KBC ಯಲ್ಲಿ ಒಂದು ಕೋಟಿ ರೂಪಾಯಿ ಗೆದ್ದ ನಂತರ ಟ್ಯಾಕ್ಸ್ ರೂಪದಲ್ಲಿ ಕಡಿತವಾಗುತ್ತದೆ ಇಷ್ಟೊಂದು ಹಣ, ಗೆದ್ದವನಿಗೆ ಸಿಗುತ್ತದೆ ಬರೀ ಇಷ್ಟು!
ಟಿವಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡಪತಿ ಈ ಹಿಂದಿ ಕಾರ್ಯಕ್ರಮ ಬಾಲಿವುಡ್ ಮಹಾನಾಯಕ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮವನ್ನು ತಮ್ಮ ಬುದ್ಧಿಯ ಬಲದಿಂದ ಹಾಗೂ ಮಾತುಗಳ ಚಟಾಕಿಯಿಂದ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೊಂದು ಗೇಮಿಂಗ್ ಶೋ ಆಗಿದೆ. 2000 ದಿಂದ 2020ರ ವರೆಗೆ ಈ ಕಾರ್ಯಕ್ರಮವು ಜನರ ಮನ್ನಣೆಗೆ ಪಾತ್ರವಾಗಿ ಯಶಸ್ವಿಯಾಗಿದೆ.
ಈ ಕಾರ್ಯಕ್ರಮವು ಅಲ್ಲಿಂದ ಇಲ್ಲಿಯವರೆಗೆ ಒಟ್ಟು 12 ಸೀಸನ್ ಗಳಲ್ಲಿ ಪ್ರಸಾರವಾಗಿದೆ. ಬರೀ ಒಂದು ಸೀಸನ್ನಲ್ಲಿ ಈ ಕಾರ್ಯಕ್ರಮವನ್ನು ಶಾರುಖ್ ಖಾನ್ ಅವರು ನಡೆಸಿಕೊಟ್ಟದ್ದನ್ನು ಬಿಟ್ಟರೆ ಉಳಿದೆಲ್ಲ ಸೀಸನ್ ನಲ್ಲಿ ಅಮಿತಾಬ್ ಅವರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಗೆಲ್ಲುವ ವ್ಯಕ್ತಿಗೆ ಕೋಟಿ ಕೋಟಿ ರೂಪಾಯಿಗಳವರೆಗೆ ಬಹುಮಾನ ನೀಡಲಾಗುತ್ತದೆ. ಮೊದಲು ಒಂದು ಕೋಟಿಯಿಂದ ಪ್ರಾರಂಭವಾದ ಈ ಆಟವು ಈಗ ಏಳು ಕೋಟಿ ರೂಪಾಯಿಗಳ ಬಹುಮಾನದ ವರೆಗೆ ಬಂದು ತಲುಪಿದೆ.
ಆಟದ ಹೆಸರು ಕೌನ್ ಬನೇಗಾ ಕರೋಡಪತಿ ಎನ್ನುವ ಹಾಗೆ ಇಲ್ಲಿ ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದೇ ಆದಲ್ಲಿ ಸ್ಪರ್ಧಿಯು ಏಳು ಕೋಟಿ ರೂಪಾಯಿಗಳನ್ನು ಗೆಲ್ಲಬಹುದು ಆಗಿದೆ. ಆದರೆ ನಾವು ನೀವು ತಿಳಿದುಕೊಂಡ ಹಾಗೆ ಗೆದ್ದ ಹಣ ಎಲ್ಲವೂ ಸ್ಪರ್ಧಿಯ ಕೈಸೇರುತ್ತದೆ ಅಂತ ತಿಳಿದುಕೊಳ್ಳಬೇಡಿ. ಗೆದ್ದ ಹಣದಲ್ಲಿ ದೊಡ್ಡಪ್ರಮಾಣ ಟ್ಯಾಕ್ಸ್ ಕಡಿತವಾಗುತ್ತದೆ.

ಅಮಿತಾಭ್ ಅವರೆದುರು ಹಾಟ್ ಸೀಟಿನಲ್ಲಿ ಕುಳಿತ ಪ್ರತಿಯೊಂದು ಸ್ಪರ್ಧಿಯು ಅಮಿತಾಬ್ ಅವರು ಕೇಳಿದ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಿ ಅಧಿಕ ಹಣವನ್ನು ಗೆಲ್ಲಲು ಪ್ರಯತ್ನಿಸುತ್ತಾನೆ. ಎಷ್ಟೋ ಸ್ಪರ್ಧಿಗಳು ಹಾಟ್ ಸೀಟ್ ವರೆಗೆ ಹೋದರೂ ಸಾಕಷ್ಟು ಹಣವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಆಟವೇ ತುಂಬಾ ಅದ್ಭುತವಾಗಿದೆ.
