Kannada Jokes: ಪಪ್ಪು: ಮಚ್ಚಾ ನಾನು ಏನೇ ಕೆಲಸ ಮಾಡೋಕೆ ಹೋದ್ರೂ ನನ್ ಹೆಂಡ್ತಿ ಮಧ್ಯದಲ್ಲಿ ಬಂದು ಅಡ್ಡಗಾಲು ಹಾಕ್ತಾಳೆ ಕಣೋ ಏನ್ಮಾಡೋದು? ಗೆಳೆಯ: ಪಪ್ಪು ಈ ಸಾರಿ ಒಂದು ಟ್ರಕ್….
ಇಂದಿನ ಒತ್ತಡದ ಬದುಕಿನಲ್ಲಿ ಸದಾ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಿರುವ ಜನರಿಗೆ ತಮ್ಮವರಿಗಾಗಿಯೇ ಹೆಚ್ಚಿನ ಸಮಯವನ್ನು ನೀಡಲು ಆಗುವುದಿಲ್ಲ. ಕೆಲಸದಲ್ಲಿ ಎಷ್ಟು ಮಗ್ನ ಆಗ್ತಾರೆಂದರೆ ಅನೇಕರಿಗೆ ನಗೋದಿಕ್ಕೆ, ಮನರಂಜನೆಗೆ ಕೂಡಾ ಸಮಯ ಸಿಗೋದಿಲ್ಲ. ಇದರಿಂದ ಅನೇಕರು ಖಿ ನ್ನತೆಗೆ ಕೂಡಾ ಒಳಗಾಗ್ತಾರೆ. ಅದಕ್ಕೆ ಆಸ್ಪತ್ರೆ ಮತ್ತು ಶಾಲೆಗಳ ಗೋಡೆಗಳ ಮೇಲೆ ಲಾಫಿಂಗ್ ಈಸ್ ಬೆಸ್ಟ್ ರೆಮೆಡಿ ಅನ್ನೋ ಲೈನ್ ಬರೆದಿರುತ್ತಾರೆ. ಇಂದು ನಾವು ಕೂಡಾ ನಿಮ್ಮನ್ನು ನಗಿಸುವ ಒಂದು ಪ್ರಯತ್ನವನ್ನು ಮಾಡಲು ನಿಮ್ಮ ಮುಂದೆ ಕೆಲವು ನಗೆ ಹನಿಗಳನ್ನು ಇಡುತ್ತಿದ್ದೇವೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ನಗೆ ಹನಿಗಳು ನಿಮ್ಮ ಮೊಗದಲ್ಲಿ ಕೂಡಾ ನಗುವನ್ನು ತಂದರೆ ಅದಕ್ಕಿಂತ ಸಾರ್ಥಕತೆ ಇನ್ನೊಂದಿಲ್ಲ.
ಜೋಕ್ ೧
ಒಬ್ಬ ಜಿಪುಣ ಒಬ್ಬ ಮಹರ್ಷಿಗಳ ಕೈಗೆ ಒಂದು ರೂಪಾಯಿ ಕೊಟ್ಟು, ಸ್ವಾಮಿ ನನಗೆ ಒಂದು ಮಂತ್ರ ಹೇಳಿಕೊಡಿ, ನಾನು ಆ ಮಂತ್ರ ಹೇಳಿದಾಗಲೆಲ್ಲಾ ಹಣ ಬರಬೇಕು ಎಂದ..
ಮಹರ್ಷಿಗಳು: ಆಯ್ತಪ್ಪ, ನಾನು ಹೇಳಿದ ಹಾಗೆ ಮಾಡು, ಜನ ಜಾಸ್ತಿ ಇರೋ ಕಡೆ ಹೋಗಿ ದೇವರ ಹೆಸರಲ್ಲಿ ಏನಾದ್ರೂ ಕೊಡಿ ಅಂತ ಜೋರಾಗಿ ಜಪ ಮಾಡು, ಪ್ರತಿ ಸಾರಿ ಕೂಡಾ ನಿನಗೆ ಕಾಸು ಸಿಗುತ್ತೆ..
ಜಿಪುಣ ಆ ಮಾತು ಕೇಳಿ ಉತ್ತರ ನೀಡೋಕಾಗ್ದೆ ಎದ್ದು ಹೋದ..
ಜೋಕ್ ೨
ಸ್ಕೂಲಿಂದ ಬಂದ ನಮ್ಮ ಗುಂಡ
ಗುಂಡ: ಅಪ್ಪ ಕ್ಲಾಸಲ್ಲಿ ಪ್ರತೀ ದಿನ ನಮ್ಮ ಮೇಡಂ ನನ್ನ ಹೊಡೀತಾರೆ..
ಅಪ್ಪ: ಭಯಪಡ್ಬೇಡ ಗುಂಡ ನೀನು ಹುಲಿಯ ಸಂತಾನ ಇದ್ದ ಹಾಗೆ….
ಗುಂಡ: ಮೇಡಂ ಕೂಡಾ ಇದನ್ನೇ ಹೇಳಿ ಬೈಯ್ತಾರಪ್ಪ?
ಅಪ್ಪ: (ಆಶ್ಚರ್ಯದಿಂದ) ಏನಂತಾ?
ಗುಂಡ: ಯಾವ ಪ್ರಾಣಿ ಮಗಾನೋ ನೀನು, ಏನ್ಮಾಡಿದ್ರೂ ಒಂದಕ್ಷರ ಕಲಿಯೋಲ್ಲ…
ಆ ಮಾತು ಕೇಳಿ ಅಪ್ಪನ ಮುಖ ಪೆಚ್ಚಾಗಿತ್ತು…

