ಫಳ ಫಳ ಹೊಳೆಯುವ ಈ ಸ್ಟಂಪ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಗೊತ್ತಾ?

ಕ್ರಿಕೆಟ್ ಎಂಬುದು ಇಂದು ಬಹುತೇಕ ಎಲ್ಲರೂ ವೀಕ್ಷಿಸುವ ಕ್ರೀಡೆಯಾಗಿದ್ದು, ಈ ಆಟವು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಕ್ರಿಕೆಟ್ ಆಟದಲ್ಲಿ ಎಷ್ಟು ಹಣವಿದೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಈ ಆಟದಲ್ಲಿ ಅತಿದೊಡ್ಡ ಆಟಗಾರ, ಅಂದರೆ ವಿಕೆಟ್‌ ನ ಮೌಲ್ಯ ಎಷ್ಟು ಎಂದು ನಿಮಗೆ ತಿಳಿದಿದೆಯೇ? ಕ್ರಿಕೆಟ್‌ನಲ್ಲಿ ಎಲ್ಇಡಿ ಸ್ಟಂಪ್‌ಗಳನ್ನು ಯಾರು ಕಂಡುಹಿಡಿದರು ಮತ್ತು ಅವುಗಳ ಬೆಲೆ ಎಷ್ಟು? ಇತ್ಯಾದಿ ಮಾಹಿತಿ ಇಲ್ಲಿದೆ…

ವರ್ಷಗಳ ಹಿಂದೆ ಕ್ರಿಕೆಟ್‌ ನಲ್ಲಿ ಬಳಸುತ್ತಿದ್ದ ಸ್ಟಂಪ್‌ ಗಳು ತುಂಬಾ ಸರಳವಾಗಿದ್ದವು. ಹಿಂದಿನ ಸ್ಟಂಪ್‌ ಗಳನ್ನು ಮರದಿಂದ ಮಾಡಿ ಅಲಂಕರಿಸಲಾಗುತ್ತಿತ್ತು. ನಂತರ ಬರಬರುತ್ತಾ ತಂತ್ರಜ್ಞಾನದ ಸಹಾಯದಿಂದ ಅದನ್ನು ಸುಧಾರಿಸಲಾಯಿತು. ಮೊದಲು ಅದರಲ್ಲಿ ಮೈಕ್ ಅಳವಡಿಸಲಾಯಿತು, ಆಮೇಲೆ ಪುಟ್ಟ ಕ್ಯಾಮೆರಾ ಕೂಡಿಸಲಾಯಿತು ಮತ್ತು ಈಗ ಎಲ್ಇಡಿ ಸ್ಟಂಪ್‌ ಗಳು ಬಂದಿವೆ.

ಎಲ್ಇಡಿ ಸ್ಟಂಪ್ಗಳನ್ನು ಆಸ್ಟ್ರೇಲಿಯಾದ ಕೈಗಾರಿಕೋದ್ಯಮಿ ಬ್ರಾಂಟೆ ಎಕೆರ್ಮನ್ ಕಂಡುಹಿಡಿದರು ಮತ್ತು ಈಗ ಆಫ್ರಿಕಾದ ಜಿಂಗ್ ವಿಕೆಟ್ ಸಿಸ್ಟಮ್ಸ್ ಕಂಪನಿಯು ಎಲ್ಇಡಿ ಸ್ಟಂಪ್ಗಳನ್ನು ತಯಾರಿಸುತ್ತದೆ. ಈ ಎಲ್‌ಇಡಿ ಸ್ಟಂಪ್‌ ಗಳನ್ನು ಐಸಿಸಿ 2013 ರ ವಿಶ್ವಕಪ್‌ ನಲ್ಲಿ ಮೊದಲು ಅಳವಡಿಸಿಕೊಂಡಿತು. ಅದಕ್ಕೂ ಮೊದಲು ಅವುಗಳನ್ನು ಆಸ್ಟ್ರೇಲಿಯಾದಲ್ಲಿ ನಡೆಯುವ ಪ್ರಸಿದ್ಧ ಬಿಗ್ ಬ್ಯಾಷ್ ಲೀಗ್‌ ನಲ್ಲಿ ಬಳಸಲಾಗುತ್ತಿತ್ತು.

ಬಿಗ್ ಬ್ಯಾಷ್ ಲೀಗ್‌ನಲ್ಲಿ ಯಶಸ್ಸಿನ ನಂತರ ಇದನ್ನು ಮೊದಲ ಬಾರಿಗೆ 2013 ರಲ್ಲಿ ಐಸಿಸಿ ಬಳಸಲಾಯಿತು. ಎಲ್‌ಇಡಿ ಸ್ಟಂಪ್‌ ಗಳನ್ನು ಪ್ರಸ್ತುತ ಏಕದಿನ ಮತ್ತು ಟಿ 20 ಗಳಲ್ಲಿ ಬಳಸಲಾಗುತ್ತದೆ. ಅಂಪೈರ್ ಗಳಿಗೆ ತೀರ್ಪು ನೀಡಲು ತುಂಬಾ ಸಹಾಯ ಮಾಡುವ ಈ ಸ್ಟಂಪ್‌ ಗಳು ವಿಶ್ವದ ಅತ್ಯಂತ ದುಬಾರಿ ಸ್ಟಂಪ್‌ಗಳಾಗಿವೆ.

