ಕೆಟ್ಟು ಹೋದ ವಿಮಾನವನ್ನು ಬಿಟ್ಟು ಹೋದ ಪೈಲಟ್! : ಐದು ವರ್ಷಗಳಿಂದ ಭಾರತದಲ್ಲಿ ಇದ್ದಲೇ ಇದೆ ಈ ವಿಮಾನ! ಓದಿ ರೋಚಕ ಘಟನೆ…

ವಾಹನ ಎಂದ ಮೇಲೆ ಅದರ ಸಮರ್ಪಕವಾದ ಉಪಯೋಗವಾಗಬೇಕು. ಅದು ಸಂಚಾರಕ್ಕೆ ಸಹಕಾರಿಯಾಗಿರಬೇಕು. ಅಲ್ಲದೇ ಯಾವುದೇ ವಾಹನವೇ ಆಗಲಿ, ಅದು ಎಲ್ಲಿಯವರೆಗೆ ಸಮರ್ಪಕವಾದ ಸೇವೆಯನ್ನು ಕೊಡಲು ಸಾಮರ್ಥ್ಯವನ್ನು ಪಡೆದಿರುತ್ತದೆಯೋ, ಅಲ್ಲಿಯವರೆಗೆ ಮಾತ್ರ ಅದಕ್ಕೆ ಮೌಲ್ಯ ಇರುತ್ತದೆ. ಒಂದು ಹೊಸ ವಾಹನವನ್ನು ಖರೀದಿ ಮಾಡಿ ಬಹಳ ಎಚ್ಚರಿಕೆಯಿಂದ ಅದನ್ನು ಬಳಸದೆ ಒಂದು ಕಡೆ ನಿಲ್ಲಿಸಿಬಿಟ್ಟರೂ ಅದು ಅನುಪಯುಕ್ತ ಎನಿಸಿಕೊಳ್ಳುವುದು ಮಾತ್ರವೇ ಅಲ್ಲದೆ ಹಾಳಾಗುವುದು ಕೂಡಾ ಖಚಿತ.

ನಾವು ಅಂತಹದೇ ಒಂದು ಆಸಕ್ತಿಕರ ವಿಷಯವನ್ನು ಹೇಳಲು ಹೊರಟಿದ್ದೇವೆ. ಆದರೆ ಇಲ್ಲಿ ಹೇಳಲು ಹೊರಟಿರುವ ವಾಹನ ಬಸ್ಸು, ಕಾರು, ಲಾರಿ ಅಥವಾ ಇನ್ಯಾವುದೇ ಚಿಕ್ಕ ವಾಹನದ ಕುರಿತಾಗಿ ಅಲ್ಲ. ಬದಲಾಗಿ ಇದು ಒಂದು ವಿಮಾನದ ಕುರಿತಾಗಿ. ಒಂದು ದುಬಾರಿ ವಿಮಾನವನ್ನೇ ಹೀಗೆ ಗುಜರಿ ಮಾಡಲಾಗಿದೆ!

ಏನು ಈ ವಿಮಾನದ ವಿಶೇಷತೆ ? ಕಳೆದ ಐದು ವರ್ಷಗಳಿಂದಲೂ ಈ ವಿಮಾನ ನಿಂತಲ್ಲೇ ನಿಂತಿರುವ ಈ ವಿಮಾನ ಯಾವ ದೇಶದ್ದು? ಏಕೆ ಅದನ್ನು ಕಳೆದ ಐದು ವರ್ಷಗಳಿಂದಲೂ ಬಳಸದೆ ಹಾಗೆಯೇ ಬಿಡಲಾಗಿದೆ? ಎನ್ನುವ ಕುತೂಹಲಭರಿತ ವಿಚಾರವನ್ನು ನಾವೀಗ ತಿಳಿಯೋಣ.