ಜೋಕ್ ೩
ಹುಡುಗ: ಹಲೋ ಪಮ್ಮಿ ಡಾರ್ಲಿಂಗ್ ಹೇಗಿದ್ಯಾ?
ಹುಡುಗಿ: ನೀನು ಅಮನ್ ತಾನೇ?
ಹುಡುಗ: ಹೌದು ನಿಂಗೆ ಹೇಗೆ ಗೊತ್ತಾಯಿತು?
ಹುಡುಗಿ: ನೀನು ಸೇಠ್ ಬನ್ಸಿಲಾಲ್ ಮಗ ತಾನೇ?
ಹುಡುಗ: ಹೌದು ಡಾರ್ಲಿಂಗ್ ಇದು ಗೊತ್ತಾ ನಿಂಗೆ
ಹುಡುಗಿ: ನಿಮ್ಮ ತಾತ ರಾಮ್ ಲಾಲ್ ಅಲ್ವಾ?
ಹುಡುಗ: ಹೌದು ಡಿಯರ್ ನಮ್ಮ ಇಡೀ ಫ್ಯಾಮಿಲಿ ಗೊತ್ತಾ ನಿಂಗೆ?
ಹುಡುಗಿ: ಅಯ್ಯೋ ಬೇ ವ ರ್ಸಿ ಬಾರೋ ಮನೆಗೆ, ನಾನು ಪಮ್ಮಿ ಅಲ್ಲ, ನಿನ್ನ ಮಮ್ಮಿ ಮಾತಾಡ್ತಾ ಇರೋದು…

ಜೋಕ್ ೪
ಟೀಚರ್: ಗುಂಡ ಒಂದು ಮಾತು ಹೇಳು, ನೀನು ಓದೋ ಕಡೆ ಯಾಕೆ ಗಮನ ನೀಡಲ್ಲ?
ಗುಂಡ: ಮೇಡಂ ಓದೋದು ಮುಖ್ಯವಾಗಿ ಎರಡು ಕಾರಣಗಳಿಂದ, ಒಂದು ಕೆಲವರಿಗೆ ಅದು ಹವ್ಯಾಸ, ಇನ್ನೂ ಕೆಲವರು ಭಯದಿಂದ ಓದ್ತಾರೆ..
ಆದರೆ ನಾನು ಇಂತ ಚಿಲ್ಲರೆ ಹವ್ಯಾಸ ಇಟ್ಕೊಂಡಿಲ್ಲ, ಇನ್ನು ನಾನು ಯಾರ ಅಪ್ಪಂಗೂ ಭಯ ಪಡಲ್ಲ…
ಉತ್ತರ ಹೇಳಿದ ಮೇಲೆ ಗುಂಡನ ಗತಿ, ದೇವರೇ ಗತಿ..

