ಮಾಡಿದುಣ್ಣೋ ಮಾರಾಯ: ಸುಮ್ಮನೆ ನಿಂತ ಹಸುವನ್ನು ಬೆತ್ತದಿಂದ ಹೊಡೆದ ವೃದ್ಧ ವ್ಯಕ್ತಿ, ಸಿಟ್ಟಿಗೆದ್ದು ವ್ಯಕ್ತಿಗೆ ತಕ್ಕ ಪಾಠ ಕಲಿಸಿದ ಹಸು! ನೋಡಿ ವೈರಲ್ ವಿಡಿಯೋ…….!

ಹಸು ಎಂದರೆ ದೇವರು. ಹದಿನೆಂಟು ಕೋಟಿ ದೇವತೆಗಳನ್ನು ಹೊಂದಿದ ಏಕೈಕ ಪ್ರಾಣಿ ಎಂದರೆ ಅದು ಹಸು. ಒಂದು ಬಾರಿ ಹಸುವಿಗೆ ನಮಸ್ಕಾರ ಮಾಡಿದರೆ ಅದು ಹದಿನೆಂಟು ಕೋಟಿ ದೇವತೆಗಳಿಗೆ ನಮಸಿದಂತಾಗುವದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಹಸುವಿಗೆ ಕಾಮಧೇನು ಅಂತಾನೂ ಕರೆಯುತ್ತಾರೆ. ಹಸುವನ್ನು ದಿನನಿತ್ಯ ಪೂಜಿಸಿ ಅದರ ಆಶೀರ್ವಾದ ಪಡೆದರೆ ನಮ್ಮ ಕಷ್ಟಗಳೆಲ್ಲ ದೂರವಾಗಿ ನಮ್ಮ ಜೀವನದಲ್ಲಿ ಸುಖದ ಕಾಲಗಳು ಬರುವವು. ಆದ್ದರಿಂದ ನಾವು ದಿನನಿತ್ಯ ಮುಂಜಾನೆಯ ಸಮಯದಲ್ಲಿ ಹಸುವನ್ನು ಸ್ಪರ್ಶಿಸಿ ನಮಸ್ಕಾರ ಮಾಡುವದು ತುಂಬಾ ಲಾಭದಾಯಕವಾಗಿದೆ. ಅಲ್ಲದೆ ಹಸುವಿಗೆ ಆಹಾರ ತಿನ್ನಿಸುವದರಿಂದ ಮನೆಯಲ್ಲಿಯ
ಆಹಾರದ ಕೊರತೆ ದೊರವಾಗುವದು.

ಇಷ್ಟೆಲ್ಲ ಆಸೆಗಳನ್ನು ಈಡೇರಿಸುವ ಹಸುವಿಗೆ ನಾವು ತೊಂದರೆ ಕೊಟ್ಟರೆ ಹೇಗೆ ಆ ದೇವರು ಸಹ ಒಪ್ಪಲಾರನು. ಪ್ರಸ್ತುತವಾಗಿ ಸೋಶಿಯಲ್ ಮಿಡಿಯಾದಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ಮಾಡಿದುಣ್ಣೋ ಮಾರಾಯ ಅನ್ನೋ ಗಾದೆ ಮಾತು ನೆನಪಿಗೆ ಬರುತ್ತೆ. ಅಷ್ಟಕ್ಕೂ ಈ ವೀಡಿಯೋದಲ್ಲಿ ನಡೆದದ್ದು ಏನೆಂದರೆ , ಒಂದು ಓಣಿಯ ರಸ್ತೆಯ ದಂಡೆಗೆ ಒಂದು ಗೂಳಿ ಅಂದರೆ ಹಸು ನಿಂತಿರುತ್ತದೆ. ಅಲ್ಲಿಂದ ಒಬ್ಬ ವೃದ್ಧ ವ್ಯಕ್ತಿ ತನ್ನ ಕೈಯಲ್ಲಿ ಬೆತ್ತವನ್ನು ಹಿಡಿದುಕೊಂಡು ಸಾವಕಾಶವಾಗಿ ಬರುತ್ತಿರುತ್ತಾನೆ. ಬರುತ್ತಿದ್ದ ಹಾಗೆ ಹಸುವನ್ನು ಕಂಡು ಸುಮ್ಮನೆ ನಿಂತ ಹಸುವಿನ ಹಿಂದೆ ಹೋಗಿ ಅದರ ಬೆನ್ನಿನ ಮೇಲೆ ಜೋರಾಗಿ ಹೊಡೆಯುತ್ತಾನೆ. ಪಾಪ ಹಸು ಈ ವೃದ್ಧ ವ್ಯಕ್ತಿಯನ್ನು ಕಂಡು ತುಂಬಾ ಸಿಟ್ಟಿಗೆ ಬಂದು ಆತನನ್ನು ತನ್ನ ಕೊಂಬುಗಳಿಂದ ಎತ್ತಿ ಜೋರಾಗಿ ಎಸೆಯುತ್ತದೆ. ಆಗ ವೃದ್ಧ ವ್ಯಕ್ತಿ ಏಳಲು ಸಹ ಸಾಧ್ಯವಾಗದೆ ಅಲ್ಲಿಯೇ ಬೀಳುತ್ತಾನೆ. ತದನಂತರ ಹಸು ಅಲ್ಲಿಂದ ಹೊರಟು ಹೋಗುತ್ತದೆ.

ವಿಡಿಯೋ ನೋಡಿ

ಪ್ರಸ್ತುತ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಶೇರ ಮಾಡುವಾಗ instant karma ಅಂತ ಕ್ಯಾಪ್ಶನ್ ಸಹ ನೀಡಿದ್ದಾರೆ. ಇದುವರೆಗೆ ಈ ವಿಡಿಯೋ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಎರಡು ಸಾವಿರಕ್ಕೂ ಹೆಚ್ಚು ಲೈಕ್ಸ್ ಸಹ ಬಂದಿವೆ. ಎಷ್ಟೋ ನೆಟ್ಟಿಗರು ‘ ವ್ಯಕ್ತಿಗೆ ತಕ್ಕ ಪಾಠ ಕಲಿಸಿದ ಹಸು’ ಎಂದು ಕಾಮೆಂಟ್ ಸಹ ಮಾಡುತ್ತಿದ್ದಾರೆ