ಕರ್ನಾಟಕ ವಿಮಾನ ನಿಲ್ದಾಣ ಹೊಸ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ…

ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆ 2023ರಲ್ಲಿ ಹೊಸದಾಗಿ ಅಧಿಸೂಚನೆ ಹೊರಡಿಸಿ ಕರ್ನಾಟಕ ವಿಮಾನ ನಿಲ್ದಾಣ ಹೊಸ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆಗೆ ದಿನಾಂಕ ಆರಂಭ ಆಗಿದ್ದು 22 ಫೆಬ್ರವರಿ 2023 ರಂದು ಪ್ರಕಟಣೆ ಆಗಿತ್ತು. ಅಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಿ ಕೊನೆಯ ದಿನಾಂಕ 20 ಮಾರ್ಚ್ 2023 ಆಗಿರುತ್ತದೆ. ಈ ಬಾರಿ ವಯೋಮಿತಿಯಲ್ಲಿ ಕೂಡ ಬಾರಿ ಸಡಿಲಿಕೆ ನೀಡಿದ್ದು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಒಟ್ಟಾರೆಯಾಗಿ 36 ಹುದ್ದೆಗಳು ಖಾಲಿ ಇದ್ದು ಖಾಲಿ ಇರುವ ಹುದ್ದೆಗಳ ವಿವರ ಈ ರೀತಿಯಾಗಿ ಇದೆ. ವಿಮಾನ ತಂತ್ರಜ್ಞ ನುರಿತ ಸಸ್ಯಸಂತಜ್ಞ ನುರಿತ ತಂತ್ರಜ್ಞ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಮೇಲ್ಕಂಡ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಯನ್ನು ಕರ್ನಾಟಕದಿಂದ ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಡಿಪ್ಲೋಮಾ ಅಥವಾ ತತ್ಸಮಾನ ಹುದ್ದೆ ಉತ್ತೀರ್ಣರಾಗಿರಬೇಕು. ಡಿಪ್ಲೋಮಾ ದಲ್ಲಿ ಯಾವುದೇ ವಿಭಾಗದಲ್ಲಿ ಕೂಡ ಪಾಸ್ ಆಗಿದ್ದರೂ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಇಚ್ಛಿಸುವ ಎಲ್ಲಾ ಅಭ್ಯರ್ಥಿಗಳು ಕೂಡ ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ ವಯಸ್ಸಿನ ಮಿತಿ 40 ವರ್ಷ ಮೀರಿದಬಾರದು. ಎಐಇಎಸ್ಎಲ್ ಅಲ್ಲಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಅವರ ವೇತನದ ವಿವರ ಈ ರೀತಿ ಇರುತ್ತದೆ ಅದನ್ನು ಕೂಡ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅದರ ಪ್ರಕಾರ ಹುದ್ದೆಗಳಿಗೆ ಅನುಸಾರವಾಗಿ ಕನಿಷ್ಠ 25,000 – 81,000 ರವರೆಗೆ ಮಾಸಿಕ ವೇತನ ನಿಗದಿ ಆಗಿದೆ.ಜೊತೆಗೆ ಮೊದಲ ತಿಂಗಳು 650, ಎರಡನೇ ತಿಂಗಳು 750, ಮೂರನೇ ತಿಂಗಳಿಗೆ 1150 ಈ ರೀತಿ ಹೆಚ್ಚಾಗುತ್ತಾ ಹೋಗುತ್ತದೆ.

ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಈ ರೀತಿ ನಡೆಯುತ್ತದೆ. ಮೊದಲಿಗೆ ಪೂರ್ವಭಾವಿ ಸ್ಕ್ರೀನಿಂಗ್ ಎಂದರೆ ಲಿಖಿತ ಪರೀಕ್ಷೆ ಇರುತ್ತದೆ. ನಂತರ ತಾಂತ್ರಿಕ ಮೌಲ್ಯಮಾಪನ ಹಾಗೂ ಸಂದರ್ಶನ ಇರುತ್ತದೆ. ಇವುಗಳನ್ನು ದಕ್ಷವಾಗಿ ಎದುರಿಸಿದವರಿಗೆ ಡಾಕ್ಯುಮೆಂಟ್ ವೆರಿಫಿಕೇಶನ್ ಆಗಿ ಜಾಬ್ ಸಿಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಕೂಡ ಕಟ್ಟಬೇಕಾಗಿದೆ. ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಿರುವಂತೆ ಜನರಲ್ ಮತ್ತು ಒಬಿಸಿ ಅಭ್ಯರ್ಥಿಗಳು 1000 ರೂಗಳನ್ನು ಅರ್ಜಿ ಶುಲ್ಕವಾಗಿ ಕಟ್ಟಬೇಕು, ಮತ್ತು ಎಸ್ಸಿ ಎಸ್ಟಿ ಕ್ಯಾಟಗರಿ ಅಭ್ಯರ್ಥಿಗಳು ಮತ್ತು ಮಹಿಳಾ ಅಭ್ಯರ್ಥಿಗಳು 500 ಗಳನ್ನು ಕಟ್ಟಬೇಕಾಗುತ್ತದೆ. ಕೆಲವು ಪ್ರಮುಖ ದಿನಾಂಕಗಳನ್ನು ಕೂಡ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಐಎಸ್ಇಎಲ್ ಪ್ರಮುಖ ದಿನಾಂಕಗಳು ಈ ರೀತಿ ಇದೆ. ಸಂದರ್ಶನಕ್ಕೆ ಅಭ್ಯರ್ಥಿಗಳು ಭೇಟಿ ಆಗಬೇಕಾದ ದಿನಾಂಕ ಚೆನ್ನೈ ವಾಕ್ ಇನ್ 14.03.2023ರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ. ಬೆಂಗಳೂರು ವಾಕ್ ಇನ್ ದಿನಾಂಕ 17.3.2023ರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12ರ ವರೆಗೆ. ಹೈದರಾಬಾದ್ ವಾಕ್ ಇನ್ 20.03.2023ರ ಬೆಳಿಗ್ಗೆ 9:00 ರಿಂದ 12ರವರೆಗೆ.

ಇಲ್ಲಿ ಯಾವ ವಿಭಾಗಕ್ಕೆ ಅರ್ಜಿ ಸಲ್ಲಿಸುತ್ತಿರುವ ಅಲ್ಲಿ ಆ ದಿನಾಂಕದಂದು ಸಂದರ್ಶನಕ್ಕೆ ಹಾಜರಿರಬೇಕು. ಸಂದರ್ಶನ ನಂತರ ಡಾಕುಮೆಂಟ್ ವೆರಿಫಿಕೇಶನ್ ಆಗಿ ಕೆಲಸ ಪಡೆಯಬಹುದು ಮತ್ತು ಇದಕ್ಕೆ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿಕೊಟ್ಟು ಅರ್ಜಿ ಸಲ್ಲಿಸಬೇಕು.

ಅಧಿಕೃತ ವೆಬ್ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ಸುದ್ದಿ ಹಾಗೂ ಉದ್ಯೋಗ ಮಾಹಿತಿ ನೇರವಾಗಿ ನಿಮ್ಮ ಮೊಬೈಲ್ ನಲ್ಲೇ ಪಡೆಯಲು ನಮ್ಮ WhatsApp ಗುಂಪಿಗೆ ಜಾಯಿನ್ ಆಗಿ
👇🏻👇🏻👇🏻👇🏻
https://chat.whatsapp.com/C39ebnETUZy9UqEBgjML0F