ಜೋಕ್ ೫
ಹುಡುಗ ಹುಡುಗಿ ಬಸ್ ಸ್ಟಾಪ್ ನಲ್ಲಿ ನಿಂತಿದ್ರು..
ಹುಡುಗ: ಲಿಪ್ ಸ್ಟಿಕ್ ತುಂಬಾ ಚೆನ್ನಾಗಿದೆ.
ಹುಡುಗಿ: ಓ ಥ್ಯಾಂಕ್ಸ್..
ಹುಡುಗ: ನಿಮ್ಮ ಕಿವಿ ಓಲೆಗಳು ಚೆನ್ನಾಗಿವೆ..
ಹುಡುಗಿ: ರಿಯಲಿ ಹಾ, ಥ್ಯಾಂಕ್ಯೂ ವೆರಿ ಮಚ್
ಹುಡುಗ: ನಿಮ್ಮ ನೆಕ್ಲೇಸ್ ಸೂಪರ್
ಹುಡುಗಿ: ಥ್ಯಾಂಕ್ಯೂ ಸೋ ಮಚ್..
ಹುಡುಗ: ಇಷ್ಟೆಲ್ಲಾ ಚೆನ್ನಾಗಿರೋದು ಹಾಕ್ಕೊಂಡ್ರು ನೀನು ಮಾತ್ರ ಯಾಕೆ ದೆ ವ್ವದ ತರ ಇದ್ದೀಯಾ?
ಹುಡುಗಿ ಆ ಮಾತು ಕೇಳಿ ಶಾಕ್…

ಜೋಕ್ ೬
ಪಪ್ಪು: ಮಚ್ಚಾ ನಾನು ಏನೇ ಕೆಲಸ ಮಾಡೋಕೆ ಹೋದ್ರೂ ನನ್ ಹೆಂಡ್ತಿ ಮಧ್ಯದಲ್ಲಿ ಬಂದು ಅಡ್ಡಗಾಲು ಹಾಕ್ತಾಳೆ ಕಣೋ ಏನ್ಮಾಡೋದು?
ಗೆಳೆಯ: ಪಪ್ಪು ಈ ಸಾರಿ ಒಂದು ಟ್ರಕ್ ಓಡಿಸೋ ಕೆಲಸ ಮಾಡಿ ನೋಡು, ನಿನ್ನ ಹೆಂಡ್ತಿ ಆಗಲೂ ಮಧ್ಯದಲ್ಲಿ ಬಂದ್ರೆ ಅದೃಷ್ಟ ಖುಲಾಯಿಸ್ತು ಅನ್ಕೋ..
ಜೋಕ್ ೭
ಅಕ್ಬರ್ : ಬೀರಬಲ್ ಮಾತು ಕೊಡು, ನೀನು ಮದುವೆ ಆದ್ರೆ ನಿನ್ನ ಹೆಂಡ್ತಿಗೆ ನಾನೇ ಮೊದಲು ಕಿಸ್ ಮಾಡಬೇಕು..
ಬೀರಬಲ್ : ಹಾಗೇ ಆಗ್ಲೀ ಸಾಮ್ರಾಟ್.. ಆದ್ರೆ ನಂದು ಒಂದು ಕಂಡೀಶನ್
ಅಕ್ಬರ್: ಏನದು ಹೇಳು?
ಬೀರಬಲ್ : ನಾನು ಮದುವೆ ಆಗೋದಾದ್ರೆ ನಿಮ್ಮ ತಂಗೀನಾ ಮಾತ್ರ….
ಈಗ ಅಕ್ಬರ್ ತನ್ನ ಮಾತನ್ನು ವಾಪಸ್ ತಗೊಳ್ದೇ ಬೇರೆ ವಿಧಿ ಇಲ್ಲ…

ಜೋಕ್ ೮
ಸಂಜೆ ಗಂಡ ಮನೆ ಬಾಗಿಲು ತೆರೆದಿರುವುದನ್ನು ನೋಡಿ ಹೆಂಡತಿಗೆ ಸರ್ಪ್ರೈಸ್ ನೀಡೋಕೆ ನಿಧಾನವಾಗಿ ಹೆಜ್ಜೆ ಇಡ್ತಾ ಒಳಗೆ ಬಂದ, ಟಿವಿ ನೋಡ್ತಾ ಇದ್ದ ಹೆಂಡತಿಯ ಹಿಂದೆ ಹೋಗಿ ಆಕೆಯ ಕಣ್ಮುಚ್ಚಿದ.
ಹೆಂಡತಿ ರಾಜು ಎಂದು ಜೋರಾಗಿ ಅಂದಳು..
ಗಂಡ ಆಗ ಏನು ರಾಜೂನಾ ಅಂದ
ಹೆಂಡತಿ ಆಗ ಕವರ್ ಮಾಡ್ತಾ ಅರೆ ನೀವು ಬಂದಿದ್ದು ನಂಗೆ ಗೊತ್ತಾಯ್ತು, ಅದಕ್ಕೆ ರಾಜು ನೀರು ತಗೊಂಡು ಬಾ ಎಜಮಾನ್ರಿಗೆ ಅಂತ ಹೇಳೋ ಒಳಗೆ ನೀವು ಮಾತಾಡಿ ಬಿಟ್ಟಿ ಎಂದಳು…