ಇವನ್ಯಾರೋ ಮಾರಾಯ! ಈತನು ಮಾಡಿದ ಕೃತ್ಯದಿಂದ ಹುಚ್ಚೆದ್ದು ಕತ್ತೆ ಜೋರಾಗಿ ಕಿರುಚಾಡತೊಡಗಿತು, ವೀಡಿಯೋ ನೋಡಿ!!

ಸಾಮಾಜಿಕ ಜಾಲತಾಣಗಳಲ್ಲಿ ಇಂದು ಯಾವ ವಿಡಿಯೋ ವೈರಲ್ ಆಗುತ್ತವೆ ಅಂತ ಹೇಳೋಕೆ ಸಾಧ್ಯವೇ ಇಲ್ಲ. ಏಕೆಂದರೆ ಇಂದು ಹುಟ್ಟಿದ ಮಗುವಿನ ಹಿಡಿದು ಮುಪ್ಪಿಗೆ ಬಂದ ವೃದ್ಧರ ವರೆಗೆ ಎಲ್ಲರೂ ರೀಲ್ಸ್ ಮಾಡುತ್ತಾರೆ. ರೀಲ್ಸ್ ಮಾಡೋದರಲ್ಲಿ ಇಂದು ಪುರುಷರಿಗಿಂತ ಸ್ತ್ರೀಯರದೇ ಮೇಲುಗೈ. ಇಂದಿನ ಒಂದು ವರುಷದ ಹುಡಗಿ ಸಹ ಉತ್ತಮವಾದ ರೀಲ್ಸ್ ಮಾಡುತ್ತಾಳೆ ಅಲ್ಲದೆ ನೂರು ವಯಸ್ಸಿನ ಅಜ್ಜಿಯು ಸಹ ಪಡ್ಡೆ ಹುಡುಗರ ನಿದ್ದೆ ಕೆಡಿಸುವೆ ಹಾಗೆ ರೀಲ್ಸ್ ಮಾಡುವದನ್ನು ನಾವು ಎಷ್ಟೋ ನೋಡಿದ್ದೇವೆ.

ಇಂದಿನ ಯುವಪೀಳಿಗೆ ಏನು ಮಾಡುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರ ಬುದ್ಧಿ ತುಂಬಾನೇ ಸ್ಪೀಡ್ ಆಗಿ ಬೆಳೆಯುತ್ತಿದೆ. ಅಲ್ಲದೆ ಮೊಬೈಲ್ ಹಾಗೂ ಅಂತರಜಾಲದ ಸಹಾಯದಿಂದ ಪ್ರತಿಯೊಬ್ಬರೂ ತಮಗೆ ಗೊತ್ತಿರದ ವಿಷಯದ ಬಗ್ಗೆ ಕೆಲ ಸೆಕೆಂಡಗಳಲ್ಲೇ ಮಾಹಿತಿ ಪಡೆದುಕೊಳ್ಳುವರು. ಮೊಬೈಲ್ ಹೊಂದಿದ ಪ್ರತಿ ವ್ಯಕ್ತಿ ತಾನು ಸಹ ಏನಾದರೂ ಮಾಡಿ ಎಲ್ಲೆಡೆಗೆ ಹೆಸರು ಗಳಿಸಬೇಕು ಅನ್ನೋ ಉದ್ದೇಶದಿಂದ ವಿವಿಧ ಪ್ರಕಾರದ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಬಿಡುತ್ತಾರೆ. ಯಾರ ಅದೃಷ್ಟ ಮತ್ತು ವಿಡಿಯೋದಲ್ಲಿಯ ಕಂಟೆಂಟ್ ಸೂಪರ್ ಆಗಿರುತ್ತದೆಯೋ ಅವರು ರಾತ್ರೋ ರಾತ್ರಿ ಫೇಮಸ್ ಆಗಿ ಬಿಡುತ್ತಾರೆ.

