ಆ ಐದು ಸಂಶೋಧಕರು ಅದ್ಭುತ ಆವಿಷ್ಕಾರ ಮಾಡಿ ಕೊನೆಗೆ ತಮ್ಮದೇ ಸಂಶೋಧನೆಯಿಂದ ಸಾ’ವ’ನ್ನಪ್ಪಿದರು! ಯಾರು – ಹೇಗೆ? ಓದಿ…

‘ಅವಶ್ಯಕತೆ ಆವಿಷ್ಕಾರದ ತಾಯಿ’ ಎಂಬ ಮಾತು ಸಾಕಷ್ಟು ಜನಪ್ರಿಯವಾಗಿದೆ. ಬದುಕಲು ಅಗತ್ಯವಾದುದನ್ನು ಪಡೆಯಲು ಮನುಷ್ಯ ಹೇಗಾದರೂ ಪ್ರಯತ್ನಸಿ ಸಾಧಿಸುವ ನಿಟ್ಟಿನಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ ಮತ್ತು ಅದನ್ನು ಸಾಧಿಸಲು ದಣಿವರಿಯದೆ ಕೆಲಸ ಮಾಡುತ್ತಾನೆ. ಮನುಷ್ಯನು ತನ್ನನ್ನು ತಾನು ಬೆಳೆಸಿಕೊಳ್ಳಲು ಪ್ರಾರಂಭಿಸಿದಾಗ, ಅವನ ಅಗತ್ಯತೆಗಳ ಕ್ಷೇತ್ರವೂ ಅದೇ ರೀತಿಯಲ್ಲಿ ಹೆಚ್ಚಾಯಿತು.

ಆದರೆ ಒಬ್ಬ ವ್ಯಕ್ತಿಯು ಕಾಲ್ನಡಿಗೆಯಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ಹಲವು ದಿನಗಳನ್ನು ತೆಗೆದುಕೊಂಡ ಸಮಯವಿತ್ತು. ಇಂದು ವಿಮಾನಗಳು ಮತ್ತು ರೈಲುಗಳಂತಹ ಸಾರಿಗೆ ಸಾಧನಗಳ ಆವಿಷ್ಕಾರದೊಂದಿಗೆ ಬಹಳ ಕಡಿಮೆ ಸಮಯದಲ್ಲಿ ದೂರದ ಪ್ರಯಾಣವನ್ನು ಮಾಡಲಾಗುತ್ತಿದೆ.

ಯಾವುದನ್ನಾದರೂ ಆವಿಷ್ಕರಿಸುವುದು ಸುಲಭದ ಕೆಲಸವಲ್ಲ. ಇದನ್ನು ಮಾಡಲು ವಿಜ್ಞಾನಿಗಳಿಗೆ ವರ್ಷಗಳು ಬೇಕಾಗುತ್ತದೆ. ಆಗ ಮಾತ್ರ ಅವರು ಯಶಸ್ವಿಯಾಗಲು ಸಾಧ್ಯ. ಅಂತಹ ಕೆಲವು ಆವಿಷ್ಕಾರಕರು ಮತ್ತು ಅವರ ಆವಿಷ್ಕಾರಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ, ಅವರ ಆವಿಷ್ಕಾರಗಳು ಬಹಳ ಉಪಯುಕ್ತವೆಂದು ಸಾಬೀತೇನೋ ಆಯಿತು, ಆದರೆ ಅವರ ಆವಿಷ್ಕಾರಗಳು ಖುದ್ದು ಅವರ ಸಾ’ವಿಗೇ ಕಾರಣವಾದವು!

ಹೊರೇಸ್ ಲಾಸನ್ ಹನ್ಲೆ (Horace Lawson Hunley) :
ಅಮೆರಿಕದ ಸಮ್ಮರ್ ಕೌಂಟಿಯಲ್ಲಿ ಡಿಸೆಂಬರ್ 29, 1823 ರಂದು ಜನಿಸಿದ ಹೊರೇಸ್ ಲಾಸನ್ ಹನ್ಲೆ, ಕೈಯಿಂದ ಚಲಾಯಿಸಬಲ್ಲ ಜಲಾಂತರ್ಗಾಮಿ (ಸಬ್ ಮರೀನ್) ನೌಕೆಯನ್ನು ಕಂಡುಹಿಡಿದರು. ದೇಶದ ರಕ್ಷಣೆಯ ದೃಷ್ಟಿಯಿಂದ ಅದೊಂದು ಅದ್ಭುತ ಆವಿಷ್ಕಾರವಾಗಿತ್ತು. ನೌಕಾಪಡೆಗಳ ಬಲ ಹೆಚ್ಚಿಸುವ ಮೈಲುಗಲ್ಲಾಗಿತ್ತು. ಆದರೆ ಪರೀಕ್ಷೆಯ ಸಮಯದಲ್ಲಿ ಅವರ ಜಲಾಂತರ್ಗಾಮಿ ಸಮುದ್ರದಲ್ಲಿ ಮುಳುಗಿತು, ಅದರಲ್ಲಿ ಅವರು ತನ್ನ ಸಿಬ್ಬಂದಿ ಸಮೇತ ಹಾಜರಿದ್ದರು ಮತ್ತು ಈ ಅ’ಪ’ಘಾ’ತದಲ್ಲಿ ಮೃ’ತ’ಪ’ಟ್ಟರು!

