kannada Jokes: ಮನೆಗೆ ಹೆಂಡತಿಯ ಸುಂದರವಾದ ಗೆಳತಿ ಒಬ್ಬಳು ಬಂದಿದ್ದಳು. ಗಂಡ ಅವಳನ್ನೇ ನೋಡುತ್ತಾ ಕುಳಿತಿದ್ದ…

ಆರೋಗ್ಯ ವಂತ ಜೀವನಕ್ಕೆ ಸಮತೋಲನ ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ನಗು. ಆದರೆ ಇಂದು ಜನರಲ್ಲಿ ಈ ನಗು ಕಣ್ಮರೆಯಾಗಿ ಹೋಗಿದೆ. ಆದರೆ ನಗುವೇ ಇಲ್ಲದ ಜೀವನ ಉಪ್ಪೇ ಇಲ್ಲದ ಊಟದಂತೆ ಎಂಬುದನ್ನು ಮರೆಯಬಾರದು. ದಿನಕ್ಕೊಮ್ಮೆಯಾದರೂ ಮನಸಾರೆ ನಕ್ಕು ಬಿಡಬೇಕು. ನಗುವಿನ ಒಂದು ಪ್ರಮುಖ ಮೂಲ ಎಂದರೆ ಅದು ನಗೆಹನಿಗಳನ್ನು ಓದುವುದು, Kannada Jokes  ಓದಿದಾಗ ನಮ್ಮ ಮುಖದಲ್ಲೊಂದು ಸಹಜ ನಗು ಮೂಡುತ್ತದೆ. ಅದಕ್ಕಾಗಿ ನಾವು ಈ ಸಣ್ಣ ಪ್ರಯತ್ನ ಮಾಡಿದ್ದೇವೆ.

ನಕ್ಕು ನಗಿಸುವ ಕನ್ನಡ ಜೋಕ್ಸ್ funny Kannada Jokes

ಜೋಕ್ ೧

ಮದುವೆಯಲ್ಲಿ ಚಪ್ಪಲಿ ಬಚ್ಚಿಡುವ ಶಾಸ್ತ್ರ ನಡೀತಾ ಇತ್ತು…

ಮೊದಲ ನಾದಿನಿ: ಬಾವಾ ನನಗೆ 1100 ಬೇಕು..

ಎರಡನೇ ನಾದಿನಿ: ಬಾವಾ ನನಗೆ 2100 ಬೇಕು.

ಅಲ್ಲಿದ್ದವರು: ಬೇಡ್ರಮ್ಮ 2130 ತಗೊಳ್ಳಿ, ಅದ್ರಲ್ಲಿ ಎಫ್.ಎಂ. ಕೂಡಾ ಇರುತ್ತೆ.

ಜೋಕ್ ೨

ಇಬ್ಬರು ಗೆಳೆಯರು ಕಾಡಿನಲ್ಲಿ ಟ್ರಿಕ್ಕಿಂಗ್ ಮಾಡಲು ಹೋದರು. ಹಗಲೆಲ್ಲಾ ಓಡಾಡಿ ರಾತ್ರಿ ಒಂದು ಕಡೆ ಟೆಂಟ್ ಹಾಕಿಕೊಂಡು ಮಲಗಿದರು.. ಅರ್ಧ ರಾತ್ರಿ ಆಗಿತ್ತು…

ಮೊದಲನೇ ಫ್ರೆಂಡ್: ಆಕಾಶದ ಕಡೆ ನೋಡು, ಏನು ಕಾಣಿಸ್ತಾ ಇದೆ ನಿನಗೆ…

ಎರಡನೇ ಫ್ರೆಂಡ್: ಆಕಾಶದಲ್ಲಿರೋ ನಕ್ಷತ್ರಗಳು ಹೊಳೀತಾ ಇವೆ..

ಮೊದಲನೇ ಫ್ರೆಂಡ್: ಇದರಿಂದ ನಿನಗೆ ಏನು ಅರ್ಥ ಆಯ್ತು?

ಎರಡನೇ ಫ್ರೆಂಡ್: ಆಕಾಶ ಬಹಳ ಶುಭ್ರ ಮತ್ತು ಸುಂದರವಾಗಿದೆ ಅಂತ ಅರ್ಥ ಆಯ್ತು..