ಈ ಆಟದಲ್ಲಿ ಒಂದು ವೇಳೆ ಸ್ಪರ್ಧಿಯು ಕೋಟಿ ರೂಪಾಯಿಗಳನ್ನು ಗೆದ್ದದ್ದೇ ಆದರೆ, ಎಲ್ಲಾ ಕೋಟಿ ರೂಪಾಯಿಗಳು ಆತನಿಗೆ ಸಿಗುತ್ತವೆ ಎಂದು ತಿಳಿಯಬೇಡಿ. ಏಕೆಂದರೆ ಇದರಲ್ಲಿ ದೊಡ್ಡ ಮೊತ್ತ ಟ್ಯಾಕ್ಸ್ ರೂಪದಲ್ಲಿ ಕಡಿತಗೊಳ್ಳುತ್ತದೆ.
ಈ ಆಟದಲ್ಲಿ ಒಂದು ಕೋಟಿ ರೂಪಾಯಿಗಳನ್ನು ಗೆದ್ದಾಗ ಟ್ಯಾಕ್ಸ್ ರೂಪದಲ್ಲಿ ಮರುಪಾವತಿಸಬೇಕಾದ ಹಣವೇಷ್ಟು ಎಂಬುದನ್ನು ನೋಡಿ.
ಒಂದು ಕೋಟಿ ರೂಪಾಯಿಗಳನ್ನು ಗೆದ್ದಾಗ 34.2 ಲಕ್ಷ ರೂಪಾಯಿಗಳನ್ನು ಟ್ಯಾಕ್ಸ್ ಸ್ವರೂಪದಲ್ಲಿ ಮರುಪಾವತಿಸಬೇಕಾಗುವುದು.
ಟ್ಯಾಕ್ಸ ನ ಅಧೀನವಾದ ಸೆಕ್ಷನ್ 194 ಬಿ ಪ್ರಕಾರ, ಯಾವುದೇ ಸ್ಪರ್ಧಿಯು ಒಂದು ಕೋಟಿ ರೂಪಾಯಿಗಳ ಮೊತ್ತವನ್ನು ಗೆದ್ದಾಗ ಆ ಹಣದ ಮೇಲೆ 30% ಟ್ಯಾಕ್ಸ್ ನೀಡಬೇಕಾಗುತ್ತದೆ. ಅಂದರೆ ಆ ಮೊತ್ತ 30 ಲಕ್ಷ ರೂಪಾಯಿಗಳಷ್ಟು ಆಗುವುದು. ಇದರ ಜೊತೆಗೆ 30 ಲಕ್ಷ ರೂಪಾಯಿಗಳಿಗೆ 10% ಸರ್ ಚಾರ್ಜ್ ನೀಡಬೇಕಾಗುವುದು. ಈ ಮೊತ್ತ ಮೂರು ಲಕ್ಷ ರೂಪಾಯಿಗಳಷ್ಟು ಆಗುವುದು. ಇದರ ಹೊರತಾಗಿ ಮೂವತ್ತು ಲಕ್ಷ ರೂಪಾಯಿಗಳ ಮೇಲೆ 4% ಸೆಸ್ ಕೊಡಬೇಕಾಗುವುದು. ಅದು 1.2 ಲಕ್ಷ ರೂಪಾಯಿಗಳು ಆಗುವುದು. ಹೀಗೆ ಎಲ್ಲವೂ ಕೂಡಿಗೆ 34.2 ಲಕ್ಷ ರೂಪಾಯಿಗಳನ್ನು ಸ್ಪರ್ಧಿಯು ಒಂದು ಕೋಟಿ ರೂಪಾಯಿಗಳನ್ನು ಗೆದ್ದಾಗ ಟ್ಯಾಕ್ಸ್ ರೂಪದಲ್ಲಿ ಸರ್ಕಾರಕ್ಕೆ ನೀಡಬೇಕಾಗುವುದು. ಇಷ್ಟೆಲ್ಲಾ ಹರಿದು ಹಂಚಿ ಆದಮೇಲೆ ಸ್ಪರ್ಧಿಗೆ 65 ಲಕ್ಷ ರೂಪಾಯಿಗಳಷ್ಟು ಮಾತ್ರ ದೊರೆಯುತ್ತವೆ. ಹೀಗಾಗಿ ಸ್ಪರ್ಧಿಯು KBC ಯಲ್ಲಿ ಒಂದು ಕೋಟಿ ರೂಪಾಯಿಗಳನ್ನು ಗೆದ್ದಾಗ ತನ್ನ ಜೊತೆಗೆ ಅಥವಾ ಆತನ ಅಕೌಂಟ್ ನಲ್ಲಿ 65 ಲಕ್ಷ ರೂಪಾಯಿಗಳಷ್ಟು ಜಮೆ ಆಗುತ್ತವೆ.