ಹೆನ್ರಿ ಸ್ಮೋಲಿನ್ಸ್ಕಿ (Henry Smolinski) :
ಹೆನ್ರಿ ಸ್ಮೋಲಿನ್ಸ್ಕಿ ಹಾರುವ ಕಾರುಗಳನ್ನು (Flying cars) ತಯಾರಿಸಿ ಹೆಸರುವಾಸಿಯಾಗಿದ್ದಾರೆ. 1973 ರಲ್ಲಿ ಅವರು ಇದನ್ನು ಕಂಡುಹಿಡಿದರು, ಅದಕ್ಕೆ ಅವರು ‘ಎವಿಇ ಮಿಜಾರ್’ (‘AVE Mizar’) ಎಂದು ಹೆಸರಿಸಿದರು. ಆದಾಗ್ಯೂ ಪರೀಕ್ಷೆಯನ್ನು ನಡೆಸಲು ಅವರು ತಮ್ಮ ಹಾರುವ ಕಾರಿಗೆ ಹತ್ತಿ ಅದನ್ನು ಹಾರಿಸಿದಾಗ, ಕಾರು ಅ’ಪ’ಘಾ’ತಕ್ಕೀಡಾಗಿ ಅವರೇ ಪ್ರಾ’ಣ ಕಳೆದುಕೊಂಡರು.

ಫ್ರಾಂಜ್ ರೀಚೆಲ್ಟ್ (Franz Reichelt) :
ಆಸ್ಟ್ರಿಯನ್ ಮೂಲದ ಫ್ರಾಂಜ್ ರೀಚೆಲ್ಟ್‌ ನನ್ನು ಆಧುನಿಕ ವಿಂಗ್‌ ಸೂಟ್‌ ನ ಆವಿಷ್ಕಾರಕ ಎಂದು ಪರಿಗಣಿಸಲಾಗಿದೆ. ಅವರ ಆವಿಷ್ಕಾರ ಮುಂದೆ ಸಾಕಷ್ಟು ಉಪಯೋಗವಾಯಿತು. ಆದರೆ ಮೊದಲು ತಾವು ತಯಾರಿಸಿದ್ದ Parachute ಅನ್ನು ಪರೀಕ್ಷಿಸಲು ಪ್ಯಾರಿಸ್‌ ನ ಐಫೆಲ್ ಟವರ್‌ ನಿಂದ ಹಾ’ರಿ ಸಾ’ವ’ನ್ನಪ್ಪಿದರು. ಆ ಸಮಯದಲ್ಲಿ ಅವರಿಗೆ ಕೇವಲ 33 ವರ್ಷ.

ಮೇರಿ ಕ್ಯೂರಿ (Marie Curie) :
ರೇಡಿಯಂ ಮತ್ತು ಪೊಲೊನಿಯಮ್ ಎಂಬ ಎರಡು ಅಂಶಗಳನ್ನು ಕಂಡುಹಿಡಿದ ಪ್ರಸಿದ್ಧ ಭೌತಶಾಸ್ತ್ರಜ್ಞೆ ಮತ್ತು ರಸಾಯನಶಾಸ್ತ್ರಜ್ಞೆ ಮೇರಿ ಕ್ಯೂರಿ. ಅವರು 1934 ರಲ್ಲಿ ತಮ್ಮದೇ ಆವಿಷ್ಕಾರದಿಂದಾಗಿ ನಿಧನರಾದರು. ವಾಸ್ತವವಾಗಿ ಮೇರಿ ಕ್ಯೂರಿ ವಿಕಿರಣಶೀಲತೆಯ ಮೇಲೆ ಕೆಲಸ ಮಾಡುತ್ತಿದ್ದರು, ಆದರೆ ವಿಕಿರಣಶೀಲತೆ ಎಷ್ಟು ಅಪಾಯಕಾರಿ ಎಂದು ಆಕೆಗೆ ತಿಳಿದಿರಲಿಲ್ಲ. ಇದು ಅವರ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಿತು, ಇದರಿಂದಾಗಿ ಅವರು ಸಾ’ವ’ನ್ನಪ್ಪಿದರು.

ವಿಲಿಯಂ ಬುಲಕ್ (William Bullock) :
ಅಮೆರಿಕದ ಗ್ರೀನ್‌ ವಿಲ್ಲೆಯಲ್ಲಿ ಜನಿಸಿದ ವಿಲಿಯಂ ಬುಲಕ್ ರಿಚರ್ಡ್ ಮಾರ್ಚ್ ಹೋಯ್ ತಯಾರಿಸಿದ ‘ರೋಟರಿ ಪ್ರಿಂಟಿಂಗ್ ಪ್ರೆಸ್’ ಗೆ ಸುಧಾರಣೆ ಮಾಡಿ ಹೆಸರುವಾಸಿಯಾಗಿದ್ದಾರೆ. ಅವರ ಕಾರಣದಿಂದಾಗಿ ಮುದ್ರಣ ಉದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಬಂದಿದೆ. ಆದರೆ ತನ್ನದೇ ಆದ ಮುದ್ರಣ ಯಂತ್ರವನ್ನು ಸರಿಪಡಿಸುವಾಗ, ಅವರು ಅದರಲ್ಲಿ ಸಿಕ್ಕಿಹಾಕಿಕೊಂಡು ಸ’ತ್ತರು!
-Team Infotrend