ಮೊದಲನೇ ಫ್ರೆಂಡ್: ಅಯ್ಯೋ ಗೂಬೆ ನಮ್ಮ ಟೆಂಟನ್ನ ಯಾರೋ ಕದ್ಕೊಂಡು ಹೋಗಿದ್ದಾರೆ ಕಣೋ…

kannada jokes photo

funny kannada jokes photo


Kannada funny jokes

ಜೋಕ್ ೩

ಹುಡುಗಿ ತನಗೆ ನಿಶ್ಚಿತಾರ್ಥ ಆಗಿರೋ ಹುಡುಗನ್ನ ಕರ್ಕೊಂಡು ಬಂದು ತನ್ನ ಗೆಳತಿಗೆ ತೋರಿಸಿದಳು.

ಗೆಳತಿ: ಹುಡುಗ ಏನೋ ಪರವಾಗಿಲ್ಲ, ಆದರೆ ಅವನು ನಕ್ಕಾಗ ನೋಡೋಕೆ ಚೆನ್ನಾಗಿ ಕಾಣ್ತಾ ಇಲ್ಲ..

ಹುಡುಗಿ: ಪರ್ವಾಗಿಲ್ಲ ಬಿಡೇ, ಮದುವೆ ಆದ್ಮೇಲೆ ಅವನಿಗೆ ನಾನು ನಗೋಕೆ ಚಾನ್ಸ್ ಕೊಡೋದೇ ಇಲ್ಲ.

ಗಂಡ  ಹೆಂಡತಿ ಜೋಕ್ಸ್  Gand Hendathi Jokes

ಜೋಕ್ ೪

ಕಳೆದ ಕೆಲವು ದಿನಗಳಿಂದಲೂ ಕೂಡಾ ಗುಂಡ ಒಂದೇ ಟೈಮಲ್ಲಿ ಎರಡೆರಡು ಸಿಗರೇಟ್ ಸೇದ್ತಾ ಇದ್ದ..

ಹೆಂಡತಿ: ಏನ್ರೀ ಆಗಿದೆ ನಿಮಗೆ ಒಂದೇ ಸಲಕ್ಕೆ ಎರಡೆರಡು ಸಿಗರೇಟ್ ಸೇದ್ತಾ ಇದ್ದೀರಿ.

ಗುಂಡ: ಏನಿಲ್ಲಾ ಕಣೇ ನನ್ನ ಫ್ರೆಂಡ್ ನೆನಪಾಗ್ತಾ ಇದ್ದಾನೆ ಅದಕ್ಕೆ ಒಂದು ನಂದು, ಇನ್ನೊಂದು ಅವನದ್ದು‌.

ಕೆಲವು ದಿನಗಳಾದ ಮೇಲೆ..

ಹೆಂಡತಿ: ಏನ್ರೀ ಒಂದೇ ಸಿಗರೇಟ್ ಸೇದ್ತಾ ಇದ್ದೀರಿ ನಿಮ್ಮ ಫ್ರೆಂಡ್ ನ ಮರೆತು ಹೋದ್ರಾ?

ಗುಂಡ: ಏ ಹುಚ್ಚೀ ಇಲ್ಲಾ ಕಣೇ, ನಾನು ಸಿಗರೇಟ್ ಸೇದೋದು ಬಿಟ್ಟಿ ಬಿಟ್ಟೆ‌ ಅಂತ ಜೋರಾಗಿ ನಕ್ಕ..

ಜೋಕ್ ೫

ಒಬ್ಬ ವ್ಯಕ್ತಿ ನಿಂತುಕೊಂಡ ಕಡೇನೆ ಕೈ ಲಿದ್ದ ಒಂದು ಕೀ ಯನ್ನು ತನ್ನ ಕಿವಿಯೊಳಗೆ ಹಾಕಿ ತಿರುಗಿಸ್ತಾ ಇದ್ದ..

ಅದನ್ನು ನೋಡಿದ ಇನ್ನೊಬ್ಬ ವ್ಯಕ್ತಿ…

ಸರ್… ನೀವು ಆಗ್ಲಿಂದ ಸ್ಟಾರ್ಟ್ ಆಗೋಕೆ ಟ್ರೈ ಮಾಡ್ತಾ ಇದ್ದೀರಾ ಬಹುಶಃ ಆಗ್ತಾ ಇಲ್ಲ ಅನ್ಸುತ್ತೆ, ನಾನು ಹಿಂದೆಯಿಂದ ನೂಕ್ಲಾ ಅಂತ ಕೇಳ್ದ..