ಮೊದಲನೇದಾಗಿ ಈ ವಿಮಾನ ಯಾವ ದೇಶದ್ದು? ಎನ್ನುವುದಾದರೆ, ಇದು ಭಾರತದ ನೆರೆಯ ರಾಷ್ಟ್ರವಾದ ಬಾಂಗ್ಲಾದೇಶದ ವಿಮಾನವಾಗಿದೆ. ಈ ವಿಮಾನ ಕಳೆದ ಐದು ವರ್ಷಗಳಿಂದಲೂ ರಾಯ್ಪುರದ ವಿಮಾನ ನಿಲ್ದಾಣದಲ್ಲಿ ನಿಂತಿದೆ. ಹಾಗಿದ್ದರೆ ಐದು ವರ್ಷಗಳಿಂದ ಈ ವಿಮಾನ ನಿಲ್ದಾಣದಲ್ಲಿ ಈ ವಿಮಾನ ಇರುವುದಾದರೂ ಏತಕ್ಕೆ ಎನ್ನುವ ವಿಷಯದ ಕಡೆಗೆ ಗಮನ ಹರಿಸಿದಾಗ…

2015 ರಲ್ಲಿ ಬಾಂಗ್ಲಾದೇಶದ ಈ ವಿಮಾನವು ಬಾಂಗ್ಲಾದೇಶದ ರಾಜಧಾನಿ ಢಾಖಾದಿಂದ ಮಸ್ಕಟ್ ಕಡೆಗೆ ತನ್ನ ಪ್ರಯಾಣವನ್ನು ಬೆಳೆಸಿ ಆಗಸದ ಕಡೆಗೆ ಹಾರಿತು. ಈ ವಿಮಾನ ಬಾಂಗ್ಲಾದೇಶದ ಯುನೈಟೆಡ್ ಏರ್ವೇಸ್ ನ ಮ್ಯಾಕ್ ಡೊನಲ್ ಡಗ್ಲಸ್ ಎಂಡಿ 83 ಆಗಿತ್ತು. ವಿಮಾನ ಪ್ರಯಾಣ ಆರಂಭಿಸಿದಾಗ ವಿಮಾನದಲ್ಲಿ 173 ಜನ ಪ್ರಯಾಣಿಕರು ಮಸ್ಕಟ್ ಕಡೆಗೆ ಪ್ರಯಾಣವನ್ನು ಬೆಳೆಸಿದ್ದರು.

ಹಾಗೆ ಹಾರುತ್ತಿದ್ದ ವಿಮಾನ ಭಾರತದ ವಾರಣಾಸಿ ಹಾಗೂ ರಾಯಪುರದ ಕಡೆಗೆ ಬರುವಾಗ ವಿಮಾನದ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಆಗ ತುರ್ತು ಪರಿಸ್ಥಿತಿಯಲ್ಲಿ ವಿಮಾನವನ್ನು ಕೆಳಗೆ ಇಳಿಸಲು ವಿಮಾನದ ಪೈಲೆಟ್ ಅನುಮತಿಯನ್ನು ಕೇಳಿದಾಗ, ಈ ವಿಚಾರವನ್ನು ಕೊಲ್ಕತ್ತಾ ಏರ್ ಟ್ರಾಫಿಕ್ ಕಂಟ್ರೋಲ್ ರಾಯಪುರ ವಿಮಾನ ನಿಲ್ದಾಣಕ್ಕೆ ರವಾನಿಸಿದಾಗ, ಕೂಡಲೇ ವಿಮಾನಕ್ಕೆ ರಾಯಪುರ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿಯನ್ನು ನೀಡಲಾಯಿತು.

ಆದರೆ ವಿಮಾನ ಭೂಸ್ಪರ್ಶ ಮಾಡುವ ಮೊದಲೇ ಎಂಜಿನ್ ನ ಒಂದು ಭಾಗ ಬೆಂಕಿಯಲ್ಲಿ ಉರಿದು ಕೆಳಗೆ ಬಿದ್ದಿತ್ತು. ಅದೃಷ್ಟವಶಾತ್ ವಿಮಾನ ಯಾವುದೇ ಅಪಾಯಕ್ಕೆ ಒಳಗಾಗದೆ ಲ್ಯಾಂಡ್ ಆಗಿ, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಕೆಳಗೆ ಇಳಿದರು. ಮರುದಿನ ಬಾಂಗ್ಲಾ ದೇಶದ ಯುನೈಟೆಡ್ ಏರ್ವೇಸ್ ಬೇರೊಂದು ವಿಮಾನವನ್ನು ಕಳುಹಿಸಿ ಎಲ್ಲಾ ಯಾತ್ರಿಕರ ಸಂಚಾರಕ್ಕೆ ವ್ಯವಸ್ಥೆಯಲ್ಲೂ ಮಾಡಿಕೊಟ್ಟಿತು.

