VIDEO : ಸರಗಳ್ಳತನ ಮಾಡಲು ಬಂದವರಿಗೆ ಭರ್ತಿ ಒದೆ! ಕೈಗೆ ಸಿಕ್ಕಿದ್ದು ತಗೆದುಕೊಂಡು ಹೊ’ಡೆ’ದ ಜನ, ವಿಡಿಯೊ ನೋಡಿ
ಮೊದಲ ಜನ ಕೊರೋನ – ಲಾಕ್ ಡೌನ್ ಅಂತ ಬಸವಳಿದು ಕುಳಿತಿದ್ದಾರೆ, ಇದರ ನಡುವೆ ಕಳ್ಳರ ಕಾಟ ಬೇರೆ ಹೆಚ್ಚಾಗಿದೆ. ಜನನಿಬಿಡ ಪ್ರದೇಶವಾಗಿದ್ದರೆ ಹೇಗೋ ಚೈನ್ ಎಗರಿಸಿ ಪರಾರಿಯಾಗುತ್ತಿದ್ದರು. ಲಾಕ್ ಡೌನ್ ಇದ್ದುದರಿಂದ ಸಿಗಾಕಿಕೊಂಡು ಭರ್ಜರಿ ವದೆ ತಿಂದು ಜೈಲುಪಾಲಾದರು. ಈ ಘಟನೆ ನಡೆದಿರುವುದು ಕೋಲಾರದಲ್ಲಿ.
ಇಂಥ ಚೈನ್ ಕಳ್ಳರು – ಪರ್ಸ್ ಕಳ್ಳರು ತಮ್ಮ ಕೈ ಚಳಕ ತೋರಿಸುವುದು ಜನಸಂಚಾರ ಹೆಚ್ಚಿದ್ದಾಗ, ಅಥವಾ ನಿರ್ಜನ ರಸ್ತೆಯಲ್ಲಿ ಸಿಂಗಲ್ಲಾಗಿ ಹೋಗುತ್ತಿದ್ದಾಗ ಇವರು ತಮ್ಮ ಅಟಾಟೋಪ ಮೆರೆಯುತ್ತಿದ್ದರು, ಈಗ ಎರಡೂ ಸಾಧ್ಯವಿಲ್ಲ. ಲಾಕ್ ಡೌನ್ ಇರುವುದರಿಂದ ಹೆಚ್ಚು ಜನ ಒಂದೇ ಕಡೆ ಸೇರುತ್ತಿಲ್ಲ.
ಇನ್ನು ಅದೇ ಲಾಕ್ ಡೌನ್ ಕಾರಣಕ್ಕೆ ನಿರ್ಜನ ರಸ್ತೆಯಲ್ಲಿ ಯಾರೂ ತಿರುಗುವುದಿಲ್ಲ. ಹೀಗಾಗಿ ಕಾಡು ಕಡಿದಾಗ ಆಹಾರ ಹುಡುಕಿ ಜನವಸತಿ ಕಡೆ ಬರುವ ಕಾಡು ಪ್ರಾಣಿಗಳ ಹಾಗೆ ಈ ಕಳ್ಳರು ಓಣಿಯಲ್ಲೇ ಬಂದು ಚೈನ್ ಕದಿಯಲು ನೋಡಿದ್ದರು. ಆದರೆ ದುರದೃಷ್ಟವಶಾತ್ ತಗಲಾಕಿಕೊಂಡು ಜೈಲುಪಾಲಾದರು.
ವಾಸ್ತವದಲ್ಲಿ ಮೊದಮೊದಲು ಇವರು ಸಾರ್ವಜನಿಕರಿಗೆ ಹೆದರಲಿಲ್ಲ. ಚಾ’ಕು ತಗೆದು ಅವರನ್ನು ಹೆದರಿಸಲು ನೋಡಿದರು. ಆದರೆ ಕೆಲಸವಿಲ್ಲದೇ ಖಾಲಿ ಕುಂತ ಜನ ಒಬ್ಬೊಬ್ಬರಾಗಿ ಸೇರಿ ಅವರನ್ನು ಅಟ್ಟಾಡಿಸತೊಡಗಿದರು.
ಕಳ್ಳರಿಂದ ನಿರ್ಧಿಷ್ಟ ಅಂತರ ಕಾಯ್ದುಕೊಂಡೇ ಜನರು ಅವರ ಮೇಲೆ ಕಲ್ಲು’, ಇ’ಟ್ಟಿಗೆ ಒ’ಗೆ’ಯತೊಡಗಿದರು. ಒಬ್ಬ ಉದ್ದನೆಯ ಕೋಲು ತಗೆದುಕೊಂಡು ದೂರದಿಂದಲೇ ಹೊ’ಡೆ’ಯುತ್ತಿದ್ದ. ಸ್ವಲ್ಪ ಸಮಯ ಏ’ಟು ತಿನ್ನುತ್ತಾ ನಡೆದ ಕಳ್ಳರು ಆಮೇಲೆ ಓಡತೊಡಗಿದರು. ಆಗ ಜನರಿಗೂ ಹುರುಪು ಬಂದಂತಾಗಿ ಅವರೂ ಓಡಿ ಹಿಡಿದು ನೆಲಕ್ಕೆ ಕೆಡವಿದರು.
ಸಮಾದಾನ ಆಗುವಷ್ಟು ಧ’ರ್ಮದೇ’ಟು ಕೊಟ್ಟ ಮೇಲೆ ಪೊಲೀಸರಿಗೆ ಒಪ್ಪಿಸಿದರು. ಕೋಲಾರದ ಕುವೆಂಪು ನಗರದಲ್ಲಿ ಈ ಘಟನೆ ನಡೆದಿದ್ದು, ಅದರ ವಿಡಿಯೊ ಮೇಲಿದೆ, ಸೆನ್ಸೆಟಿವ್ ಕಂಟೆಂಟ್ ಆದ್ದರಿಂದ See Video ಒತ್ತಿ, ನೋಡಿ.
-Team Infotrend