲ, ನನಗೆ ಸಂಪೂರ್ಣ 2 ಕೋಟಿ ರೂಪಾಯಿಗಳು ಬೇಕೆ ಬೇಕು, ಇಲ್ಲದಿದ್ದರೆ ನನ್ನ 100 ರೂಪಾಯಿಗಳನ್ನು ಈಗಿಂದೀಗಲೇ ವಾಪಸ್ ಕೊಡು, ನಾನು ಹೊರಟೆ.
* ಒಬ್ಬ ಆಲಸಿನಿಗೆ ಮಿತ್ರನೊಬ್ಬ ಕೇಳುತ್ತಾನೆ, ಏನು ನೀನು ಸೈನ್ಯದಲ್ಲಿ ಸೇರಬೇಕಂತ ಇದಿಯಂತೆ?
ಆಲಸ್ಯ ವ್ಯಕ್ತಿ: ಯಾರಪ್ಪಾ ಹೇಳಿದ್ದು? ನನಗೆ ಗನ್ ಯಾವ ಕಡೆ ಹಿಡಿದು ಟ್ರಿಗರ್ ದಬಾಯಿಸಬೇಕು ಎನ್ನೋದೆ ಗೊತ್ತಿಲ್ಲ.
ಮಿತ್ರ: ಏ ಬಿಡು, ಅದರಲ್ಲೇನು ಮಹಾ? ನೀನು ಗನ್ ಯಾವ ಕಡೆ ಇಟ್ಟು ಟ್ರಿಗರ್ ಪ್ರೆಸ್ ಮಾಡಿದರೂ ದೇಶಕ್ಕೆ ಹಿತವಾಗುವದು ನಿಶ್ಚಿತ.
* ಹಳ್ಳಿ ಹುಡುಗಿಯರ ಜೊತೆಗೆ ಪ್ರೀತಿ ಮಾಡುವುದರಲ್ಲಿ ಒಂದು ಸಮಸ್ಯೆ ಇದೆ. ಅದೇನೆಂದರೆ, ರೋಮ್ಯಾಂಟಿಕ್ ಆಗಿ ಅವರ ಮಡಿಲಲ್ಲಿ ತಲೆ ಇಟ್ಟು ಮಲಗಿದಾಗ, ಅವರು ಹೇನು ತೆಗೆಯಲು ಶುರು ಮಾಡುತ್ತಾರಪ್ಪಾ.
* ನಡೆದುಕೊಂಡು ಹೋಗುತ್ತಿರುವಾಗ ವ್ಯಕ್ತಿಯೊಬ್ಬನಿಗೆ, ದಾರಿಯಲ್ಲಿ ಒಂದು ಕಲ್ಲು ಕಾಣಿಸಿತು. ಅದರ ಮೇಲೆ ಹೀಗೆ ಬರೆಯಲಾಗಿತ್ತು… ಕಲ್ಲನ್ನು ತಿರುಗಿಸಿ ನೋಡಿ ನೀವು ಏನಾದರೂ ಆಗಿಯೇ ಆಗುತ್ತಿರಿ.
ಅದನ್ನು ನೋಡಿದ ವ್ಯಕ್ತಿ ತಟ್ಟನೆ ಕಲ್ಲು ತಿರುಗಿಸಿ ನೋಡುತ್ತಾನೆ, ಎರಡನೇ ಬದಿಯಲ್ಲಿ ಹೀಗೆ ಬರೆಯಲಾಗಿತ್ತು ‘ನೀನು ಹುಚ್ಚನಾದೆ’.
* ಪತಿ: ನಾನು ಒಂದು ವೇಳೆ ತೀರಿಕೊಂಡರೆ ನೀನು ಬೇರೆ ಮದುವೆಯನ್ನು ಮಾಡಿಕೊಳ್ಳುತ್ತೀಯಾ?
ಪತ್ನಿ: ಇಲ್ಲ, ನಾನು ನನ್ನ ತಂಗಿಯೊಂದಿಗೆ ಇಡೀ ಜೀವನ ಇರುವವರೆಗೆ ಕಾಲ ಕಳೆಯುತ್ತೇನೆ.
ಪತ್ನಿ: ಒಂದು ವೇಳೆ ನಾನು ತೀರಿಕೊಂಡರೆ ನೀವು ಮರು ಮದುವೆ ಮಾಡಿಕೊಳ್ಳುತ್ತೀರಾ?
ಪತಿ: ಇಲ್ಲ, ನಾನು ಸಹ ನಿನ್ನ ತಂಗಿಯೊಂದಿಗೆ ಈ ಜೀವ ಇರುವವರಿಗೆ ಜೊತೆಯಾಗಿಯೇ ಇರುತ್ತೇನೆ.
* ಮಗಳು ತನ್ನ ತಾಯಿಗೆ ಕಾಲ್ ಮಾಡಿ, ಅಮ್ಮ ಇವರು ನನ್ನ ಜೊತೆ ಜಗಳ ಕಾದಿದ್ದಾರೆ. ನಾನು 3-4 ತಿಂಗಳುಗಳವರೆಗೆ ತವರಿಗೆ ಬರ್ತಾ ಇದ್ದೇನೆ…
ಅತ್ತ ಕಡೆಯಿಂದ ಅಮ್ಮ ಹೇಳಿದ್ದು ಕೇಳಿ.
ಅಮ್ಮ: ಏನಂದೆ? ಅಳಿಯ ನಿನ್ನ ಜೊತೆ ಜಗಳ ಕಾದಿದ್ದಾನಾ? ಹಾಗಾದರೆ ಶಿಕ್ಷೆ ಆತನಿಗೆ ಆಗಬೇಕು, ನೀನು ಅಲ್ಲೇ ನಿಲ್ಲು. ನಾನೇ 5-6 ತಿಂಗಳುಗಳವರೆಗೆ ಅಲ್ಲಿಯೇ ಬರ್ತೇನೆ.
* ಪಟ್ಟಣದ ಹುಡುಗಿಗೆ ಹಳ್ಳಿಯ ಹುಡುಗನ ಜೊತೆಗೆ ಮದುವೆ ಮಾಡಿದರು.
ಒಂದು ದಿನ ಅತ್ತೆ ಸೊಸೆಗೆ ಹೇಳುತ್ತಾಳೆ.
ಏನಮ್ಮಾ, ಸ್ವಲ್ಪ ಎಮ್ಮೆಗೆ ತಿನ್ನಲು ಹುಲ್ಲು ಹಾಕಿ ಬಾ ಎನ್ನುತ್ತಾಳೆ.
ಸೊಸೆ ಹುಲ್ಲು ಹಾಕಲು ಎಮ್ಮೆಯ ಹತ್ತಿರ ಹೋದಾಗ ಅದರ ಬಾಯಿಯಲ್ಲಿಯ ಬುರುಗು (ಫೇಸ್) ನೋಡಿ ವಾಪಸ್ ಬಂದು ಅತ್ತೆಗೆ, ಅತ್ತೆಮ್ಮ ಅದಿನ್ನೂ ಕೋಲ್ಗೇಟ್ ನಿಂದ ಬ್ರಷ್ ಮಾಡ್ತಾ ಇದೆ ಎನ್ನಬೇಕೆ?