ಜೋಕ್ ೬

ಹೆಂಡತಿ: ರೀ ಯಾಕ್ರೀ ನನ್ನ ಕತ್ತು ಹಿಸುಕ್ತಾ ಇದ್ದೀರಿ?

ಗಂಡ: ನಾನು ಸೂಸೈಡ್ ಮಾಡ್ಕೊಳ್ತಾ ಇದ್ದೀನಿ.

ಹೆಂಡತಿ: ಹಾಗಾದ್ರೆ ನಿಮ್ಮ ಕತ್ತು ಹಿಸಕ್ಕೊಳ್ಳಿ ನನ್ನ ಕತ್ತು ಯಾಕೆ?

ಗಂಡ: ಯಾಕಂದ್ರೆ ನಾನು ನಿನ್ನ ನನ್ನ ಪ್ರಾಣ ಅಂತ ನಾನು ಸುಮಾರು ಸಲ ಹೇಳಿಲ್ವೇನೆ?

ಕನ್ನಡ ಜೋಕ್ಸ್ ಫೋಟೋಸ್

ಕನ್ನಡ ಜೋಕ್ಸ್ ಫೋಟೋಸ್

ಜೋಕ್ ೭

ಗಂಡ ಆಫೀಸಿಂದ ಗಾಬರಿಯಿಂದ ಮನೆಗೆ ಬಂದ.

ಹೆಂಡ್ತಿ : ಯಾಕ್ರೀ ಏನಾಯ್ತು, ಯಾಕಿಷ್ಟು ಗಾಬರಿ

ಗಂಡ : ಇವತ್ತು ಆಫೀಸಿಂದ ಹೊರಗೆ ಬಂದ ಕೂಡಲೇ ಒಂದು ಕತ್ತೆ..

ಅಷ್ಟೊತ್ತಿಗೆ ಅವರ ಮಗಳು

ಅಮ್ಮಾ ಅಣ್ಣ ಆಟದ ಬೊಂಬೆಯನ್ನು ಕಿತ್ತು ಹಾಕಿದ..

ಹೆಂಡತಿ: ನೀವು ಹೇಳ್ರೀ…
ಗಂಡ: ಇವತ್ತು ಆಫೀಸಿಂದ ಹೊರಗೆ ಬಂದ ಕೂಡಲೇ ಒಂದು ಕತ್ತೆ…

ಅಷ್ಟೊತ್ತಿಗೆ ಅವರ ಮಗ

ಅಮ್ಮಾ ರೀಟಾ ನನ್ನ ಕಾರು ಒಡೆದು ಹಾಕಿದ್ಲು…

ಹೆಂಡತಿ ಕೋಪ ತಡೆಯೋಕೆ ಆಗದೆ, ಏ ನೀವಿಬ್ಬರೂ ಬಾಯ್ಮುಚ್ಚಿ, ನಾನು ಮೊದಲು ಈ ಕತ್ತೆ ವಿಚಾರ ತಿಳ್ಕೋಬೇಕು ಅಂದ್ಲು…

ಜೋಕ್ ೮

ಮನೆಗೆ ಹೆಂಡತಿಯ ಸುಂದರವಾದ ಗೆಳತಿ ಒಬ್ಬಳು ಬಂದಿದ್ದಳು. ಗಂಡ ಅವಳನ್ನೇ ನೋಡುತ್ತಾ ಕುಳಿತಿದ್ದ…

ಗಂಡ: ಏ ನೋಡೇ ಅಡುಗೆ ಮನೇಲಿ ಕುಕ್ಕರ್ 10 ಸಲ ಕೂಗಿದೆ, ಒಳಗೆ ಇರೋ ಬೇಳೆಯೆಲ್ಲಾ ಬೆಂದು ಹೋಗಿರುತ್ತೆ.

ಹೆಂಡತಿ: ಪರವಾಗಿಲ್ಲ ಬಿಡ್ರಿ.. ನಾನು ನಿಮ್ಮ ಬೇಳೆ ಬೇಯೋಕೆ ಬಿಡಲ್ಲ..