ನಾಯಿಯು ಮಾಡಿತು ಕೋಳಿಯ ಹಾಗೆ ಕೂಗುವ ಸೇಮ್ ಟು ಸೇಮ್ ನಕಲು! ನಾಯಿಯ ಈ ತಮಾಷೆಯ ವಿಡಿಯೋ ವೈರಲ್…ನೀವೂ ಒಮ್ಮೆ ನೋಡಿ.
ಭೂಮಿಯ ಮೇಲೆ ಬರೀ ಮನುಷ್ಯನು ನಕಲು ಮಾಡುವುದರಲ್ಲಿ ನಿಪುಣನೆಂದು ತಿಳಿಯಬೇಡಿ. ಯಾಕೆಂದರೆ ಪ್ರತಿಯೊಂದು ಪ್ರಾಣಿಗಳಲ್ಲಿಯೂ ಏನಾದರೂ ಒಂದು ವಿಶೇಷ ಗುಣ ಇದ್ದೇ ಇರುತ್ತದೆ ಎಂದರೆ ತಪ್ಪಾಗಲಾರದು. ಇಲ್ಲಿಯವರೆಗೆ ನಾವು ಮನುಷ್ಯನೇ ಇನ್ನೊಬ್ಬರ ನಕಲು ಮಾಡುವುದರಲ್ಲಿ ಜಾಣ ಎಂದು ತಿಳಿದಿದ್ದೆವು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಅದ್ಭುತವಾದ ವಿಡಿಯೋಗಳು ನೇಟಿಜನ್ಸ್ ಗಳ ಮನಸ್ಸನ್ನು ಸೋರೆಗೊಳ್ಳುತ್ತಿವೆ. ನೀವು ಅನೇಕಸಲ ಜನರ ಬಾಯಿಂದ ಕಾಪಿ ಕ್ಯಾಟ್ ಶಬ್ದವನ್ನು ಕೇಳಿರಬೇಕು. ಆದರೆ ಕಾಪಿ ಡಾಗ್ ಬಗ್ಗೆ ಕೇಳಿದ್ದೀರಾ? ಕೇಳಿಲ್ಲವಾದರೆ ಇಲ್ಲಿ ಓದಿ ಗೊತ್ತಾಗುತ್ತೆ.
ಪ್ರಾಣಿಗಳಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳು ತುಂಬಾ ವೈರಲ್ ಆಗುವುದುಂಟು. ಈಗ ಇದೇ ರೀತಿಯ ನಾಯಿ ಮತ್ತು ಕೋಳಿಯ ತಮಾಷೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೆಚ್ಚಾಗಿ ನಾಯಿಯನ್ನು ತುಂಬಾ ತಿಳುವಳಿಕೆಯುಳ್ಳ ಪ್ರಾಣಿ ಎಂದು ತಿಳಿಯಲಾಗುತ್ತದೆ. ಆದರೆ ಇಲ್ಲಿ ನಾಯಿಯು ಕುಳಿತಲ್ಲಿಯೇ ಕೋಳಿಯ ಕಾಪಿ ಹೇಗೆ ಮಾಡಿದೆ ನೋಡಿ. ವಿಡಿಯೋದಲ್ಲಿ ಮರದ ಬದಿಯಲ್ಲಿ ನಿಂತು ಮೊದಲು ಕೋಳಿಯು ಕೂಗುತ್ತದೆ. ಆಗ ಅಲ್ಲಿಯೇ ಮಗ್ಗುಲಲ್ಲಿ ಕುಳಿತ ನಾಯಿಯು ತಕ್ಷಣ ಕೋಳಿಯ ಹಾಗೆಯೇ ಸೇಮ್ ಟು ಸೇಮ್ ಕೂಗಿದೆ. ಇದು ನಿಜಕ್ಕೂ ನೇಟಿಜನ್ಸ್ ಗಳಿಗೆ ತುಂಬಾ ತಮಾಷೆ ಎನಿಸಿದೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ monushetty751 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋವನ್ನು 3 ಮಿಲಿಯನ್ ಅಂದರೆ 30 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 2 ಲಕ್ಷ 70 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.