29.50 ಲಕ್ಷ!
ನೀವು ನಂಬಲಿಕ್ಕಿಲ್ಲ, ಸ್ಟಂಪ್ ಗಳ ಒಂದು ಸಂಪೂರ್ಣ ಸೆಟ್ 40,000 ಯುಎಸ್ ಡಾಲರ್! ಅಂದರೆ ಸುಮಾರು 28 ಲಕ್ಷ ರೂಪಾಯಿಗಳು! ಬೇಲ್ಸ್ ನಲ್ಲಿರುವ ಮೈಕ್ರೊಪ್ರೊಸೆಸರ್ ಚಲನೆಯನ್ನು ಗ್ರಹಿಸುತ್ತದೆ. ಉತ್ತಮ ಗುಣಮಟ್ಟದ ಬ್ಯಾಟರಿಗಳು ಬೆಲ್ಸ್ ಹಾಗೂ ಸ್ಟಂಪ್‌ ಗಳಲ್ಲಿ ಇರುತ್ತವೆ. ಚೆಂಡು ಬೇಲ್ಸ್ ಗೆ ಬಡಿದಾಗಲೆಲ್ಲಾ ಕೆಂಪು ಬೆಳಕು ಸ್ವಯಂಚಾಲಿತವಾಗಿ ಅದರಲ್ಲಿ ಉರಿಯುತ್ತದೆ.

ಒಂದು ಬೇಲ್ ಐಫೋನ್ ಗೆ ಸಮ!
ಸ್ಟಂಪ್‌ ಗಳ ಸೆನ್ಸಾರ್ ನ ನಿಖರತೆಯು ಹೇಗಿರುತ್ತದೆಂದರೆ, ಸೆಕೆಂಡಿನ 1000 ಭಾಗ ಮಾಡಿ ಅದರ ಒಂದು ಭಾಗದಲ್ಲಿ ನಡೆಯುವ ಚಲನವಲನ ಕೂಡ ಪತ್ತೆ ಮಾಡುತ್ತದೆ! ಉತ್ತಮ ಗುಣಮಟ್ಟದ ಬ್ಯಾಟರಿಗಳು ಬೆಲ್‌ ಗಳೊಂದಿಗೆ ಸ್ಟಂಪ್‌ ಗಳಲ್ಲಿ ಇರುತ್ತವೆ. ಒಂದು ಬೇಲ್ ಕಿಮ್ಮತ್ತು ಒಂದು ಐಫೋನ್‌ ಗೆ ಸಮ!

ಭಾರತದಲ್ಲಿ ಮೊದಲ ಬಾರಿಗೆ ಈ ಸ್ಟಂಪ್‌ ಗಳನ್ನು 2016 ರ ಅಂತರರಾಷ್ಟ್ರೀಯ ಪಂದ್ಯಾವಳಿ ಐಸಿಸಿ ವರ್ಲ್ಡ್ ಕಪ್ 20-20 ರಲ್ಲಿ ಬಳಸಲಾಯಿತು. ಹೆಚ್ಚಿನ ಬೆಲೆಯ ಕಾರಣ ಈ ಸ್ಟಂಪ್‌ಗಳು ಅನೇಕ ಗುಣಲಕ್ಷಣಗಳನ್ನು ಹೊಂದಿವೆ. ಮಾಹಿತಿಯ ಪ್ರಕಾರ, ಈ 2012 ರಲ್ಲಿ, ಈ ಸ್ಟಂಪ್‌ಗಳನ್ನು ಮೊದಲು ಆಸ್ಟ್ರೇಲಿಯಾದ ಕ್ರಿಕೆಟ್ ಲೀಗ್ ಅಂದರೆ ಬಿಗ್ ಬ್ಯಾಷ್ ಟಿ 20 ಯಲ್ಲಿ ಬಳಸಲಾಯಿತು.

ಸ್ಟಂಪ್‌ ಗಳ ವಿಶೇಷತೆ :
1 ಈ ಸ್ಟಂಪ್‌ ಗಳನ್ನು ದಕ್ಷಿಣ ಆಸ್ಟ್ರೇಲಿಯಾದ ಉತ್ಪಾದಕ ಜಿಂಗ್ ಇಂಟರ್‌ನ್ಯಾಷನಲ್ ತಯಾರಿಸುತ್ತದೆ, ಇದನ್ನು ಜಿಂಗ್ ವಿಕೆಟ್ ಸಿಸ್ಟಮ್ ಎಂದು ಕರೆಯಲಾಗುತ್ತದೆ.
2 ಬ್ರಾಂಟೆ ಎಕೆರ್ಮನ್ ಇದನ್ನು ತಯಾರಿಸಲು ಮೂರು ವರ್ಷಗಳ ಸಂಶೋಧನೆ ಮಾಡಬೇಕಾಯಿತು. ಅದರ ನಂತರವೇ ಅವರ ಕನಸು ನನಸಾಯಿತು.
3 ಯುಎಇಯಲ್ಲಿ ನಡೆದ ಅಂಡರ್-19 ಕ್ರಿಕೆಟ್ ವಿಶ್ವಕಪ್ ನ ಸೆಮಿಫೈನಲ್ ಮತ್ತು ಅಂತಿಮ ಪಂದ್ಯಗಳಲ್ಲಿ ಇದನ್ನು ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಬಳಸಿತು.
4 ಐಸಿಸಿ ಅಂಡರ್-19 ವಿಶ್ವಕಪ್ ಜೊತೆಗೆ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ 20 ಪಂದ್ಯಗಳಲ್ಲಿಯೂ ಈ ಸ್ಟಂಪ್‌ಗಳನ್ನು ಬಳಸಲಾಯಿತು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಏಳನೇ ಋತುವಿನಿಂದ ಭಾರತ ಇದನ್ನು ಬಳಸಲು ಪ್ರಾರಂಭಿಸಿತು.