ಕೆಲವು ದಿನಗಳ ನಂತರ ವಿಮಾನ ಸಿಬ್ಬಂದಿಯು ಬಾಂಗ್ಲಾದೇಶಕ್ಕೆ ವಾಪಸಾದರು. ಆದರೆ ವಿಮಾನ ಮಾತ್ರ ರಾಯ್ಪುರ ವಿಮಾನ ನಿಲ್ದಾಣದಲ್ಲಿ ಉಳಿಯಿತು. ವಿಮಾನ ಕೆಟ್ಟು ನಿಂತ ಮೇಲೆ 24 ದಿನಗಳ ನಂತರ ಬಾಂಗ್ಲಾದೇಶದಿಂದ ಅಧಿಕಾರಿಗಳು ರಾಯ್ಪುರಕ್ಕೆ ಬಂದರು. ವಿಮಾನವನ್ನು ಪರೀಕ್ಷೆ ಮಾಡಿದರು. ಅದರ ಇಂಜಿನ್ ಬದಲಾಯಿಸಲು ಅನುಮತಿಯನ್ನು ಪಡೆದುಕೊಂಡರು.

ಆದರೆ ಅದು ಕೇವಲ ಗಾಳಿ ಮಾತಿನಂತೆ ಕರಗಿಹೋಯಿತು. ಮತ್ತೆ ಬರುತ್ತೇವೆ ಎಂದು ಹೇಳಿ ಹೋದ ಅಧಿಕಾರಿಗಳು ರಾಯ್ಪುರಕ್ಕೆ ಮರಳಿ ಬರಲಿಲ್ಲ. ಹೀಗೆ ವರ್ಷಗಳು ಕಳೆದವು ವಿಮಾನದ ಪೈಲೆಟ್ ಒಮ್ಮೆ ಬಂದು ವಿಮಾನವನ್ನು ಪರೀಕ್ಷೆ ಮಾಡಿ ಅದನ್ನು ತೆಗೆದುಕೊಂಡು ಹೋಗಲು ಬಾಂಗ್ಲಾದೇಶದ ವಿಮಾನಯಾನ ಪ್ರಾಧಿಕಾರದ ಅನುಮತಿಯನ್ನು ಕೋರಿದರು, ಆದರೆ ಅದು ಸಫಲವಾಗಲಿಲ್ಲ.

ರಾಯ್ಪುರದ ವಿಮಾನ ನಿಲ್ದಾಣ ಪ್ರಾಧಿಕಾರವು ಹಲವು ಬಾರಿ ಯುನೈಟೆಡ್ ಏರ್ವೇಸ್ ಗೆ ಕರೆ ಮಾಡಿ ವಿಮಾನವನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದರು. ಪ್ರತಿ ಬಾರಿಯೂ ಆ ಕಂಪನಿಯ ಏನಾದರೊಂದು ಕಾರಣವನ್ನು ನೀಡುತ್ತಾ ಬಂದಿತು. ಕಡೆಗೆ 6 ಮಾರ್ಚ್ 2016ರಲ್ಲಿ ಯುನೈಟೆಡ್ ಏರ್ವೇಸ್ ತನ್ನ ಕಾರ್ಯ ನಿಲ್ಲಿಸಿತು, ಕಂಪನಿ ಮುಚ್ಚಲ್ಪಟ್ಟಿತು.