ರೀಲ್ಸ್ ಮಾಡುವದು ಇದೊಂದು ಪ್ರಕಾರದ ಹವ್ಯಾಸವೇ ಆಗಿದೆ. ಇಂದು ಪ್ರತಿಯೊಬ್ಬರೂ ಮೊಬೈಲ್ ಹೊಂದಿದ್ದಾರೆ, ಮೊಬೈಲ್ ಇದ್ದ ಮೇಲೆ ರೀಲ್ಸ್ ಮಾಡಲೇ ಬೇಕು ಅನ್ನೋ ವಿಚಾರ ಸದ್ಯದಲ್ಲಿ ಚಾಲ್ತಿಯಲ್ಲಿದೆ. ಇಂದು ಒಬ್ಬ ಸಾಧಾರಣ ವ್ಯಕ್ತಿ ಹಿಡಿದು ಪ್ರಸಿದ್ಧ ವ್ಯಕ್ತಿಗಳು ಸಹ ರೀಲ್ಸ್ ಮಾಡುವಲ್ಲಿ ಬ್ಯುಸಿ ಯಾಗಿದ್ದಾರೆ. ರೀಲ್ಸ್ ಇದೊಂದು ವೀಡಿಯೋದ ತುಣುಕಾಗಿರುತ್ತದೆ. ಯಾವುದೇ ಒಂದು ಸನ್ನಿವೇಶ ಅಥವಾ ಹಾಡು, ಡೈಲಾಗ್ ಗಳಿಗೆ ಆಕ್ಟ್ ಮಾಡಿ ಅದನ್ನು ಪೋಸ್ಟ್ ಮಾಡುವದು. ಹೀಗಾಗಿ ಕಂಟೆಂಟ್ ಸೂಪರ್ ಹೊಂದಿರುವ ವಿಡಿಯೋ ಮತ್ತು ಉತ್ತಮವಾಗಿ ಆಕ್ಟ್ ಮಾಡಿರುವ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತವೆ.

ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀವು ನೋಡಬಹುದು ಒಬ್ಬ ವ್ಯಕ್ತಿ ತನ್ನ ಕತ್ತೆಯನ್ನು ತಗೆದುಕೊಂಡು ಒಂದು ರಸ್ತೆಯ ಮೇಲೆ ನಿಂತು ಕತ್ತೆಯ ಜೊತೆಗೆ ರೀಲ್ಸ್ ಮಾಡತೊಡಗಿದನು. ಕತ್ತೆಯ ಕಿವಿಯ ಹತ್ತಿರ ಹೋಗಿ ಕತ್ತೆಯ ಧ್ವನಿಯ ಹಾಗೆ ಜೋರು ಜೋರಾಗಿ ಚೀರುತ್ತಾನೆ. ಆಗ ಕತ್ತೆಯು ಸಹ ಆತನ ಧ್ವನಿ ಬಹುಶಃ ಬೇರೆ ಕತ್ತೆ ತನ್ನನ್ನು ಕೂಗುತ್ತಿದೆ ಎಂದುಕೊಂಡು ಅದು ಸಹ ಜೋರು ಜೋರಾಗಿ ಚೀರುತ್ತದೆ. ಆದರೆ ಪಾಪ ಕತ್ತೆಗೇನು ಆ ಕೂಗು ಈ ಮನುಷ್ಯದೇ ಅಂತ. ಮನುಷ್ಯ ಚೀರುವಾಗ ಕತ್ತೆಯ ಮುಖ ನೋಡಬೇಕು ತುಂಬಾನೇ ಭಾವುಕವಾಗಿ ನೋಡುತ್ತಿರುತ್ತದೆ.

ವಿಡಿಯೋ ನೋಡಿ.

 

View this post on Instagram

 

A post shared by هیستو مکس (@histomaax)

ಪ್ರಸ್ತುತ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ histomaax ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ಕತ್ತೆಯ ವಿಡಿಯೋವನ್ನು ಸುಮಾರು ಐದು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ನಲ್ವತ್ತು ಸಾವಿರಕ್ಕೂ ಹೆಚ್ಚು ಜನರು ಲೈಕ್ ಸಹ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ‘ಕತ್ತೆಗಿಂತ ನೀನೇ ಚೆನ್ನಾಗಿ ಒದುರುವೆ’ ‘ಪಾಪ ಕತ್ತೆ’ ಹೀಗೆ ಬೇರೆ ಬೇರೆಯಾದ ಕಾಮೆಂಟ್ ಸಹ ಮಾಡುತ್ತಿದ್ದಾರೆ.