Video: ತನ್ನ ಮರಿಗಳನ್ನು ಕದ್ದೊಯ್ಯಲು ಬಂದ ಕಾಗೆಗೆ ನೆಲಕ್ಕೆ ಉರುಳಿಸಿ ಮಣ್ಣು ಮುಕ್ಕಿಸಿದ ಬಹಾದ್ದೂರ್ ಕೋಳಿ, ವೀಡಿಯೋ ನೋಡಿ!!

ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.

ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವೀಡಿಯೋದಲ್ಲಿ ತಾಯಿ ಕೋಳಿ ತನ್ನ ಮರಿಗಳನ್ನು ಯಾವ ರೀತಿಯಾಗಿ ಪಾಲನೆ ಮಾಡುತ್ತದೇ ಅಲ್ಲದೆ ಮರಿಗಳ ಜೀವಕ್ಕೆ ಅಪಾಯ ಬಂದಿದೆ ಎಂದು ಅರಿವಾಗುತ್ತಲೇ ಕೋಳಿ ಯಾವದಕ್ಕೂ ಹಿಂಜರಿಯುವದಿಲ್ಲ ಈ ವಿಡಿಯೋದಲ್ಲಿ ನೀವು ನೋಡಬಹುದು.

ಪ್ರಸ್ತುತ ವಿಡಿಯೋದಲ್ಲಿ ನೀವು ನೋಡಬಹುದು ಒಂದು ಕೋಳಿ ತನ್ನ ಮರಿಗಳಿಗೆ ಆಹಾರವನ್ನು ತಿನ್ನಿಸುತ್ತಿರುತ್ತದೆ. ಅಷ್ಟರಲ್ಲಿ ಮೇಲಿನಿಂದ ಒಂದು ಕಾಗೆ ಬಂದು ಅಲ್ಲಿದ್ದ ಮರಿಗಳಲ್ಲಿ ಒಂದು ಮರಿಯನ್ನು ಹಿಡಿದುಕೊಂಡು ಹೋಗುವ ಪ್ರಯತ್ನ ಮಾಡುತ್ತದೆ. ಆದರೆ ತಾಯಿ ಇದನ್ನು ಕಂಡು ತುಂಬಾನೇ ಕೋಪಗೊಂಡು ಅದರ ಜೊತೆಗೆ ಹೋರಾಡಲು ಶುರುಮಾಡುತ್ತದೆ. ಕಾಗೆ ಇನ್ನೇನು ಮರಿಯನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡು ಮೇಲೆ ಹಾರಬೇಕು ಅನ್ನುವಷ್ಟರಲ್ಲಿ ಈ ಕೋಳಿಯು ಸಹ ಮೇಲೆ ಹಾರಿ ಕಾಗೆಯನ್ನು ತನ್ನ ಎರಡು ಕಾಲುಗಳಿಂದ ಹಿಡಿದು ನೆಲಕ್ಕೆ ಅಪ್ಪಳಿಸುತ್ತದೆ. ಆಗ ಕೆಳಗೆ ಬಿದ್ದ ಕಾಗೆ ಕೋಳಿಯಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಹ ಕೋಳಿ ಅದನ್ನು ಬಿಡುವುದಿಲ್ಲ. ನೆಲಕ್ಕೆ ಉರುಳಿಸಿ ತನ್ನ ಚುಂಚಿನಿಂದ ಅದಕ್ಕೆ ಕೊಕ್ಕುತ್ತದೆ ಕಾಗೆ ಎಷ್ಟೇ ಬಿಡಿಸಿಕೊಂಡರು ಕೋಳಿಯ ಹಿಡಿತ ಸಡಿಲಾಗುವುದಿಲ್ಲ. ಇದರಿಂದ ಕಾಗೆಗೆ ಒಂದು ಉತ್ತಮವಾದ ಪಾಠ ಕಲಿಸಿದೆ ಇನ್ನು ಮುಂದೆ ಕಾಗೆ ಯಾವುದೇ ಕೋಳಿಯ ತಂಟೆಗೆ ಹೋಗುವುದಿಲ್ಲ ಅಂತಹ ಪಾಠವನ್ನು ಕಲಿಸಿದೆ. ನಿಜವಾಗಿಯೂ ತಾಯಿ ತನ್ನ ಮರಿಗಳಗಾಗಿ ಏನು ಬೇಕಾದರೂ ಸಹ ಮಾಡಬಹುದು ಎಂದು ಈ ಕೋಳಿಯು ತೋರಿಸಿಕೊಟ್ಟಿದೆ.

ವಿಡಿಯೋವನ್ನು ನೋಡಿ.

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ wild.taugh ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು 1 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು 4 ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.