ಇನ್ನು ಈ ವಿಮಾನ ರಾಯ್ಪುರ ವಿಮಾನ ನಿಲ್ದಾಣಕ್ಕೆ ಒಂದು ಸಮಸ್ಯೆ ತಂದೊಡ್ಡಿತು, ಸಮಸ್ಯೆ ಏನೆಂದರೆ ಅದರ ಪಾರ್ಕಿಂಗ್. ಈ ವಿಮಾನದ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿ ಮಾರ್ಪಾಟಾಯಿತು. 2018 ರಲ್ಲಿ ಮತ್ತೊಮ್ಮೆ ಆ ಕಂಪನಿಯ ಅಧಿಕಾರಿಗಳನ್ನು ಪದೇ ಪದೇ ಸಂಪರ್ಕ ಮಾಡಲಾಯಿತು. ವಿಮಾನವನ್ನು ತೆಗೆದುಕೊಂಡು ಹೋಗುವಂತೆ ಒತ್ತಾಯ ಹೇರಲಾಯಿತು.

ಹೀಗೆ ಮಾಡಿದ ಪ್ರಯತ್ನಗಳ ನಂತರ 20 ಜುಲೈ 2018 ರಲ್ಲಿ ಬಾಂಗ್ಲಾದೇಶದ ಯುನೈಟೆಡ್ ಏರ್ವೇಸ್ ನ ಸಹಾಯಕ ನಿರ್ದೇಶಕ ಇನಾಯತ್ ಹುಸೇನ್ ಅವರು ರಾಯ್ಪುರಕ್ಕೆ ಬಂದರು. ಅವರ ಉಪಸ್ಥಿತಿಯಲ್ಲಿ ವಿಮಾನ ಮೊದಲು ನಿಂತಿದ್ದ ರನ್ ವೇ ಜಾಗದಿಂದ 300 ಮೀಟರ್ ದೂರದಲ್ಲಿ ನಿಲ್ಲಿಸಲಾಯಿತು. ನಂತರ ಅವರು ಬಾಂಗ್ಲಾದೇಶಕ್ಕೆ ವಾಪಸಾದರು ಮತ್ತೆ ವಿಮಾನವನ್ನು ತೆಗೆದುಕೊಂಡು ಹೋಗಲು ಯಾರೂ ಬರಲಿಲ್ಲ!

ವಿಮಾನ ನಿಲ್ದಾಣದಲ್ಲಿ ಈ ವಿಮಾನದ ಪಾರ್ಕಿಂಗ್ ನ ಸಮಸ್ಯೆ ಮತ್ತೆ ಮತ್ತೆ ಕಾಡುತ್ತಿದೆ. ಮೊದಲು ಗಂಟೆಗೆ ಮುನ್ನೂರು ಇಪ್ಪತ್ತು ರೂಪಾಯಿಗಳ ದರದಲ್ಲಿ ಪಾರ್ಕಿಂಗ್ ನೀಡಲಾಗಿತ್ತು. ಆದರೆ ಈಗ ಆ ಹಣ ಸಹ ಬರುವ ನಿರೀಕ್ಷೆಯಿಲ್ಲ ಎನ್ನುತ್ತಾರೆ ರಾಯ್ಪುರದ ವಿಮಾನ ನಿಲ್ದಾಣದ ಅಧಿಕಾರಿಗಳು.

ಒಟ್ಟಾರೆ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಿಸಿದ ವಿಮಾನ ಇಂದು ಒಂದು ತ್ಯಾಜ್ಯವಸ್ತುವಿನ ಹಾಗೆ ಇದೆ. ಆ ಬಗೆಗೆ ಮಾಹಿತಿ ನೀಡುವ ಒಂದು ವಿಡಿಯೊ ಮೇಲಿದೆ ನೋಡಿ, ಅದು ಹಿಂದಿಯಲ್ಲಿದ್ದು ಅದರ ಸಾರಾಂಶವನ್ನೇ ಮೇಲೆ ಕೊಡಲಾಗಿದೆ. ಹೀಗಾಗಿ ಆಸಕ್ತಿ ಇದ್ದವರು ಮಾತ್ರ ವಿಡಿಯೊ ನೋಡಿ.